ಕ್ಯಾನ್ಸರ್ ಔಷಧ ಮೇಲಿನ ತೆರಿಗೆ ದರಗಳಲ್ಲಿ ವಿನಾಯಿತಿ : ಸಿನಿಮಾ ಹಾಲ್‌ಗಳಲ್ಲಿ ಆಹಾರದ ಮೇಲಿನ ಜಿಎಸ್‌ಟಿ ದರ ಕೂಡ ಕಡಿತ

New Delhi : ನವದೆಹಲಿಯ ವಿಜ್ಞಾನ ಭವನದಲ್ಲಿ ಜಿಎಸ್‌ಟಿ ಕೌನ್ಸಿಲ್‌ನ (cancer drugs tax rates) 50 ನೇ ಸಭೆಯಲ್ಲಿ ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಕ್ಯಾನ್ಸರ್

ಔಷಧ ಫುಡ್ ಫಾರ್ ಸ್ಪೆಷಲ್ ಮೆಡಿಕಲ್ ಪರ್ಪಸಸ್ (ಎಫ್‌ಎಸ್‌ಎಂಪಿ) (FSMP) ಮತ್ತು ದಿನುಟುಕ್ಸಿಮಾಬ್ (Dinutuximab) ಮೇಲಿನ ತೆರಿಗೆ ದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ ಮತ್ತು

ಸಿನಿಮಾ ಹಾಲ್‌ಗಳಲ್ಲಿ ನೀಡುವಂತಹ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿ ದರವನ್ನು ದೊಡ್ಡ ಮಟ್ಟದಲ್ಲಿ ಕಡಿತ ಮಾಡಿದೆ ಎಂದು ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿತ್ತ ಸಚಿವೆ

ನಿರ್ಮಲಾ ಸೀತಾರಾಮನ್ (Nirmala Sitaraman) ಈ ನಿರ್ಧಾರ ಮಾಡಿದ್ದಾರೆ.

ಪಶ್ಚಿಮ ಬಂಗಾಳದ (West Bengal) ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ (Chandrima Bhattacharya) ಸಭೆಯ ನಂತರ, ಸುದ್ದಿಗಾರರೊಂದಿಗೆ ಮಾತನಾಡುತ್ತಾ

ಕ್ಯಾಸಿನೋಗಳು (Casino), ಆನ್‌ಲೈನ್ ಗೇಮಿಂಗ್ (Online Game), ಮತ್ತು ಕುದುರೆ ರೇಸಿಂಗ್‌ಗಳಿಗೆ ಶೇಕಡಾ 28 ರಷ್ಟು ಸಂಪೂರ್ಣ ಮುಖಬೆಲೆಯ ಮೇಲೆ ತೆರಿಗೆ ವಿಧಿಸಲು ಕೌನ್ಸಿಲ್

ನಿರ್ಧರಿಸಿದೆ ಎಂದು ಹೇಳಿದರು.ಅಷ್ಟೇ ಅಲ್ಲದೆ ಕೌನ್ಸಿಲ್ ಸಿನಿಮಾ ಹಾಲ್‌ಗಳಲ್ಲಿ ಕೊಡುವಂತಹ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ಈಗಾಗಲೇ ನಿರ್ಧರಿಸಿದೆ

ಎಂದು ಇದೇ ವೇಳೆ (cancer drugs tax rates) ತಿಳಿಸಿದ್ದಾರೆ.

ಇದನ್ನೂ ಓದಿ : ಹಗಲಿನಲ್ಲಿ ಬಳಸುವ ವಿದ್ಯುತ್‌ಗೆ ಶೇ.20 ಕಡಿಮೆ ಶುಲ್ಕ: ಬಿಲ್ಲಿಂಗ್‌ ವ್ಯವಸ್ಥೆಯಲ್ಲಿ ಬದಲಾವಣೆಗೆ ಕೇಂದ್ರ ನಿರ್ಧಾರ

ಕ್ಯಾನ್ಸರ್ (Cancer) ಔಷಧ ದಿನುಟುಕ್ಸಿಮಾಬ್ ಮತ್ತು ಫುಡ್ ಫಾರ್ ಸ್ಪೆಷಲ್ ಮೆಡಿಕಲ್ ಪರ್ಪಸಸ್ (ಎಫ್‌ಎಸ್‌ಎಂಪಿ) ಇವುಗಳನ್ನು ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಹ ಬಳಸಲಾಗುತ್ತದೆ.

