New Delhi: ವಿದ್ಯುತ್ ಶುಲ್ಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ (day time electricity charges) ಮಹತ್ವದ ನಿರ್ಧಾರ ಕೈಗೊಂಡಿದೆ. ವಿದ್ಯುತ್ (Electricity) ತಿದ್ದುಪಡಿ ಮಸೂದೆ
2020 ಅನ್ನು ಪ್ರಸ್ತಾಪಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಹಗಲಿನಲ್ಲಿ ಬಳಕೆ ಮಾಡುವ ವಿದ್ಯುತ್ಗೆ ಸ್ಥಿರ ವಿದ್ಯುತ್ ದರ ವ್ಯವಸ್ಥೆಗಿಂತ 20% ಕಡಿಮೆ ಇರುತ್ತದೆ ಎಂದು ವರದಿ ಆಗಿವೆ .
ಇದನ್ನೂ ಓದಿ : ಗೃಹಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸಬೇಕೇ?? ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..
ಇದು ಸಾಮಾನ್ಯ ಗ್ರಾಹಕರು ಕಡಿಮೆ ವಿದ್ಯುತ್ ಬಿಲ್ (Electricity Bill) ಪಡೆಯಲು ಸಹಾಯ ಮಾಡುತ್ತದೆ. ಮುಂದಿನ ವರ್ಷ ಜಾರಿಗೆ ಬರಲಿರುವ “ಟೈಮ್-ಆಫ್-ಯೂಸ್ ಟ್ಯಾರಿಫ್ಸ್”
(Time of use Tariff) ಎಂಬ ಹೊಸ ನಿಯಮಗಳ ಅಡಿಯಲ್ಲಿ, ಗ್ರಾಹಕರು ನಿರ್ದಿಷ್ಟ ಅವಧಿಯೊಳಗೆ ವಿದ್ಯುತ್ ಅನ್ನು ಬಳಸುವ ಆಧಾರದ ಮೇಲೆ ದರಗಳನ್ನು ನಿರ್ಧರಿಸಲಾಗುತ್ತದೆ.

ಅಂದರೆ ಹಗಲಿನಲ್ಲಿ ಬಳಸುವ ವಿದ್ಯುತ್ ಬಿಲ್ಗಳು ಸುಮಾರು 20% ರಷ್ಟು ಕಡಿಮೆಯಾಗುತ್ತವೆ. ಅಲ್ಲದೆ ಸುಮಾರು 20% ಹೆಚ್ಚಿನ ದರ ರಾತ್ರಿ ವೇಳೆ ಬಳಸುವ ವಿದ್ಯುತ್ಗೆ ಇರಲಿದೆ. ಅಲ್ಲದೆ,
“ಪೀಕ್ ಅವರ್’ನಲ್ಲಿ(Peak Hour) ಸಮಯದಲ್ಲಿ ಬಳಸುವ ವಿದ್ಯುತ್ ದುಬಾರಿಯಾಗಬಹುದು ಮತ್ತು “ನಾನ್ ಪೀಕ್ ಅವರ್’(Non Peak Hour) ಸಮಯದ ವಿದ್ಯುತ್ ಅಗ್ಗವಾಗಲಿದೆ ಎಂದು ಕೇಂದ್ರ
ಇಂಧನ ಕಾರ್ಯದರ್ಶಿ ಆರ್.ಕೆ.ಸಿಂಗ್ (day time electricity charges) ಶುಕ್ರವಾರ ಮಾಹಿತಿ ಹಂಚಿಕೊಂಡಿದ್ದಾರೆ.
ಕಾರಣವೇನು?
ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವುದು ಅಂದರೆ ಸೌರ ವಿದ್ಯುತ್ (Solar Power)ಸೇರಿದಂತೆ ಹಾಗೂ ‘ಪವರ್ ಗ್ರಿಡ್ ಮೇಲಿನ ಒತ್ತಡವನ್ನು ಪೀಕ್ ಅವರ್’ನಲ್ಲಿ ಕಡಿಮೆ ಮಾಡುವುದು
ಇದರ ಮುಖ್ಯ ಉದ್ದೇಶವಾಗಿದೆ. ದೇಶದ 65% ವಿದ್ಯುತ್ ಉತ್ಪಾದನೆಯನ್ನು 2030ರ ವೇಳೆಗೆ ಪಳಿಯುಳಿಕೆಯೇತರ ಇಂಧನ ಮೂಲದಿಂದ ತಯಾರಿಸುವ ಗುರಿಯನ್ನು ಸರಕಾರ ಹೊಂದಿದೆ ಹಾಗೂ
ಅದರ ಸಾಧನೆಗೂ ಈ ನೀತಿಯು (day time electricity charges) ನೆರವಾಗಲಿದೆ

