ಬಿ.ಆರ್.ಟಿ 360 ವರ್ಚ್ಯುವಲ್ 3ಡಿ ಚಿತ್ರ ಲೋಕಾರ್ಪಣೆ

ಚಾಮರಾಜನಗರ, ಫೆ. 08: ಕರ್ನಾಟಕ ಸೇರಿದಂತೆ ದೇಶದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ತನ್ನದೇ ಆಕರ್ಷಣೆಯನ್ನು ಹೊಂದಿರುವ BRT ಹುಲಿ ಸಂರಕ್ಷಿತ ಪ್ರದೇಶ ಇದೀಗ ಮತ್ತಷ್ಟು ‌ಆಕರ್ಷಣೆಗೊಂಡಿದೆ.

ಇಷ್ಟು ದಿನಗಳ ಕಾಲ ಸಫಾರಿ ವೇಳೆ ಹುಲಿಗಳನ್ನು ನೋಡಿ ಖುಷಿ ಪಡುತ್ತಿದ್ದ ಪ್ರವಾಸಿಗರು ಇನ್ಮುಂದೆ 3ಡಿ ಚಿತ್ರದ ಮೂಲಕ ಹುಲಿಗಳ ದರ್ಶನ ಪಡೆಯ ಬಹುದಾಗಿದೆ. ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಕುರಿತ ವರ್ಚುವಲ್ ರಿಯಾಲಿಟಿ ತ್ರಿಡಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ವಿಶೇಷ ತ್ರಿಡಿ ಚಿತ್ರ ವೀಕ್ಷಿಸಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ವಿಶೇಷ 3ಡಿ ಚಿತ್ರವನ್ನು ಲೋಕಾರ್ಪಣೆ ಮಾಡಿದರು. ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶವು ಸುಂದರ ಭೂಪ್ರದೇಶ ಮತ್ತು ವ್ಯಾಪಕ ಜೀವವೈವಿಧ್ಯತೆ ಹೊಂದಿದೆ.

ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಹಲವು ಸ್ಥಳಗಳು ಬಹಳ ಸುಂದರವಾಗಿವೆ. ಆದರೆ ಇದು ಬಿಆರ್ ಟಿಯ ಕೋರ್ ಪ್ರದೇಶದಲ್ಲಿ ಬರುವಯದರಿಂದ ಯಾವುದೇ ಪ್ರವಾಸಿಗರಿಗೆ ಅಲ್ಲಿಗೆ ಹೋಗಲು ಅವಕಾಶವಿರುವುದಿಲ್ಲ. ಹೀಗಾಗಿ ಅಂತಹ ಪ್ರೇಕ್ಷಣೀಯ ಸ್ಥಳಗಳ ವರ್ಚ್ಯುಯಲ್ ಅನುಭವ ಹೊಂದಲು ತ್ರಿಡಿ ವರ್ಚ್ಯುಯಲ್ ರಿಯಾಲಿಟಿ ಫಿಲ್ಮ್ ಅನ್ನು ಬಿಆರ್ ಟಿ 360 ಎಂದು ಕರೆಯಲಾಗಿದೆ. ಇದನ್ನು ಕೆ.ಗುಡಿಯಲ್ಲಿರುವ ಮಾಹಿತಿ ಕೇಂದ್ರದಲ್ಲಿ ಇಡಲಾಗುತ್ತದೆ ಪ್ರವಾಸಿಗರು/ ಸಾರ್ವಜನಿಕರು ಈ ತ್ರಿಡಿ ಚಲನಚಿತ್ರವನ್ನು ವಿರ್ ಹೆಡ್ ಸೆಟ್ ಮೂಲಕ ಅನುಭವಿಸಬಹುದು.

ಈ ಚಿತ್ರವು ಪ್ರವಾಸಿಗರನ್ನು ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಆಕರ್ಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡಸಂಪಿಗೆ, ಹೊನ್ನಮಟ್ಟಿ, ಜೋಡಿಗೆರೆ ಸೇರಿದಂತೆ ಕೆಲವು ಸುಂದರ ಸ್ಥಳಗಳ ಅನುಭವವನ್ನು ಪಡೆಯಬಹುದಾಗಿದೆ.

Exit mobile version