ಸೋಯಾ ಆರೋಗ್ಯಪೂರ್ಣ ಆಹಾರ ಅಲ್ವಾ? ಯಥೇಚ್ಛವಾಗಿ ಸೋಯಾ ತಿಂದ್ರೆ ಏನು ತೊಂದ್ರೆ ಆಗುತ್ತೆ?

ಸ್ನೇಹಿತ್ರೆ ಸೋಯಾ(Soya) ತಿನ್ನುವ ಮುನ್ನ ಎಚ್ಚರ! ಯಥೇಚ್ಛ ಸೋಯಾ ತಿಂದ್ರೆ ಏನಾಗುತ್ತೆ ತೊಂದ್ರೆ? ಪುರುಷರು ಯಾಕೆ ಸೋಯಾಬೀನ್(careful before eating soya) ತಿನ್ನಬಾರದು? ಗರ್ಭಪಾತಕ್ಕೆ ಕಾರಣವಾಗಲಿದಾ ಸೋಯ ಉತ್ಪನ್ನ?

ಸ್ನೇಹಿತ್ರೆ ನೀವು ಸೋಯಾ ಪ್ರಿಯರಾ? ಸೋಯಾ ಚಂಕ್ಸ್‌, ಸೋಯಾ ಮಿಲ್ಕ್‌, ಸೋಯಾ ಕಾಳು, ಸೋಯಾ ಬಟರ್‌ ಹೀಗೆ ಪ್ರತಿಯೊಂದಕ್ಕೂ ಸೋಯಾವನ್ನೇ ಅವಲಂಭಿಸಿದ್ದೀರಾ? ಹಾಗಾದ್ರೆ ನೀವು ಸೋಯಾದ ಒಂದಿಷ್ಟು ಸೀಕ್ರೆಟ್ಸ್‌ ತಿಳ್ಕೋಳ್ಲೇ ಬೇಕು.

ಯಾಕಂದ್ರೆ ಕೆಲವೊಮ್ಮೆ ಹೆಚ್ಚಾದ್ರೆ ಅಮೃತವೂ ವಿಷವಾಗುತ್ತೆ. ನೀವು ಆರೋಗ್ಯಕ್ಕೆ ಒಳ್ಳೆದು, ಇದ್ರಿಂದ ಸಾಕಷ್ಟು ಪ್ರೋಟೀನ್‌(protein) ಸಿಗುತ್ತೆ ಅಂತ ಯಥೇಚ್ಛವಾಗಿ ತಿಂದ್ರೆ ಕಾದಿದೆ ಅಪಾಯ.

ಅದ್ರಲ್ಲೂ ಪುರುಷರಿಗಂತು ನಾನಾ ಸಮಸ್ಯೆಗಳು ಕಾಡಬಹುದು ಜೋಕೆ. ಹಾಗಾದ್ರೆ ಮಿತಿ ಮೀರಿ ಸೋಯಾ ತಿಂದ್ರೆ ಏನೆಲ್ಲಾ ತೊಂದ್ರೆ ಆಗುತ್ತೆ ಅನ್ನೋದನ್ನು ನೋಡೋಣ ಬನ್ನಿ.

ದೇಹದ ತೂಕ ಹೆಚ್ಚುತ್ತೆ ಗೊತ್ತಾ?:

ಸಸ್ಯಾಹಾರಿಗಳಿಗೆ ಈ ಸೋಯಾ ಕಾಳಿನಿಂದ ಸಾಕಷ್ಟು ಪ್ರೊಟೀನ್ ವಿಟಮಿನ್‌ಗಳು ಸಿಗುತ್ತೆ ನಿಜ. ಇನ್ನು ಜಿಮ್ ಮಾಡುವವರು ತೂಕ ಕಡಿಮೆ ಮಾಡಲು ಅಂತ (careful before eating soya) ಉಳಿದ ಆಹಾರಗಳನ್ನು ಬಿಟ್ಟು ಬರೀ ಸೋಯಾ ಪದಾರ್ಥವನ್ನೇ ತಿಂತಾರೆ. ಆದ್ರೆ ಒಂದು ಸತ್ಯವನ್ನ ತಿಳಿದುಕೊಳ್ಳಿ.

ಸೋಯಾ ತಿಂದ್ರೆ ತೂಕ ಇಳಿಯಲ್ಲ, ಬದಲಾಗಿ ತೂಕ ಹೆಚ್ಚಾಗುತ್ತೆ. ಯಾಕೆ ಗೊತ್ತಾ? 100 ಗ್ರಾಂ ಸೋಯಾಬಿನ್‌ನಲ್ಲಿ 20 ಗ್ರಾಂ ಫ್ಯಾಟೇ ಇರುತ್ತೆ.

ಆದ್ದರಿಂದ ಹೆಚ್ಚಿನ ಪ್ರಮಾಣ ಸೋಯಾಬಿನ್ ತಿನ್ನುವುದರಿಂದ ತೂಕ ಹೆಚ್ಚುತ್ತೆ ಜೊತೆಗೆ ಬೊಜ್ಜು ಕೂಡ ಜಾಸ್ತಿಯಾಗುತ್ತದೆ.

