ನೀವು ‘ವೀಕ್ ಸಿಎಂʼ ಎಂದು ತಿಳಿದೇ ಮೇಕೆದಾಟು ಡ್ಯಾಂ ಕಟ್ಟಲು ಬಿಡುವುದಿಲ್ಲ ಎಂದು ತಮಿಳುನಾಡು ಘೋಷಿಸಿದೆ: ವಿಜಯೇಂದ್ರ ಲೇವಡಿ

ನೀವು ‘ವೀಕ್ ಸಿಎಂʼ (Weak CM) ಎಂದು ತಿಳಿದೇ ಮೇಕೆದಾಟು ಡ್ಯಾಂ ಕಟ್ಟಲು ಬಿಡುವುದಿಲ್ಲ (BY Vijayendra against CM) ಎಂದು ತಮಿಳುನಾಡು ಘೋಷಿಸಿದೆ ಎಂದು ಸಿಎಂ ಸಿದ್ದರಾಮಯ್ಯ

ಅವರ ವಿರುದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra against CM) ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನ್ಯ ಸಿದ್ದರಾಮಯ್ಯನವರೇ (Siddaramaiah) ನಾನು ಸ್ಟ್ರಾಂಗ್ ಎಂದು ಸ್ವಬಣ್ಣನೆ ಮಾಡಿಕೊಳ್ಳುತ್ತೀರಿ ವಿಪರ್ಯಾಸವೆಂದರೆ ನೀವೆಷ್ಟು ‘ವೀಕ್’ ಎಂಬುದನ್ನು

ಪರಿಪೂರ್ಣ ಮನಗಂಡಿರುವ ನಿಮ್ಮ ಸಹೋದರ ಮಿತ್ರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ‘I.N.D.I(A) ಕೂಟ ಗೆದ್ದರೆ ಮೇಕೆದಾಟು ಡ್ಯಾಂ ಕಟ್ಟಲು ಬಿಡುವುದಿಲ್ಲ’ ಎಂದು ಎಗ್ಗಿಲ್ಲದೇ ತಮ್ಮ

ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ.

ಡಿಕೆಶಿ ಅವರ ಜತೆಗೂಡಿ ಮೇಕೆದಾಟು ಯೋಜನೆಗಾಗಿ ನೀವು ನಡೆಸಿದ ಪಾದಯಾತ್ರೆಗೆ ನಿಮ್ಮ ಕಾಂಗ್ರೆಸ್ (Congress) ವರಿಷ್ಠರು ಕನಿಷ್ಠ ಕಿಮ್ಮತ್ತು ನೀಡಿಲ್ಲ ಎಂಬುದು DMK ಪಕ್ಷದ ಪ್ರಣಾಳಿಕೆ ಸಾಕ್ಷಿ

ನುಡಿಯುತ್ತಿದೆ, ನಿಮ್ಮ ಬೂಟಾಟಿಕೆಯ ಮೇಕೆದಾಟು ಹೋರಾಟ ‘ಮೊಸಳೆಕಣ್ಣೀರಿನದು’ ಎಂಬುದು ಕರ್ನಾಟಕದ ಜನತೆಗೆ ಮನವರಿಕೆಯಾಗಿದೆ.

ಇನ್ನೊಂದು ಟ್ವೀಟ್ನಲ್ಲಿ, ಗೋಕಾಕ್ ಚಳವಳಿ (Gokak Movement), ಕಾವೇರಿ ಚಳವಳಿಗಳನ್ನು ಈ ಹಿಂದೆಯೂ ಹತ್ತಿಕ್ಕಲು ಯತ್ನಿಸಿರುವ ಕುಖ್ಯಾತಿ ಹೊಂದಿರುವ ನಿಮ್ಮ ಕಾಂಗ್ರೆಸ್ ಕನ್ನಡನಾಡು, ನುಡಿ, ಜನರ

ಹಿತಾಸಕ್ತಿಯ ಪರ ಎಂದೂ ನಿಂತಿಲ್ಲ , ನಿಲ್ಲವುದೂ ಇಲ್ಲ ಎಂಬುದು ಇದೀಗ ಸಾಬೀತಾಗಿದೆ. ಮಾನ್ಯ ಖರ್ಗೆ ಅವರೇ, ನೀವೂ ಒಬ್ಬ ಕನ್ನಡಿಗರಾಗಿ ನಿಮ್ಮ ಮೈತ್ರಿಕೂಟದ ಹೆಸರಿನಲ್ಲಿ ಬಿಡುಗಡೆಯಾಗಿರುವ

ಪ್ರಣಾಳಿಕೆಯಲ್ಲಿನ ಕರ್ನಾಟಕ ವಿರೋಧಿ ಭರವಸೆಯನ್ನು ಹೇಗೆ ಸಮರ್ಥಿಸುವಿರಿ? ಎಂದು ಪ್ರಶ್ನಿಸಿದ್ದಾರೆ.

ಕರುನಾಡಿನ ಆರೂವರೆ ಕೋಟಿ ಜನರಿಗೆ ಉತ್ತರಿಸಿ. ಕರ್ನಾಟಕಕ್ಕೆ (Karnataka) ಮಹಾದಾಯಿಯ ಹನಿ ನೀರೂ ಸಹ ಸೇರಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು.

ಮೇಕೆದಾಟುವಿನಲ್ಲಿ ಕರ್ನಾಟಕಕ್ಕೆ ಅಣೆಕಟ್ಟು ನಿರ್ಮಿಸಲು ಬಿಡುವುದಿಲ್ಲ ಎಂದು I-N-D-I-A ಮೈತ್ರಿಕೂಟದ ಪ್ರಮುಖ ಸ್ಟಾಲಿನ್ (Stalin) ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ.ಕೆ.ಶಿವಕುಮಾರ್

ಅವರೇ, ಹೆಚ್ಚಿನ ಸೀಟಿಗಾಗಿ ಕಾವೇರಿ ನೀರನ್ನು ಬೇಕಾಬಿಟ್ಟಿ ಹರಿ ಬಿಟ್ಟು ಕೆ.ಆರ್.ಎಸ್ (KRS) ಖಾಲಿ ಮಾಡಿದ್ದಾಯಿತು, ಕನ್ನಡಿಗರಿಗೆ ಹನಿ ನೀರೂ ಸಹ ಸಿಗದಂತಹ ವಾತಾವರಣ ನಿರ್ಮಿಸಿದ್ದಾಯಿತು.

ಸ್ವಾಭಿಮಾನಿ ಕನ್ನಡಿಗರಿಗೆ ಹಾಗೂ ಕರ್ನಾಟಕಕ್ಕೆ ನಿಮ್ಮ I-N-D-I-A ಮೈತ್ರಿಕೂಟದಿಂದಾಗುವ ದ್ರೋಹಗಳಿಗೆ ಕೊನೆಯೆಂದು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ: PSD ಅಳವಡಿಸಿ ಜನರ ಪ್ರಾಣ ರಕ್ಷಿಸಿ ಎಂದು ಕೋರಿಕೆ ಸಲ್ಲಿಸಿದ ನಮ್ಮ ಮೆಟ್ರೋ ಪ್ರಯಾಣಿಕರು.

Exit mobile version