ಭಾರತ್ ಬಂದ್‍ಗೆ ಆಗ್ರಹ ; ದೆಹಲಿಯಲ್ಲಿ ಭಾರಿ ಟ್ರಾಫಿಕ್ ಜಾಮ್, 22 ರೈಲುಗಳು ರದ್ದು!

Delhi

ರಕ್ಷಣಾ ಪಡೆಗಳಿಗೆ ಕೇಂದ್ರದ ಹೊಸ ಅಲ್ಪಾವಧಿ ನೇಮಕಾತಿ ನೀತಿ, ಅಗ್ನಿಪಥ್‌ಗೆ(Agnipath Yojana) ಸಂಬಂಧಿಸಿದಂತೆ ಭಾರತ್ ಬಂದ್‌ಗೆ(Bharath Bandh) ಕರೆ ಆಗ್ರಹಿಸುತ್ತಿರುವ ನಡುವೆ ವಿವಿಧ ರಾಜ್ಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈಲ್ವೆ(Railway) ಸಂರಕ್ಷಣಾ ಪಡೆ (RPF) ಮತ್ತು ಸರ್ಕಾರಿ ರೈಲ್ವೇ ಪೊಲೀಸ್ (GRP) ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಭಾರೀ ಭದ್ರತಾ ವ್ಯವಸ್ಥೆಗಳು ದೆಹಲಿ-ಎನ್‌ಸಿಆರ್‌ನಾದ್ಯಂತ ಭಾರಿ ಟ್ರಾಫಿಕ್ ಜಾಮ್‌ಗೆ(Traffic Jam) ಎದುರಾಗಿದೆ. ದೆಹಲಿ ಪೊಲೀಸರು(Delhi Police) ವಾಹನಗಳನ್ನು ಪರಿಶೀಲಿಸಲು ಪ್ರಾರಂಭಿಸುತ್ತಿದ್ದಂತೆ ದೆಹಲಿ-ಗುರುಗ್ರಾಮ್(Delhi-Gurgram) ಎಕ್ಸ್‌ಪ್ರೆಸ್‌ವೇಯ ಸರ್ಹೌಲ್ ಗಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಜಾರ್ಖಂಡ್‌ನಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು, ಭಾರತ್ ಬಂದ್ ಕರೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೌರಾ ನಿಲ್ದಾಣ, ಹೌರಾ ಸೇತುವೆ, ಸಂತ್ರಗಚಿ ಜಂಕ್ಷನ್, ಶಾಲಿಮಾರ್ ರೈಲು ನಿಲ್ದಾಣ ಮತ್ತು ಹೌರಾದ ಇತರ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


ಪಾಟ್ನಾದ ದಕ್ ಬಂಗಲೆ ಚೌರಾಹಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿ-ನೋಯ್ಡಾ-ದೆಹಲಿ ಫ್ಲೈವೇ, ಮೀರತ್ ಎಕ್ಸ್‌ಪ್ರೆಸ್‌ವೇ, ಆನಂದ್ ವಿಹಾರ್, ಸರೈ ಕಾಲೇ ಖಾನ್, ಪ್ರಗತಿ ಮೈದಾನ ಮತ್ತು ದೆಹಲಿಯ ಇತರ ಭಾಗಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಭಾರತ್ ಬಂದ್ ಕರೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ(AndhraPradesh) ವಿಜಯವಾಡ(Vijayawada) ನಿಲ್ದಾಣದಲ್ಲಿ ಮುಳ್ಳು ತಂತಿಗಳನ್ನು ಹಾಕಲಾಗಿದೆ.ಪೂರ್ವ ಕೇಂದ್ರ ರೈಲ್ವೆಯಿಂದ ಇನ್ನೂ 22 ರೈಲುಗಳನ್ನು ರದ್ದುಗೊಳಿಸಲಾಗಿದೆ.

ಹಲವು ರೈಲುಗಳು ರದ್ದಾದ ಕಾರಣ ಪ್ರಯಾಣಿಕರು ನವದೆಹಲಿ ಮತ್ತು ಗೋರಖ್‌ಪುರ ರೈಲು ನಿಲ್ದಾಣಗಳಲ್ಲಿ(Ghorakpur Railway Station) ಸಿಲುಕಿ ಪರದಾಡುವಂತಾಗಿದೆ. ಶಾಲಾ ವಾಹನಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ರಸ್ತೆಗಳಲ್ಲಿ ಎಂದಿನಂತೆ ಸಂಚರಿಸುತ್ತಿವೆ. ಸರ್ಕಾರಿ ಕಚೇರಿಗಳೂ ತೆರೆದಿದೆ. ಆದರೆ, ಬಂದ್ ಕರೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಗ್ನಿಪಥ್ ಯೋಜನೆ ಹಿಂಪಡೆಯುವಂತೆ ಒತ್ತಾಯಿಸಿ ಪಕ್ಷದ ಕೆಲ ಮುಖಂಡರು ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಕಾಂಗ್ರೆಸ್‌ನ(Congress) ಅಜಯ್ ಮಾಕನ್(Ajay Makan) ಹೇಳಿದ್ದಾರೆ.

Exit mobile version