ಕೆಜಿಗಟ್ಟಲೇ ಮಾವಿನ ಹಣ್ಣನ್ನು ಈಗ EMI ನಲ್ಲಿ ಖರೀದಿ ಮಾಡಬಹುದು; ಹೇಗೆ ಗೊತ್ತಾ?

Mangoes On EMI : ರುಚಿ ಭರಿತವಾದ ಮಾವಿನ ಹಣ್ಣನ್ನು ಸವಿಯಲು ತಕ್ಷಣವೇ ಹಣ ಕೊಟ್ಟು ಖರೀದಿ ಮಾಡಿ ಸವಿಯಬೇಕು ಎಂಬುದೇನಿಲ್ಲ! ಬದಲಾಗಿ ಈಗ ನಿಮಗೆ ಎಷ್ಟು ಬೇಕೋ ಅಷ್ಟು ಹಣ್ಣನ್ನು ತಿಂಗಳ EMI ಪಾವತಿ ಮಾಡುವ ಮೂಲಕ (Buying mangoes on EMI) ಸವಿಯಬಹುದಾಗಿದೆ.

ಮಹಾರಾಷ್ಟ್ರ (Maharashtra) ರಾಜ್ಯದ ಪುಣೆಯಲ್ಲಿ ಈ ರೀತಿಯ ವಿಭಿನ್ನ ಮಾರಾಟವನ್ನು ಮಾಡಲಾಗುತ್ತಿದೆ. ಮೊದಲು ತಿನ್ನಿರಿ,

ತದನಂತರ ಪಾವತಿಸಿ ಎಂಬ ಯೋಜನೆಯಡಿ ಇಲ್ಲಿನ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ಕಾಲ ಬಂತು ಎಂದರೆ ಅಲ್ಲಿ ಮಾವಿನ ಹಣ್ಣಿನ ಘಮಲು ಎಲ್ಲೆಡೆ ಪಸರಿಸಲು ಪ್ರಾರಂಭಿಸುತ್ತದೆ.

ಬೇಸಿಗೆ ಕಾಲಕ್ಕೆ ಮಾವಿನ ಹಣ್ಣನ್ನು ಸವಿಯಲು ಅದೆಷ್ಟೋ ಜನರು ಹಲವು ಬಗೆಯ ಮಾವಿನ ಹಣ್ಣು ಮಾರುಕಟ್ಟೆಗೆ ಬಂದರೆ ಸಾಕಪ್ಪ ಎಂದು ತುದಿಗಾಲಿನಲ್ಲಿ ನಿಂತಿರುತ್ತಾರೆ.

ಪುಣೆಯ ವ್ಯಾಪಾರಿಗಳಯ EMI ನಲ್ಲಿ ಮಾವಿನಹಣ್ಣುಗಳನ್ನು ನೀಡುವಲ್ಲಿ ಸದ್ಯ ಹೆಚ್ಚು ಖ್ಯಾತಿಯನ್ನು ಗಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/sudeep-vs-dk-shivakumar/

EMI ನಲ್ಲಿ ಅವರ ಔಟ್ಲೆಟ್ನಲ್ಲಿ ಹಣ್ಣುಗಳನ್ನು ಖರೀದಿಸುವ ವಿಧಾನವು ಮೊಬೈಲ್ ಫೋನ್ಗಳ ಮೂಲಕ ತಿಂಗಳ ಕಂತುಗಳಲ್ಲಿ ಖರೀದಿಸಲು ಅನುಮತಿ ನೀಡುತ್ತದೆ.

ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು (Credit card) ಬಳಸಬೇಕಾಗುತ್ತದೆ ಮತ್ತು ಖರೀದಿಯ ಮೊತ್ತವನ್ನು ಮೂರು ತಿಂಗಳು, ಆರು ತಿಂಗಳು ಅಥವಾ 12 ತಿಂಗಳ EMI ಗಳಾಗಿ ಪರಿವರ್ತಿಸಲಾಗುತ್ತದೆ.

ಅಲ್ಫೊನ್ಸೊ ಮಾವಿನ ಹಣ್ಣಿನ ಬೆಲೆಗಳು ಕಣ್ಣಲ್ಲಿ ನೀರೂರಿಸುವಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ,

ನಗರದ ವ್ಯಾಪಾರಿಯೊಬ್ಬರು ಸಮಾನ ಮಾಸಿಕ ಕಂತುಗಳು ಅಥವಾ ಇಎಂಐನಲ್ಲಿ ಹಣ್ಣುಗಳ ರಾಜನನ್ನು ಗ್ರಾಹಕರಿಗೆ ನೀಡುವಲ್ಲಿ (Buying mangoes on EMI) ಯಶಸ್ವಿಯಾಗಿದ್ದಾರೆ.