ಪಶ್ಚಿಮ ಬಂಗಾಳದ ಎಫ್‌ಎಂ(FM) ಪ್ರಕಾರ, ಜಿಎಸ್‌ಟಿ ಕೌನ್ಸಿಲ್ ಇವುಗಳ ಆಮದು ಮೇಲಿನ ಜಿಎಸ್‌ಟಿ ವಿನಾಯಿತಿಯನ್ನು ಅನುಮೋದಿಸಿದೆ. ಪ್ರಸ್ತುತ ಕ್ಯಾನ್ಸರ್ ಔಷಧಿ ದಿನುಟುಕ್ಸಿಮಾಬ್

(ಕ್ವಾರ್ಜಿಬಾ) ನ ವೈಯಕ್ತಿಕ ಬಳಕೆಗಾಗಿ ಶೇ. 12 ಐಜಿಎಸ್ಟಿಗೆ ವೈಯಕ್ತಿಕ ಆಮದುಗಳಿಗೆ ಒಳಪಟ್ಟಿವೆ. ಮತ್ತು ಶೇ.18ರಿಂದ ಶೇ.5ಕ್ಕೆ ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು

ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಇಳಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.

ವರದಿಗಳ ಪ್ರಕಾರ ಜುಲೈ 18 ರಿಂದ ಆನ್‌ಲೈನ್ ಗೇಮಿಂಗ್ ಮತ್ತು ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಹೊಸ ಜೆಎಸ್‌ಟಿ ದರಗಳು ಜಾರಿಗೆ ಬರಲಿವೆ.

ಮೇಲ್ಮನವಿ ನ್ಯಾಯಮಂಡಳಿಗಳನ್ನು ಜಿಎಸ್‌ಟಿ ಸಂಬಂಧಿತ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳನ್ನು ಆಲಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.

ಇನ್ನು ಮಹಾರಾಷ್ಟ್ರ(Maharashtra) ಅರಣ್ಯ ಸಾಂಸ್ಕೃತಿಕ ಮತ್ತು ಮೀನುಗಾರಿಕೆ ಸಚಿವ ಸುಧೀರ್ ಮುಂಗಂತಿವಾರ್(Sudhir Mungatiwar) ಆನ್‌ಲೈನ್‌ನಲ್ಲಿ(Online) ಕೌಶಲದ ಗೇಮ್‌

ಮತ್ತು ಚಾನ್ಸ್‌ಗಳ ಗೇಮ್‌ ಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲು ಕೌನ್ಸಿಲ್‌ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ. ಇದರರ್ಥ ಕೌಶಲ್ಯ ಆಧಾರಿತ ಅಥವಾ ಅವಕಾಶ ಆಧಾರಿತವಾಗಿರುವುದನ್ನು

ಲೆಕ್ಕಿಸದೆ ಎಲ್ಲಾ ಆನ್‌ಲೈನ್ ಗೇಮ್‌ಗಳಿಗೂ ಒಂದೇ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ದೊಡ್ಡ ಮಟ್ಟದ ತೆರಿಗೆ ವ್ಯಾಪ್ತಿಯಲ್ಲಿ ಕ್ರಿಕೆಟ್‌ನ ಆನ್‌ಲೈನ್‌ ಗೇಮಿಂಗ್‌ ಅಪ್ಲಿಕೇಶನ್‌ಗಳೂ ಕೂಡ ಬರುತ್ತದೆ.

