ಇಲ್ಲಿ ಪೂಜೆ ಸಲ್ಲುವುದು ದೇವರಿಗಲ್ಲ, ಬದಲಾಗಿ ರಾಯಲ್‌ ಎನ್‌ಫೀಲ್ಡ್‌ ಬೈಕ್ ಗೆ! : ಇದರ ಹಿಂದಿದೆ ರೋಚಕ ಕಥೆ.

Jodhpur: ಭಾರತ (India) ದೇಶ ವಿಶಿಷ್ಟ ಸಂಪ್ರದಾಯಗಳು (Tradition) ಮತ್ತು ಆಚರಣೆಗಳಿಗೆ ಜನಪ್ರಿಯವಾಗಿದೆ. ಇಲ್ಲಿ ದೇಶದ ಉದ್ದಗಲಕ್ಕೂ ನಮಗೆ ಅನೇಕಾನೇಕ ದೇವಾಲಯಗಳು ಕಾಣ ಸಿಗುತ್ತವೆ.

ಈ ದೇಗುಲಗಳೆಲ್ಲವೂ ಕೇವಲ ಧಾರ್ಮಿಕ ಸ್ಥಳಗಳು (Religious places) ಮಾತ್ರವಲ್ಲ, ನಮ್ಮ ಶ್ರೀಮಂತ ಸಂಸ್ಕೃತಿಯ ಪ್ರತೀಕವೂ ಹೌದು.

Bullet Baba

ನಮ್ಮ ದೇಶದ ಐತಿಹಾಸಿಕ (Historical) ವಾಸ್ತು ಶೈಲಿಗೆ ಸಾಕ್ಷಿಯಾಗಿರುವ ಬಹಳಷ್ಟು ದೇಗುಲಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು ಇಂದಿಗೂ ನೋಡುಗರ ಕಣ್ಮನ ಸೆಳೆಯುತ್ತವೆ.

ಮೊದಲೇ ಹೇಳಿದಂತೆ, ಭಾರತದಲ್ಲಿ ವಿಶಿಷ್ಟ ಮತ್ತು ವಿಭಿನ್ನ ಸಂಪ್ರದಾಯಗಳಿವೆ ನಿಜ, ಆದರೆ ಜೊತೆಗೆ ಕೆಲವೊಂದು ವಿಚಿತ್ರ ಆಚರಣೆಗಳು ಕೂಡ ಇವೆ.

https://vijayatimes.com/pfi-protest-turns-to-voilence/

ಹೌದು, ನಮ್ಮ ಜನರಲ್ಲಿ ದೇವತೆಗಳ ಪೂಜೆಯನ್ನು ಕೂಡ ಮೀರಿದ, ಕೆಲವು ಧಾರ್ಮಿಕ ನಂಬಿಕೆಗಳಿವೆ. ಮತ್ತು ಕೆಲವು ದೇಗುಲಗಳು ಅಂತಹ ಅಸಾಮಾನ್ಯ ನಂಬಿಕೆಗಳ (Trust) ಆಚರಣೆಗೆ ಹೆಸರುವಾಸಿಯಾಗಿವೆ ಕೂಡ.

ಅಂತಹ ವಿಚಿತ್ರ ದೇವಾಲಯಗಳಲ್ಲಿ ಒಂದು (Bullet Baba Temple) ಬುಲೆಟ್ ಬಾಬಾ ದೇವಸ್ಥಾನ!


ಹೌದು, ಜೋಧ್‍ಪುರದಿಂದ (Jodhpur) ಸುಮಾರು 40 ಕಿ.ಮೀ ದೂರದಲ್ಲಿರುವ ಬಂದಾಯಿ (Bandayi) ಗ್ರಾಮದಲ್ಲಿ ಬುಲೆಟ್ ಬಾಬಾ ದೇವಸ್ಥಾನವಿದೆ. ದೇವಸ್ಥಾನ ಹೆಸರನ್ನು ಕೇಳಿದರೆ ಆಶ್ಚರ್ಯವಾಗುತ್ತದೆ ಅಲ್ಲವೇ?

ಹೌದು, ವಿಚಿತ್ರವೆಂದರೆ ಇಲ್ಲಿ ದೇವರ ಮೂರ್ತಿಯನ್ನು ಪೂಜಿಸುವುದಿಲ್ಲ, ಬದಲಿಗೆ ರಾಯಲ್ ಎನ್‍ಫೀಲ್ಡ್ ಬುಲೆಟ್ ಅನ್ನು ಪೂಜಿಸುತ್ತಾರೆ.

