ಕ್ಯಾರೆಟ್ ತಿನ್ನುವ ಮೂಲಕ ಆರೋಗ್ಯದ ಲಾಭಗಳನ್ನ ಪಡೆಯಿರಿ.

Health Benefits of Carrot : ಪ್ರತಿದಿನ ಅಡುಗೆಗೆ ಬಳಸುವ ತರಕಾರಿಗಳಲ್ಲಿ ಕ್ಯಾರೆಟ್ ಕೂಡ ಒಂದು. ಕಿತ್ತಳೆ ಬಣ್ಣದಲ್ಲಿ ಕಂಗೊಳಿಸುವ ಕ್ಯಾರೆಟ್ ನೋಡ ನೋಡುತ್ತಿದಂತೆ ನಮ್ಮನ್ನು

ಕೈ ಬೀಸಿ ಕರೆಯುತ್ತದೆ. ಕ್ಯಾರೆಟ್ ನಮ್ಮ ಆರೋಗ್ಯ ಪ್ರಯೋಜನಗಳಿಗಾಗಿ ಸಾಕಷ್ಟು ಫೇಮಸ್ ಆಗಿದ್ದು, ಕ್ಯಾರೆಟ್ ತಿನ್ನುವುದರಿಂದ ಬುದ್ಧಿ ಚುರುಕು, ಮತ್ತು ,ಕಣ್ಣಿನ ದೃಷ್ಟಿ ಹೆಚ್ಚಾಗುವುದಲ್ಲದೆ ಮುಖದ

ಕಾಂತಿ ಸೌಂದರ್ಯ (Health Benefits of Carrot) ಹೆಚ್ಚಾಗುತ್ತದೆ.

ಇನ್ನು ಕ್ಯಾರೆಟ್ ಅನ್ನು ಹಲ್ವಾ ತಯಾರಿಸಿ ತಿನ್ನುವುದರಿಂದ ದುಪ್ಪಟ್ಟು ಪ್ರಯೋಜನಗಳನ್ನು ಪಡೆಯಬಹುದು ಅಲ್ಲದೆ ಕ್ಯಾರೆಟ್ ಹಲ್ವಾ ತಯಾರಿಸಿ ಸೇವಿಸಿದರೆ ಅದರಿಂದ ಆಗುವ ಆರೋಗ್ಯ

ಲಾಭಗಳನ್ನು ಹೇಗೆ ಪಡೆದುಕೊಳ್ಳ ಬಹುದು ಎಂಬುದನ್ನು ನೋಡೋಣ.

ಕ್ಯಾರೆಟ್ ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಮಗೆಲ್ಲ ಗೊತ್ತಿರುವ ವಿಷಯ ಇದಕ್ಕೆ ಕಾರಣ ಕ್ಯಾರೆಟ್ ನಲ್ಲಿ ಕಂಡು ಬರುವ ವಿಟಮಿನ್ ಎ, ವಿಟಮಿನ್ ಸಿ ಮತ್ತು ನಾರಿನ ಪ್ರಮಾಣ.

ಇರುವುದರಿಂದ ಕಣ್ಣು ಮಾತ್ರವಲ್ಲದೆ ಚರ್ಮದ ಆರೋಗ್ಯವನ್ನು ಸಹ ಕಾಪಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾರೆಟ್ ಹಲ್ವಾದಲ್ಲಿ ಹಾಲು ಬಳಸುವುದರಿಂದ ಮತ್ತಷ್ಟು ಪೌಷ್ಟಿಕಾಂಶಗಳು ಸೇರುತ್ತವೆ ಹಾಗಾಗಿ ಅಗತ್ಯ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಇದರಲ್ಲಿ ಸೇರುವುದರಿಂದ ಅತ್ಯುತ್ತಮ ಆರೋಗ್ಯ

ಲಾಭಗಳು ನಮಗೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ಯಾರೆಟ್ ಹಲ್ವಾ ತಯಾರಿಸುವಾಗ ತುಪ್ಪ ಬಳಸುವುದರಿಂದ ನಮ್ಮ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ ಅಲ್ಲದೆ ಆರೋಗ್ಯಕರವಾದ ಮತ್ತು ಕಾಂತಿಯಿಂದ ಕೂಡಿದ ಚರ್ಮ ನಮ್ಮದಾಗುವಂತೆ

ಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಅಮೈನೋ ಆಮ್ಲಗಳು ನಮ್ಮ ಮೂಳೆಗಳ ಸಮಸ್ಯೆಗಳನ್ನು ದೂರ ಮಾಡುತ್ತವೆ.