ಗರ್ಭಿಣಿಯರು ಸೋಯಾದಿಂದ ದೂರ ಇರಿ:

ಹೌದು ಗರ್ಭಿಣಿಯರು ಹೆಚ್ಚು ಸೋಯಾ ಸೇವಿಸುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ.

ಏಕೆಂದರೆ ಸೋಯಾ ತಿನ್ನುವುದರಿಂದ ನಿಮ್ಮ ಮಗುವಿನ ಬೆಳವಣಿಗೆಗೆ ಅಡ್ಡಿಯಾಗಬಹುದು ಅಷ್ಟೇ ಅಲ್ಲದೆ ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಕೂಡ ಕುಗ್ಗಿಸುತ್ತದೆ. ಇದರಿಂದ ಗರ್ಭಿಣಿಯರು ಸೋಯದಿಂದ ದೂರ ಉಳಿಯುವುದು ಉತ್ತಮ.

ಥೈರಾಯ್ಡ್ ಸಮಸ್ಯೆ, ನಿದ್ರಾಹೀನತೆ ಬರುತ್ತೆ:

ಸೋಯಾ ಸೇವಿಸುವುದರಿಂದ ಥೈರಾಯ್ಡ್ ಫಂಕ್ಷನ್ಸ್ ಏರುಪೇರು ಆಗಲಿದೆ.

ಏಕೆಂದರೆ ಸೋಯಾದಲ್ಲಿ ಐಸೋ ಫ್ಲವರ್ಸ್ ಎಂಬ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿರುವುದರಿಂದ ಇದು ಥೈರಾಯ್ಡ್ ಹಾರ್ಮೋನ್ ಗಳನ್ನು ಕಡಿಮೆ ಮಾಡುತ್ತದೆ.

ಇದನ್ನು ಹೈಪೋ ಥೈರಾಯಿಡ್ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಇದು ನಿದ್ರಾಹೀನತೆ ,ಕಾನ್ಸ್ಟಿಪೇಶನ್ ಮಲಬದ್ಧತೆ ಸಮಸ್ಯೆಗಳು ಕೂಡ ಕಾಡುತ್ತದೆ.

ಜೀರ್ಣಕ್ರಿಯೆ ಸಮಸ್ಯೆ ಬರುತ್ತೆ:

ಇನ್ನು ಸೋಯದಲ್ಲಿ ಇರುವ ಇನ್ ಸಾಲಿಬಲ್ ಅಂಶವು ನಮ್ಮ ಜೀರ್ಣಕ್ರಿಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಆಹಾರವನ್ನು ಬೇಗ ಜೀರ್ಣವಾಗಲು ಬಿಡುವುದಿಲ್ಲ. ಇದರಿಂದ ಅಜೀರ್ಣ ಕಾಡುತ್ತದೆ.

ಮೂತ್ರಪಿಂಡದ ಕಲ್ಲಿನ ಸಮಸ್ಯೆ:

ಸೋಯಾ ಉತ್ಪನ್ನಗಳಲ್ಲಿ ಆಕ್ಸಲೇಟ್‌ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ ಇದರಿಂದ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಕಾಣುತ್ತದೆ. ಆದುದರಿಂದ ಮೂತ್ರಪಿಂಡ ಸಮಸ್ಯೆ ಇರುವವರು ಇದರಿಂದ ದೂರ ಉಳಿಯುವುದು ಉತ್ತಮ.

ಪುರುಷರಲ್ಲಿ ಲೈಂಗಿಕ ಶಕ್ತಿ ಕುಂಠಿತ:

ಹೌದು ಅಧ್ಯಯನದಿಂದ ತಿಳಿದು ಬಂದ ಅಂಶವೇನಂದ್ರೆ ಪ್ರತಿನಿತ್ಯ ಸೋಯಾಬಿನ್ ಸೇವನೆಯು ಪುರುಷರಿಗೆ ಮಾರಕವೆಂದು ಸಾಬೀತಾಗಿದೆ.

ಏಕೆಂದರೆ ಇದನ್ನು ತಿನ್ನುವುದರಿಂದ ಪುರುಷರಲ್ಲಿ ಲೈಂಗಿಕ ಶಕ್ತಿ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಇಸ್ಟ್ರೋಜನ್ ಹಾರ್ಮೋನ್ ಹೆಚ್ಚಾಗುತ್ತದೆ. ಆದುದರಿಂದ ಪುರುಷರು ಆದಷ್ಟು ಸೋಯಾಬೀನ್ ತಿನ್ನದೇ ಇರುವುದು ಉತ್ತಮ.

ಈಗಲಾದ್ರೂ ಗೊತ್ತಾಯ್ತಾ, ಅತಿಯಾದ್ರೆ ಅಮೃತವೂ ವಿಷವಾಗಿತ್ತೆ ಅಂತ. ಹಾಗಾಗಿ ಎಲ್ಲಾ ಬಿಟ್ಟು ಬರೀ ಸೋಯಾಬಿನ್‌ ಪದಾರ್ಥ ತಿಂದ್ರೆ ನಾನಾ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ. ಹಾಗಾಗಿ ಎಲ್ಲಾ ಕಾಳು ಬೇಳೆ ತರಕಾರಿಗಳ ಜೊತೆಗೆ ಸೋಯಾಬೀನ್ ತಿನ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಿ.


ಪ್ರೀತು ಮಹೇಂದರ್‌

Exit mobile version