ಈ ಬುಲೆಟ್ ಇಲ್ಲಿನ ಭಕ್ತರ ಪಾಲಿಗೆ ಬರೀ ವಾಹನವಲ್ಲ (Vehicle). ಇದು ದೇವರ ಪ್ರತಿರೂಪ. ಅದೂ ಅಲ್ಲದೆ, ಅದೆಷ್ಟೋ ಪವಾಡಗಳನ್ನು ಮಾಡುವ ಶಕ್ತಿ ಈ ಬೈಕ್‌ಗೆ ಇದೆಯಂತೆ.

ಜೊತೆಗೆ, ಚಾಲಕನೇ ಇಲ್ಲದೆ ಈ ಬೈಕ್ (Bike) ರಾತ್ರಿ ಹೊತ್ತು ಸಂಚರಿಸುತ್ತದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ.

ಈ ಕುರಿತು ಸ್ಥಳೀಯರು ಹೇಳುವ ಕಥೆ ಹೀಗಿದೆ: ಡಿಸೆಂಬರ್ 2, 1991ರ ಮುಂಜಾನೆ, ಅಲ್ಲೆಲ್ಲಾ ಮಂಜು ಆವೃತ್ತವಾಗಿತ್ತು.

ಈ ವೇಳೆ, ಓಂ ಸಿಂಗ್ ರಾಥೋರ್ ಎಂಬವರು ತಮ್ಮ ರಾಯಲ್‌ ಎನ್‌ಫೀಲ್ಡ್‌ (Royal Enfield) ಬೈಕನ್ನೇರಿ ಸ್ನೇಹಿತನೊಂದಿಗೆ ಹೋಗುತ್ತಿದ್ದರು. ಆದರೆ, ದಾರಿ ಮಧ್ಯೆ ಒಂದು ದುರಂತ ಸಂಭವಿಸಿತ್ತು.

ದಟ್ಟ ಮಂಜು ಕವಿದಿದ್ದರಿಂದ ದಾರಿ ಕಾಣದೆ ಬೈಕ್ ಮರಕ್ಕೆ ಡಿಕ್ಕಿಯಾಗಿ ಓಂ ಸಿಂಗ್ ರಾಥೋರ್ ಸಾವನ್ನಪ್ಪಿದ್ದರು. ಹಿಂಬದಿಯಲ್ಲಿದ್ದ ಸ್ನೇಹಿತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.

ಇದನ್ನು ಕಂಡ ಜನ ತಕ್ಷಣ ಪೊಲೀಸರಿಗೆ (Police) ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಓಂ ಸಿಂಗ್ ಅವರನ್ನು ಆಸ್ಪತ್ರೆಗೆ (Hospital) ಕರೆತಂದಿದ್ದರಾದರೂ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿತ್ತು.

https://vijayatimes.com/bengaluru-police-detained-congress-leaders/

ಬಳಿಕ ಬೈಕನ್ನು ಪೊಲೀಸ್ ಠಾಣೆಗೆ (Police Station)ತಂದು ನಿಲ್ಲಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.

ಆದರೆ, ಮರುದಿನ ಪೊಲೀಸರೇ ದಂಗಾಗುವ ಘಟನೆಯೊಂದು ನಡೆದಿತ್ತಂತೆ. ಅದೇನೆಂದರೆ, ಓಂ ಸಿಂಗ್ ಬೈಕ್ ಠಾಣೆಯಲ್ಲಿ ಇರಲಿಲ್ಲ. ಹುಡುಕಿದಾಗ ಆ ಬೈಕ್ ಮತ್ತೆ ಅಪಘಾತ ನಡೆದ ಸ್ಥಳದಲ್ಲೇ ಬಿದ್ದಿತ್ತಂತೆ.

ಠಾಣೆಯಲ್ಲಿದ್ದ ಬೈಕ್ ಅಪಘಾತ ನಡೆದ ಸ್ಥಳದಲ್ಲಿ ಪತ್ತೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಪೊಲೀಸರನ್ನೂ ಕಾಡಲಾರಂಭಿಸಿತ್ತಂತೆ. ಯಾಕೆಂದರೆ, ಠಾಣೆಗೂ ಅಪಘಾತ ನಡೆದ ಸ್ಥಳಕ್ಕೂ ಸುಮಾರು ಐದಾರು ಕಿಲೋಮೀಟರ್ ಇತ್ತು.

ಜೊತೆಗೆ, ಬೈಕನ್ನು ಠಾಣೆಗೆ ತಂದು ನಿಲ್ಲಿಸಿದ್ದ ವೇಳೆ ಪೊಲೀಸರು ಅದರ ಪೆಟ್ರೋಲ್ (Petrol) ಖಾಲಿ ಮಾಡಿದ್ದರು ಮತ್ತು ಯಾರೂ ಬೈಕ್ ತೆಗೆದುಕೊಂಡು ಹೋಗಬಾರದೆಂಬ ಕಾರಣಕ್ಕೆ ಚೈನ್‌ನಲ್ಲಿ ಬಿಗಿದಿದ್ದರು.

