ಕಂದಕಕ್ಕೆ ಬಸ್ ಉರುಳಿದ ಪರಿಣಾಮ 29 ಪ್ರಯಾಣಿಕರು ಸಾವು

ಲಿಮಾ ಸೆ 1 : ಕಂದಕಕ್ಕೆ ಬಸ್ ಉರುಳಿದ ಪರಿಣಾಮ 29 ಪ್ರಯಾಣಿಕರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪೆರುವಿ ಲಿಮಾದಲ್ಲಿ ನಡೆದಿದೆ. ಘಟನೆಯಲ್ಲಿ  ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೇರುವಿನ ರಾಜಧಾನಿ ಲಿಮಾ ದಿಂದ 60 ಕಿ.ಮೀ ಪೂರ್ವಕ್ಕೆ ಕ್ಯಾರೆಟೆರಾ ಸೆಂಟ್ರೆಲ್ ರಸ್ತೆಯ ಕಿರಿದಾದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಬಸ್ ನಲ್ಲಿ ಒಟ್ಟು 63 ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಇದರಲ್ಲಿ 3 ವರ್ಷದ ಬಾಲಕಿ ಮತ್ತು 6 ವರ್ಷದ ಬಾಲಕ ಸೇರಿ 29 ಮಂದಿ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಈ ಅಫಘಾತಕ್ಕೆ ಚಾಲಕನ ಅತವೇಗವೇ ಕಾರಣ ಎಂದು ತಿಳಿದು ಬಂದಿದೆ ಅತಿವೇಗದಲ್ಲಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಬಂಡೆಕಲ್ಲಿಗೆ ಢಿಕ್ಕಿ ಹೊಡೆದಿದು ಸುಮಾರು 650 ಅಡಿ ಆಳದ ಹೊಂಡಕ್ಕೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Exit mobile version