ಪಾಪ್‌ಕಾರ್ನ್(Popcorn) ಅಥವಾ ತಂಪು ಪಾನೀಯಗಳಂತಹ ತಿನ್ನಬಹುದಾದ ವಸ್ತುಗಳ ಮಾರಾಟದೊಂದಿಗೆ ಸಿನಿಮಾ ಟಿಕೆಟ್‌ನ ಮಾರಾಟವನ್ನು ಸಂಯೋಜಿಸಿದರೆ,ಸಂಯೋಜಿತ

ಪೂರೈಕೆಯಾಗಿ ಸಂಪೂರ್ಣ ಪೂರೈಕೆಯನ್ನು ನಿರ್ವಹಿಸಬೇಕು ಮತ್ತು ತೆರಿಗೆಯನ್ನು ಮುಖ್ಯ ಪೂರೈಕೆಯ ಸಂಬಂಧಿತ ದರದಲ್ಲಿ ವಿಧಿಸಬೇಕು ಎಂದು ಹೇಳಿದೆ. ಅಂದರೆ ಇದಕ್ಕೆ ಸಿನಿಮಾ ಟಿಕೆಟ್‌ಗೆ

(Movie ticket) ವಿಧಿಸಲಾಗುವ ದರದ ತೆರಿಗೆಯೂ ಕೂಡ ಒಳಪಡುತ್ತದೆ. ಪ್ರಸ್ತುತ ಶೇಕಡಾ 12 ರಷ್ಟು ತೆರಿಗೆಯನ್ನು 100 ಕ್ಕಿಂತ ಕಡಿಮೆ ಬೆಲೆಯ ಚಲನಚಿತ್ರ ಟಿಕೆಟ್‌ಗಳಿಗೆ ವಿಧಿಸಲಾಗುತ್ತದೆ,

ಆದರೆ 18 ಶೇಕಡಾ ತೆರಿಗೆಯನ್ನು 100 ಕ್ಕಿಂತ ಹೆಚ್ಚು ದರದ ಮೇಲೆ ವಿಧಿಸಲಾಗುತ್ತದೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಸರ್ಕಾರವು ಇತ್ತೀಚೆಗೆ ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತು ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್ (GSTN) ನಡುವೆ

ಮಾಹಿತಿಯ ವಿನಿಮಯವನ್ನು ತನಿಖೆಯಲ್ಲಿ ಸಹಾಯ ಮಾಡಲು ಸಕ್ರಿಯಗೊಳಿಸುವ ಅಧಿಸೂಚನೆಯನ್ನು ಹೊರಡಿಸಿದೆ. ನಿರ್ದಿಷ್ಟವಾಗಿ PMLA ನ ವಿಭಾಗ 66(1)(iii) ಅಡಿಯಲ್ಲಿ

ED ಮತ್ತು GSTN ನಡುವಿನ ಮಾಹಿತಿಯ ಹಂಚಿಕೆಗೆ ಅಧಿಸೂಚನೆಯು ಸಂಬಂಧಿಸಿದೆ.

ಜಿಎಸ್‌ಟಿಎನ್ ಅನ್ನು ಪಿಎಂಎಲ್‌ಎ ಅಡಿಯಲ್ಲಿ ಸೇರಿಸುವ ನಿರ್ಧಾರವನ್ನು ಅಂತಿಮಗೊಳಿಸುವ ಮೊದಲು ಚರ್ಚೆಯ ಅಗತ್ಯವನ್ನು ಹಲವಾರು ಹಣಕಾಸು ಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ.

ದೆಹಲಿ, ತಮಿಳುನಾಡು,ಪಂಜಾಬ್, ಕರ್ನಾಟಕ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಮತ್ತು ರಾಜಸ್ಥಾನದ ಹಣಕಾಸು ಮಂತ್ರಿಗಳು ಈ ವಿಷಯವನ್ನು ಪ್ರಸ್ತಾಪ ಮಾಡಿದರು.

ರಶ್ಮಿತಾ ಅನೀಶ್

Exit mobile version