ಆದರೂ ಈ ಬೈಕ್ ಹೇಗೆ ಇಲ್ಲಿಗೆ ಬಂತು ಎಂಬುದೇ ಪೊಲೀಸರು ಸೇರಿ ಜನರನ್ನು ಕಾಡಿತ್ತಂತೆ.

ಹೀಗೆ, ಬೈಕ್ ಪದೇ ಪದೇ ಅಪಘಾತ (Accident) ನಡೆದ ಸ್ಥಳಕ್ಕೇ ಬರುತ್ತಿದ್ದದ್ದು ಸ್ಥಳೀಯರಲ್ಲಿ ಆತಂಕ ತಂದಿತ್ತು. ಇದರಿಂದ ಊರಿನ ಹಿರಿಯರೆಲ್ಲಾ ಸೇರಿ ಈ ಬೈಕನ್ನು ನಮಗೆ ಹಸ್ತಾಂತರಿಸಿ.

ನಾವು ಇದಕ್ಕೊಂದು ದೇವಸ್ಥಾನ ಕಟ್ಟಿ ಪೂಜಿಸುತ್ತೇವೆ ಎಂದು ಓಂ ಸಿಂಗ್ (Om Singh) ಕುಟುಂಬಸ್ಥರಿಗೆ ಕೇಳಿಕೊಂಡಿದ್ದರು. ಇದಕ್ಕೆ ಸಮ್ಮತಿಸಿದ್ದ ಕುಟುಂಬಸ್ಥರು ಬೈಕನ್ನು ಊರಿನ ಹಿರಿಯರಿಗೆ ಹಸ್ತಾಂತರಿಸಿದ್ದರು.

ಹೀಗೆ ದೇವಸ್ಥಾನವೂ (Temple) ನಿರ್ಮಾಣವಾಗಿತ್ತು.

ಇಂದಿಗೂ ಸಹ, ಈ ದಾರಿಯಲ್ಲಿ ಸಾಗುವಾಗ ಈ ದೇವಾಲಯಕ್ಕೆ (Bullet Baba Temple) ಕೈ ಮುಗಿದು ಹೋಗದೇ ಇದ್ದರೆ ವಾಹನ ಸವಾರರು ಖಂಡಿತಾ ಏನಾದರೂ ಅಪಾಯಕ್ಕೆ ತುತ್ತಾಗುತ್ತಾರೆ ಎಂಬ ನಂಬಿಕೆಯೂ ಇಲ್ಲಿನ ಜನರದ್ದು.

ಹೀಗಾಗಿ, ಈ ದೇವಾಲಯದ ಮುಂದೆ ಸಾಗುವ ಎಲ್ಲಾ ವಾಹನ ಚಾಲಕರು ಒಮ್ಮೆ ಹಾರ್ನ್‌ (Horn) ಹಾಕಿ ಬುಲೆಟ್ ಬಾಬಾಗೆ ನಮಿಸುತ್ತಾರೆ. ಅಂದು ಬೈಕ್ ಡಿಕ್ಕಿಯಾದ ಮರಕ್ಕೂ ಈಗಲೂ ಪೂಜೆ ನಡೆಯುತ್ತಿದೆ.

ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಜನ ಈ ಮರಕ್ಕೆ ದಾರವನ್ನು ಕಟ್ಟಿ ನಮಿಸುತ್ತಾರೆ. ಜೊತೆಗೆ, ಓಂ ಸಿಂಗ್ ಅವರ ಮೂರ್ತಿಗೂ ಇಲ್ಲಿ ಪೂಜೆ ಸಲ್ಲಿಸಲಾಗುತ್ತಿದ್ದು, ಮದ್ಯ, ಸಿಗರೇಟುಗಳನ್ನು ಅರ್ಪಿಸಿ ಭಕ್ತರು (Devotees) ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.


ಆದರೆ, ಈ ರೀತಿ ಬೈಕೊಂದು ಚಾಲಕರೇ ಇಲ್ಲದೆ ಚಲಿಸುವುದು, ಪದೇ ಪದೇ ತನ್ನ ಪವಾಡ ತೋರಿಸುತ್ತದೆ,

ಎಂಬುದು ತರ್ಕಕ್ಕೆ ನಿಲುವುದಿಲ್ಲ ನಿಜ. ಆದರೆ, ಜನರ ಭಕ್ತಿ, ಶೃದ್ಧೆ, ನಂಬಿಕೆಯನ್ನು ನಾವು ಗೌರವಿಸಬೇಕಾಗಿದೆ. ತರ್ಕಕ್ಕೂ ಮಿಗಿಲಾಗಿ, ಇದೊಂದು ಭಾವನಾತ್ಮಕ ವಿಷಯ ಎಂದು ಪರಿಗಣಿಸುವುದೇ ಸೂಕ್ತ.

ಪವಿತ್ರ

Exit mobile version