ಬೆಂಗಳೂರು : ರಾಜ್ಯ ಬಿಜೆಪಿ(State BJP) ಸರ್ಕಾರ ತನ್ನ ಆಡಳಿತಾವಧಿಯ ಕೊನೆಯ ಬಜೆಟ್‌ನಲ್ಲಿ ಮಹಿಳೆಯರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಇಂದು ವಿಧಾನಸೌಧದಲ್ಲಿ ಮಂಡಸಿರುವ ರಾಜ್ಯ ಬಜೆಟ್‌ನಲ್ಲಿ (Karnataka Budget 2023) ಸ್ತ್ರೀಸಬಲೀಕರಣಕ್ಕೆ ಹೆಚ್ಚಿನ ಒತ್ತು (Budget huge contribution womens) ನೀಡಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಮಹಿಳೆಯರಿಗೆ ನೀಡಿರುವ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ.
- ರಾಜ್ಯದ ಎಲ್ಲಾ ಪದವಿಪೂರ್ವ ಮತ್ತು ಪದವಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ
- ವಿದ್ಯಾರ್ಥಿಗಳ ಅನುಕೂಲಕ್ಕಾಗಿ 100 ಕೋಟಿ ವೆಚ್ಚದಲ್ಲಿ 500 ಬಸ್‌ಗಳ ಖರೀದಿ
- ಯುವಸ್ನೇಹಿ ಯೋಜನೆಯಡಿ ಯುವಜನತೆಗೆ ಒಂದು ಬಾರಿ 2000 ರೂಪಾಯಿ ಸಹಾಯಧನ
- ರಾಜ್ಯದ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್‌ಪಾಸ್(Bus Pass)
- 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ
- ಭೂರಹಿತ ಮಹಿಳಾ ಕಾರ್ಮಿಕರಿಗೆ ಮಾಸಿಕ 500ರೂಪಾಯಿ ಸಹಾಯಧನ
- ನೇಕಾರ ಸಮ್ಮಾನ್ ಸಹಾಯಧನ 3000 ರೂಪಾಯಿಗಳಿಂದ 5000ಕ್ಕೆ ಹೆಚ್ಚಳ

- ಮಹಿಳಾ ಉದ್ಯಮಿಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಸಾಲ
- ಮಕ್ಕಳ ಆರೋಗ್ಯ ತಪಾಸಣೆಗೆ ʼವಾತ್ಸಲ್ಯʼ ಯೋಜನೆ
- ರಾಜ್ಯದ ಎಲ್ಲಾ ಶಾಲಾ–ಕಾಲೇಜು ವಿದ್ಯಾರ್ಥಿನಿಯವರಿಗೆ ಉಚಿತ ಬಸ್‌ಪಾಸ್
- ಆಸಿಡ್(Acid) ಸಂತ್ರಸ್ಥೆಯರ ಸಹಾಯಧನ 3 ಸಾವಿರದಿಂದ 10,000ಕ್ಕೆ ಹೆಚ್ಚಳ
- ರಾಜ್ಯದಲ್ಲಿ ಎರಡು ಹೊಸ ಎನ್‌ಸಿಸಿ(NCC) ಘಟಕಗಳ ಸ್ಥಾಪನೆ
- ರಾಜ್ಯ ಎಲ್ಲಾ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ದೈಹಿಕ ಶಕ್ತಿ ಬಲವರ್ಧನೆಗೆ ಯೋಗ ಕಾರ್ಯಕ್ರಮ

- ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ನೆರವಾಗುವಂತ ಮೂಲಸೌಕರ್ಯ ಅಭಿವೃದ್ದಿ
- ರಾಜ್ಯದಲ್ಲಿ ತಾಯಿ ಮತ್ತು ಮಕ್ಕಳ ಅಭಿವೃದ್ದಿಗಾಗಿ 10 ಆಸ್ಪತ್ರೆಗಳನ್ನು 100 ಕೋಟಿ ವೆಚ್ಚದಲ್ಲಿ ಸ್ಥಾಪನೆ
- ಸ್ತನ ಕ್ಯಾನ್ಸರ್‌ಮತ್ತು ಗರ್ಭ ಕ್ಯಾನ್ಸರ್ ಪತ್ತೆಗೆ ಜೀವಸುಧೆ ಎಂಬ ವಿಶೇಷ ಯೋಜನೆ
- ಸ್ತ್ರೀ ಸಾಮರ್ಥ್ಯ ಯೋಜನೆಗೆ 5000ಕೋಟಿ ಮೀಸಲು
- 8ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
- ಗ್ರುಹಿಣಿ ಶಕ್ತಿ ಯೋಜನೆ ಜಾರಿಗೊಳಿಸಲು ನಿರ್ಧಾರ