ಅನೇಕರು ರೆಫ್ರಿಜರೇಟರ್‌ಗಳು, ಹವಾನಿಯಂತ್ರಣಗಳು,

ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ಕಂತುಗಳಲ್ಲಿ ಖರೀದಿಸುತ್ತಾರೆ. ಆದ್ರೆ,

ಮಾವಿನ ಹಣ್ಣನ್ನು ಕಂತುಗಳಲ್ಲಿ ಖರೀದಿ ಮಾಡಿ ತಿನ್ನಬಹುದು ಎಂಬ ಹೊಸ ಸುದ್ದಿ ಕೇಳಿ ಜನರು ಅಶ್ಚರ್ಯಚಕಿತರಾಗಿದ್ದಾರೆ.

ಗುರುಕೃಪಾ ಟ್ರೇಡರ್ಸ್ ಮತ್ತು ಹಣ್ಣಿನ ಉತ್ಪನ್ನಗಳ ಗೌರವ್ ಸನಾಸ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ದೇವಗಡ ಮತ್ತು ರತ್ನಗಿರಿಯ ಅಲ್ಫೊನ್ಸೋ (Alphonso of Ratnagiri) ಅಥವಾ `ಹ್ಯಾಪಸ್’ ಮಾವಿನ ಹಣ್ಣುಗಳು ಅತ್ಯುತ್ತಮ ಎಂದು ಪರಿಗಣಿಸಲಾಗಿದ್ದು,

ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಡಜನ್‌ಗೆ 800 ರಿಂದ 1300 ರೂ.ಗೆ ಮಾರಾಟವಾಗುತ್ತಿದೆ. ಪಿಟಿಐ (PTI) ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸನಾಸ್,

ತಮ್ಮ ಕುಟುಂಬದ ಔಟ್‌ಲೆಟ್ ಇಡೀ ದೇಶದಲ್ಲಿ ಇಎಂಐನಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲ ಸ್ಥಾನದಲ್ಲಿದೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

ಈ ಬೇಸಿಗೆ ಕಾಲದ ಆರಂಭದಲ್ಲಿ ಬೆಲೆಗಳು ಯಾವಾಗಲೂ ತುಂಬಾ ಹೆಚ್ಚಿರುತ್ತವೆ. ರೆಫ್ರಿಜರೇಟರ್‌ಗಳು,

ಎಸಿಗಳು ಮತ್ತು ಇತರ ಉಪಕರಣಗಳನ್ನು ಇಎಂಐನಲ್ಲಿ ಖರೀದಿಸಬಹುದು ಎಂಬುದನ್ನು ನಾವು ಯೋಚಿಸಿದ್ದೇವೆ.

ಇದನ್ನೂ ಓದಿ : https://vijayatimes.com/inauguration-of-shimoga-airport/

ಆದ್ರೆ ಮಾವಿನ ಹಣ್ಣುಗಳನ್ನು ಏಕೆ ಖರೀದಿಸಬಾರದು? ಈ ನಿಟ್ಟಿನಲ್ಲಿ ಯೋಚನೆ ಮಾಡಿದಾಗ ಎಲ್ಲರೂ ಮಾವಿನ ಹಣ್ಣನ್ನು ಖರೀದಿಸಬಹುದು ಎಂಬ ಯೋಚನೆ ನಮ್ಮಲ್ಲಿ ಮೂಡಿತು ಎಂದು ಹೇಳಿದ್ದಾರೆ.

ಆದರೆ ಈ ಯೋಜನೆಯು ಕನಿಷ್ಠ 5,000 ರೂ.ಗಳ ಖರೀದಿಗೆ ಮಾತ್ರ ಲಭ್ಯವಿದೆ ಎಂದು ತಿಳಿಸಲಾಗಿದೆ. ಇದುವರೆಗೆ ನಾಲ್ವರು ಗ್ರಾಹಕರು ಯೋಜನೆಯ ಲಾಭ ಪಡೆದಿದ್ದಾರೆ ಎಂದು ಸನಾಸ್ ತಿಳಿಸಿದ್ದಾರೆ.

Exit mobile version