ಪುಟಿನ್ಗೆ ಈ ಯುದ್ಧ ನಿಲ್ಲಿಸಲು ನಾವು ಕೇಳಬಹುದಾ? : ಸಿಜೆಐ ರಮಣ!

cji

ಯುದ್ಧವನ್ನು ನಿಲ್ಲಿಸುವಂತೆ ನಾವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimar Putin) ಅವರನ್ನು ಕೇಳಬಹುದೇ? ಎಂದು ಭಾರತದ ಚೀಫ್ ಜಸ್ಟೀಸ್(Chief Justice of India) ಎನ್.ವಿ ರಮಣ(N.V Raman) ಅವರು ಕೇಳಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಈ ರೀತಿ ಕೇಳಿದ್ದಾರೆ. ಈ ವಿಷಯದಲ್ಲಿ ನಾವೇನು ಮಾಡಬಹುದು? ನಾವು ಅಲ್ಲಿ ಸೆಲಸಿರುವ ನಮ್ಮ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯನ್ನು ಹೊಂದಿದ್ದೇವೆ. ಭಾರತ ಸರ್ಕಾರ ತನ್ನ ಕೆಲಸವನ್ನು ಎಡಬಿಡದೆ ಮಾಡುತ್ತಿದೆ ಎಂದು ಸಿಜೆಐ ಎನ್‌ವಿ ರಮಣ ಗುರುವಾರ ಹೇಳಿದರು.

ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಯ ಕುಟುಂಬವು ಭಾರತ ಸರ್ಕಾರದಿಂದ ಸಹಾಯವನ್ನು ಕೇಳುತ್ತಿದೆ. ಮೊಲ್ಡೊವಾ-ರೊಮೇನಿಯಾ ಗಡಿಯಲ್ಲಿ ವಿದ್ಯಾರ್ಥಿಗಳು ತುಂಬ ಸಂಖ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ವಿದ್ಯಾರ್ಥಿಯ ಪೋಷಕರೊಬ್ಬರು ಮೊರೆ ಹೋಗಿದ್ದಾರೆ. ಒಡಿಸ್ಸಾ ವಿಶ್ವವಿದ್ಯಾಲಯದಿಂದ ಸುಮಾರು 250 ಭಾರತೀಯ ವಿದ್ಯಾರ್ಥಿಗಳು ಮೊಲ್ಡೊವಾ-ರೊಮೇನಿಯಾ ಗಡಿಯಲ್ಲಿದ್ದಾರೆ ಎಂದು 24 ವರ್ಷದ ಫಾತಿಮಾ ಅಹಾನಾ ಎಂಬ ಮಹಿಳಾ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಈ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮನವಿಯಲ್ಲಿ ಪ್ರತ್ಯೇಕವಾಗಿ ತಿಳಿಸಲಾಗಿದೆ. ಸುಮಾರು ಆರು ದಿನಗಳ ಕಾಲ ರೊಮೇನಿಯಾಗೆ ಹೋಗಲು ಅನುಮತಿಯಿಲ್ಲದೆ, ಅರ್ಜಿದಾರರು ಏರ್ ಇಂಡಿಯಾ ಸ್ಥಳಾಂತರಿಸುವ ವಿಮಾನವನ್ನು ಹತ್ತಲು ರೊಮೇನಿಯಾಗೆ ಹೋಗುವ ಮಾರ್ಗದಲ್ಲಿ ಉಕ್ರೇನ್‌ನಿಂದ ಮೊಲ್ಡೊವಾದಲ್ಲಿನ ಚೆಕ್‌ಪಾಯಿಂಟ್ ಅನ್ನು ದಾಟಲು ಅರ್ಜಿದಾರರಿಗೆ ಅನುಮತಿಯನ್ನು ನ್ಯಾಯಾಲಯ ಕೊಡಬೇಕು ಎಂದು ಮನವಿ ಮಾಡಿದೆ ಎಂದು ತಿಳಿಸಿದರು.

Exit mobile version