ಉದ್ಘಾಟನೆಯಾದ ಕ್ಷಣವೇ ಕುಸಿದು ಬಿದ್ದ ಸೇತುವೆ ; ವೀಡಿಯೋ ವೈರಲ್!

Democratic Republic of Congo : ಸರ್ಕಾರದಿಂದ ಮಾಡಲಾಗುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾರ್ವಜನಿಕರಲ್ಲಿ ಅಸಹನೆ ಇದ್ದೇ ಇದೆ. ಕೆಲವು ಕಾಮಕಾರಿಗಳ ಗುಣಮಟ್ಟ ಕಳಪೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣ.

ಇದಕ್ಕೆ ಸರಿಯಾಗಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನಡೆದ ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: https://vijayatimes.com/goa-politics-gets-a-point/


ಹೌದು, ಉದ್ಘಾಟನೆ ವೇಳೆ ಸೇತುವೆ ಕುಸಿದ ವೀಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡುತ್ತಿದ್ದು, ನೆಟ್ಟಿಗರು ಸೇತುವೆ ನಿರ್ಮಾಣದ ಗುಣಮಟ್ಟವನ್ನು ಪ್ರಶ್ನಿಸಿ ಟ್ವೀಟ್(Tweet) ಮಾಡಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸೇತುವೆಯನ್ನು ಉದ್ಘಾಟಿಸಲು ಅಧಿಕಾರಿಗಳು ಜಮಾಯಿಸುತ್ತಿದ್ದಂತೆ ಸೇತುವೆ ಕುಸಿದಿದೆ.

ಇದರ ವೀಡಿಯೋಗಳು ವೈರಲ್ ಆಗಿರುವುದು ಮಾತ್ರವಲ್ಲದೇ ಸೇತುವೆಯ ಗುಣಮಟ್ಟದ ಬಗ್ಗೆ ಜನರು ಅಪಹಾಸ್ಯ ಮಾಡುತ್ತಿದ್ದಾರೆ. ಘಟನೆಯ ವಿವರ ಹೀಗಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸೇತುವೆಯೊಂದನ್ನು ಉದ್ಘಾಟಿಸಲು ಅಧಿಕಾರಿಗಳು ತಯಾರಾಗಿದ್ದು, ಉದ್ಘಾಟನೆ ಸಲುವಾಗಿ ರಿಬ್ಬನ್ ಕತ್ತರಿಸುವ ವೇಳೆಗೆ ಸರಿಯಾಗಿ ಸೇತುವೆ ಕುಸಿದಿದೆ.

ಈ ಕಿರು ಸೇತುವೆಯನ್ನು ಮಳೆಗಾಲದಲ್ಲಿ ಸ್ಥಳೀಯರಿಗೆ ನದಿ ದಾಟಲು ನಿರ್ಮಿಸಲಾಗಿತ್ತು ಎಂದು ವರದಿಗಳು(Reports) ತಿಳಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಸೇತುವೆಯನ್ನು ಉದ್ಘಾಟಿಸಲು ಅಧಿಕಾರಿಗಳು ಸೇತುವೆ ಮೇಲೆ ನಿಂತಿರುವುದು ಕಾಣಿಸುತ್ತದೆ.

ಸೇತುವೆಯ ಒಂದು ಬದಿಯಲ್ಲಿ ಕೆಂಪು ರಿಬ್ಬನ್ ಅನ್ನು ಕಟ್ಟಲಾಗಿದ್ದು, ಅದನ್ನು ಮಹಿಳಾ ಅಧಿಕಾರಿಯೊಬ್ಬರು ಕತ್ತರಿಸಿದ್ದಾರೆ. ಆದರೆ ರಿಬ್ಬನ್‌ಗೆ ಕತ್ತರಿ ತಾಗುತ್ತಲೇ ಸೇತುವೆ ಕುಸಿಯಲಾರಂಭಿಸಿದೆ. ಇನ್ನು, ಸೇತುವೆ ಕುಸಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳನ್ನು ಸೇತುವೆಯಿಂದ ಎಳೆದು ರಕ್ಷಿಸಿದ್ದಾರೆ.

ಇದನ್ನೂ ಓದಿ : https://vijayatimes.com/jacqueline-fernandez-rs-200-crore-extortion-case/

ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎನ್ನಲಾಗಿದೆ. ಆದರೆ ಉದ್ಘಾಟನೆಯಾಗಿ ಒಂದು ಕ್ಷಣವೂ ನಿಲ್ಲದ ಸೇತುವೆ ಕುಸಿದು 2 ಭಾಗವಾಗಿರುವುದು, ಸರ್ಕಾರದ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಅಪನಂಬಿಕೆ ಮೂಡುವಂತೆ ಮಾಡಿದೆ.
Exit mobile version