.
ರಾತ್ರಿ/ಹಗಲು ದರ ವ್ಯತ್ಯಾಸವೇಕೆ?
”ಸೌರ ವಿದ್ಯುತ್ ಉತ್ಪಾದನೆಯು ಇದೀಗ ಅಗ್ಗವಾಗಿದೆ. ಸೌರ ವಿದ್ಯುತ್ ಉತ್ಪಾದನೆಯಾಗುವ ಸಮಯದಲ್ಲೇ ಅಂದರೆ ಬಿಸಿಲು ಇರುವಾಗ ವಿದ್ಯುತ್ ಬಳಸಿದರೆ ಅದಕ್ಕೆ ಶುಲ್ಕವು ಕಡಿಮೆ ಇರಲಿದೆ.
ರಾತ್ರಿಗಳಲ್ಲಿ ಅಂದರೆಸೌರಶಕ್ತಿ ಲಭ್ಯವಿಲ್ಲದ ಸಮಯದಲ್ಲಿ ಜಲ ಮತ್ತು ಅನಿಲ ಆಧಾರಿತ ಸ್ಥಾವರಗಳ ಮೂಲಕ ಮತ್ತು ಶಾಖೋತ್ಪನ್ನ ಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಪರಿಸರದ ಮೇಲೆ
ಈ ಪ್ರಕ್ರಿಯೆಯು ಯಾವುದೇ ಪರಿಣಾಮ ಬೀರುವುದಲ್ಲದೆ, ತಯಾರಿಕೆ ವೆಚ್ಚವೂ ಹೆಚ್ಚು. ರಾತ್ರಿ ವೇಳೆ ಬಳಸುವ ವಿದ್ಯುತ್ಗೆ ಹೀಗಾಗಿ ಹೆಚ್ಚು ದರ ವಿಧಿಸಲಾಗುವುದು,” ಎಂದು ಸಚಿವ ಆರ್.ಕೆ.ಸಿಂಗ್ ಮಾಹಿತಿ ನೀಡಿದ್ದಾರೆ.
ಯಾವಾಗಿನಿಂದ ಅನ್ವಯ?
ವಾಣಿಜ್ಯ (Commercial) ಮತ್ತು ಕೈಗಾರಿಕಾ (Industrial) ಬಳಕೆದಾರರಿಗೆ ಏಪ್ರಿಲ್ 2024 ರಿಂದ ಈ ನೀತಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಕೃಷಿ ಉದ್ದೇಶಕ್ಕೆ ಹೊರತುಪಡಿಸಿ ನಂತರದ ದಿನಗಳಲ್ಲಿ
ಗೃಹ ಬಳಕೆ ಸೇರಿದಂತೆ ಈ ನಿಯಮ ಉಳಿದೆಲ್ಲ ವಿದ್ಯುತ್ ಬಳಕೆಗೂ ಅನ್ವಯವಾಗಲಿದೆ.

ಯಾರಿಗೆ ಲಾಭ, ಯಾರಿಗೆ ನಷ್ಟ?
ರಾತ್ರಿ ವೇಳೆ ಎ.ಸಿ(Air Conditioner) ಬಳಸುವ, ಹೆಚ್ಚು ಫ್ಯಾನ್ ಬಳಸುವ ಮತ್ತು ತಡರಾತ್ರಿವರೆಗೂ ಲೈಟ್ ಉರಿಸುವ ಮನೆಗಳಲ್ಲಿ ಈ ಹೊಸ ವಿದ್ಯುತ್ ದರ ನೀತಿ ಜಾರಿಯಾದರೆ ವಿದ್ಯುತ್ ಬಿಲ್ ಹೆಚ್ಚಳವಾಗಲಿದೆ.
ಹಗಲಿನಲ್ಲಿ ಬಳಸುವಂತಹ ಡಿಶ್ ವಾಷರ್,ವಾಷಿಂಗ್ ಮೆಷಿನ್ ಇತ್ಯಾದಿ ಪರಿಕರಗಳ ಬಳಕೆಗೆ ಬಳಸಿದ ವಿದ್ಯುತ್ ಬಿಲ್ ಕಡಿಮೆಯಾಗಲಿದೆ.
33 ವರ್ಷದಲ್ಲೇ ಗರಿಷ್ಠ ಬಳಕೆ
ತೀವ್ರ ತಾಪಮಾನದಿಂದಾಗಿ ಹಾಗೂ ಹೆಚ್ಚಿದ ಆರ್ಥಿಕ ಚಟುವಟಿಕೆಯಿಂದಾಗಿ 33 ವರ್ಷದಲ್ಲೇ ಭಾರತದಲ್ಲಿ ವಿದ್ಯುತ್ ಬಳಕೆ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿದೆ. ಅಲ್ಲದೆ, ವಿದ್ಯುತ್ ಬೇಡಿಕೆಯು 2027ರ ಮಾರ್ಚ್ವರೆಗೆ
ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ. ವರ್ಷದಿಂದ ವರ್ಷಕ್ಕೆ ಸರಾಸರಿ ಬೇಡಿಕೆಯು ಶೇ. 7.2ರಷ್ಟು ಏರಲಿದೆ ಎಂದು ಸರಕಾರ ಅಂದಾಜಿಸಿದೆ.
ರಶ್ಮಿತಾ ಅನೀಶ್