ವಿಜಯೇಂದ್ರ ಕೈ ತಪ್ಪಿದ ಪರಿಷತ್ ಟಿಕೆಟ್, ಕುಟುಂಬ ರಾಜಕಾರಣಕ್ಕೆ ಬ್ರೇಕ್!

BJP

ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ(Former Chiefminsiter) ಬಿ.ಎಸ್.ಯಡಿಯೂರಪ್ಪನವರ(BS Yedurappa) ಪುತ್ರ ಬಿ.ವೈ. ವಿಜಯೇಂದ್ರ(BY Vijayendra) ಅವರಿಗೆ ವಿಧಾನಪರಿಷತ್ ಟಿಕೆಟ್(Vidhanaparishath Ticket) ಕೈ ತಪ್ಪಿದೆ.

ಈ ಮೂಲಕ ಬಿಎಸ್‍ವೈಗೆ ಬಿಜೆಪಿ ಹೈಕಮಾಂಡ್(HighCommand) ಬಿಗ್ ಶಾಕ್ ನೀಡಿದೆ. ವಿಧಾನಪರಿಷತ್‍ಗೆ ಆಯ್ಕೆಯಾಗಿ ಸಚಿವ ಸಂಪುಟ ಸೇರುವ ವಿಜಯೇಂದ್ರ ಕನಸಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಈ ಮೂಲಕ ಕುಟುಂಬ ರಾಜಕೀಯಕ್ಕೆ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ ಎಂಬ ನೇರ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ. ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಟಿಕೆಟ್ ಪಕ್ಕಾ ಎಂದೇ ಭಾವಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಹೈಕಮಾಂಡ್ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ಪಕ್ಷಕ್ಕಾಗಿ ಕೆಲಸ ಮಾಡಿದ ತೆರೆಮರೆಯ ನಾಯಕರನ್ನು ಗುರುತಿಸುವ ಮೂಲಕ ಪಕ್ಷನಿಷ್ಠರಿಗೆ ಮಣೆ ಹಾಕಿದೆ.

ಲಿಂಗಾಯತ, ದಲಿತ, ಹಿಂದುಳಿದ ವರ್ಗ ಕೋಟಾದಡಿ ನಾಲ್ಕು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ದಲಿತ ಕೋಟಾದಡಿ ಎಸ್‍ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಕೋಟಾದಡಿ ಕೇಶವ ಪ್ರಸಾದ್, ಲಿಂಗಾಯತ ಕೋಟಾದಡಿ ಲಕ್ಷ್ಮಣ ಸವದಿ, ಮಹಿಳಾ ಕೋಟಾದಡಿ ಶ್ರೀಮತಿ ಹೇಮಲತಾ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ಈ ನಿರ್ಧಾರ ಬಿ.ಎಸ್.ಯಡಿಯೂರಪ್ಪನವರಿಗೆ ಬಿಗ್ ಶಾಕ್ ನೀಡಿದೆ. ಆದರೆ ಮೂಲಗಳ ಪ್ರಕಾರ ಬಿಎಸ್‍ವೈ ಕಾದುನೋಡುವ ತಂತ್ರಕ್ಕೆ ಮೊರೆಹೋಗಲಿದ್ದಾರೆ.

ಮುಂದಿನ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಈಗ ಟಿಕೆಟ್ ಕೈತಪ್ಪಿದರು ಬಿಎಸ್‍ವೈ ಯಾವುದೇ ಬಂಡಾಯ ಏಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈ ಕುರಿತು ತಮ್ಮ ಆಪ್ತರ ಬಳಿ ಚರ್ಚೆಯನ್ನು ನಡೆಸಿದ್ದಾರೆ. ಇನ್ನು ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ವಿಧಾನಪರಿಷತ್‍ನ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ.

Exit mobile version