2.5 ವರ್ಷದ ಬಳಿಕ ಸಚಿವ ಸಂಪುಟ ಪುನಾರಚನೆ: ನ್ಯೂ ಬಾಂಬ್ ಸಿಡಿಸಿದ ಶಾಸಕ ಅಶೋಕ್ ಪಟ್ಟಣ

Bengaluru: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ಅವರು ಎರಡುವರೆ ವರ್ಷದ ಬಳಿಕ ಸಚಿವ ಸಂಪುಟ ಪುನಾರಚನೆಗೆ ಭರವಸೆ ನೀಡಿದ್ದಾರೆ ಎಂದು ಬೆಂಗಳೂರಿನಲ್ಲಿ (Bengaluru) ಶುಕ್ರವಾರ ಮಾತನಾಡಿದ ಕಾಂಗ್ರೆಸ್ ಶಾಸಕ ಹಾಗೂ ವಿಧಾನಸಭೆ ಆಡಳಿತ ಪಕ್ಷದ ಮುಖ್ಯಸಚೇತಕ ಅಶೋಕ್ ಪಟ್ಟಣ‌ (Ashok Pattan) ಅವರು ಹೊಸ ಬಾಂಬನ್ನು ಸಿಡಿಸಿದ್ದಾರೆ.

2.5 ವರ್ಷ ಆದ ಮೇಲೆ ಸಂಪುಟ ಪುನಾರಚನೆ ಆಗುವುದಾಗಿ, ಸುರ್ಜೇವಾಲ ಸೇರಿ ಎಲ್ಲಾ ಕಾಂಗ್ರೆಸ್ (Congress) ‌ನಾಯಕರು ಹೇಳಿದ್ದಾರೆ. ಎಲ್ಲರಿಗೂ ಒಟ್ಟಿಗೆ ಮಾಡೋಕೆ ಆಗೊಲ್ಲ. ಹೀಗಾಗಿ ಎರಡೂವರೆ ವರ್ಷದ ಬಳಿಕ ಮಾಡೋದಾಗಿ ಹೇಳಿದ್ದಾರೆ ಎಂದರು. ನಾನು ಹಿರಿಯ ಶಾಸಕನಿದ್ದೇನೆ.‌ ನಾನು ಮಂತ್ರಿ ಆಗಬೇಕಾಗಿತ್ತು. ಆದರೆ ಆಗಿಲ್ಲ. ಜಾತಿ ನೋಡಿ ಮಂತ್ರಿ ಮಾಡಲಾಗಿದೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದಿದ್ದಾರೆ.

ನಮ್ಮ ನಾಯಕರಿಗೆ ನಾನು ಹೇಳಿದ್ದೇನೆ. ಮಂತ್ರಿ ಸ್ಥಾನವನ್ನು ಜಾತಿ ನೋಡಿ ಕೊಡಬೇಡಿ, ಹಿರಿತನ‌ ಹಾಗೂ ಅನುಭವ ನೋಡಿ ಮಂತ್ರಿ ಮಾಡಿ ಅಂತ ಮನವಿ ಮಾಡಿದ್ದೇನೆ ಎಂದರು. ಸಚಿವ ಸ್ಥಾನವನ್ನು 2.5 ವರ್ಷ ಆದ ಮೇಲೆ ಕೊಡ್ತಾರೆ ಅನ್ನೋ ನಂಬಿಕೆ ಭರವಸೆ ಇದೆ. ಅವರು ಕೊಟ್ಟರು ಪಕ್ಷದಲ್ಲಿ ಇರುತ್ತೇನೆ.‌ ಕೊಡದೇ ಹೋದರು ಇರುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ನಮ್ಮ ಭಾವನೆಯನ್ನು, ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್, ರಣದೀಪ್ ಸುರ್ಜೇವಾಲ ಹಾಗೂ‌ ಕೆಸಿ ವೇಣುಗೋಪಾಲ್ (K.C Venugopal) ಸೇರಿ ಎಲ್ಲಾ ನಾಯಕರಿಗೂ ತಿಳಿಸಿದ್ದೇವೆ. 2.5 ವರ್ಷ ಆದ ಮೇಲೆ ಮಂತ್ರಿ ಮಾಡುತ್ತೇನೆ ಎಂದು ಎಲ್ಲರು ಹೇಳಿದ್ದಾರೆ. ಸಂಪೂರ್ಣ ಸಂಪುಟ ಪುನರ್ ರಚನೆ ಮಾಡ್ತಾರೋ 4-5 ಸ್ಥಾನ ಬದಲಾವಣೆ ಮಾಡ್ತಾರೋ ಗೊತ್ತಿಲ್ಲ ಎಂದರು.

ಪಕ್ಷಕ್ಕೆ ಸೇರಿದ ಮೇಲೆ ಎಲ್ಲರೂ ಒಂದೇಯಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡವರು, ಚಿಕ್ಕವರು ಅಂತ ಏನು ಇಲ್ಲ. ಅದೃಷ್ಟ ಇದ್ದವರು ಮಂತ್ರಿಗಳು ಆಗುತ್ತಾರೆ. ದುರಾದೃಷ್ಟ ಇದ್ದ ನಮ್ಮಂತಹರು ಹೀಗೆ ಮಾತಾಡ್ತೀವಿ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಅಂತಹ ಫ್ಯಾಮಿಲಿಯಿಂದ ಬಂದ ನನಗೆ ಇನ್ನು ಚಾನ್ಸ್ ಸಿಕ್ಕಿಲ್ಲ. ಎಲ್ಲ ಇದ್ದರು ನನ್ನ ನಕ್ಷತ್ರ ಸರಿಯಿಲ್ಲ ಅಂತ ಕಾಣ್ತಿದೆ. ಗಾಡ್ ಫಾದರ್ (God Father) ಇಲ್ಲದೆ ಏನು ಮಾಡೋಕೆ ಆಗುವುದಿಲ್ಲ. ಯಾವುದೇ ವಲಯ ಆದರೂ ಗಾಡ್ ಫಾದರ್ ಇರಬೇಕು ಎಂದರು.

ಭವ್ಯಶ್ರೀ ಆರ್.ಜೆ

Exit mobile version