ಚಳಿಗಾಲದಲ್ಲಿ ಒಳ್ಳೆಯದು
ಚಳಿಗಾಲದಲ್ಲಿ ಚರ್ಮವು ಒಣಗಿದಂತಾಗುತ್ತದೆ ಇದನ್ನು ತಡೆಗಟ್ಟಲು ಕ್ಯಾರೆಟ್ ಹಲ್ವಾ ಮಾಡಿ ತಿನ್ನುವುದರಿಂದ ದೇಹದ ತಾಪಮಾನವನ್ನು ನಿರ್ವಹಣೆ ಮಾಡುವಲ್ಲಿ ಸಹಾಯವಾಗುತ್ತದೆ. ಏಕೆಂದರೆ ಇದರಲ್ಲಿ

ಬಳಸಲಾಗುವ ತುಪ್ಪ, ನಮ್ಮ ದೇಹಕ್ಕೆ ಉಷ್ಣ ಪ್ರಭಾವವನ್ನು ಕೂಡಲೇ , ಶೀತಕ್ಕೆ ಸಂಬಂಧಪಟ್ಟಂತೆ ಯಾವುದೇ ತರಹದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಮತ್ತು ಸೋಂಕುಗಳು ಉಂಟಾಗದಂತೆ ಕಾಪಾಡುತ್ತದೆ.​

ಚಳಿಗಾಲದಲ್ಲಿ ಎಲ್ಲಕ್ಕಿಂತ ಕ್ಯಾರೆಟ್ ಜ್ಯೂಸ್ ತುಂಬಾ ಒಳ್ಳೆಯದು. ಕ್ಯಾರೆಟ್ ಹಲ್ವಾದಲ್ಲಿ ಬಳಸಲಾಗುವ ತುಪ್ಪ ಮತ್ತು ಡ್ರೈ ಫ್ರೂಟ್ಸ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಏಕೆಂದರೆ ಡ್ರೈ ಫ್ರೂಟ್ಸ್

ನಮ್ಮಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿದ್ದು, ಜೊತೆಗೆ ಸಿಗುವ ಪ್ರೋಟೀನ್ ನಮ್ಮ ದೇಹದ ಮೂಳೆಗಳಿಗೆ ಬಲ ನೀಡುತ್ತದೆ.

ಇದುವರೆಗೂ ಕ್ಯಾರೆಟ್ ಪ್ರಯೋಜನಗಳನ್ನೂ ತಿಳಿಡಿದ್ದೇವೆ ಈಗ ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಎಂದು ನೋಡೋಣ.

ಇದನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು
ಒಂದು ಕೆಜಿ ಕ್ಯಾರೆಟ್
ಏಲಕ್ಕಿ 5-7
ಒಂದುವರೆ ಲೀಟರ್ ಹಾಲು
ತುಪ್ಪ 5-7 ಟೇಬಲ್ ಚಮಚ
ಸಕ್ಕರೆ ರುಚಿಗೆ ತಕ್ಕಷ್ಟು
ಗೋಡಂಬಿ, ಒಣ ದ್ರಾಕ್ಷಿ

ಈಗ ಕ್ಯಾರೆಟ್ ಹಲ್ವಾ ಮಾಡುವ ವಿಧಾನವನ್ನು ನೋಡೋಣ ಬನ್ನಿ :- ನೀವು ತೆಗೆದುಕೊಂಡ ಕ್ಯಾರೆಟ್ ಗಳ ಸಿಪ್ಪೆ ಸುಲಿದು ಚೆನ್ನಾಗಿ ಸ್ವಚ್ಛಗೊಳಿಸಿ.ಪ್ಯಾನ್ ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಅದಕ್ಕೆ ತುರಿದ

ಕ್ಯಾರೆಟ್ ಸೇರಿಸಿ , ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳು ಇದನ್ನು ಬಾಡಿಸಿ, ನಂತರ ಸಕ್ಕರೆ ಹಾಕಿದ ನಂತರದಲ್ಲಿ, ಇನ್ನು ಸ್ವಲ್ಪ ಹೊತ್ತು ಕ್ಯಾರೆಟ್ ಬಣ್ಣ ಬದಲಾಗುವವರೆಗೆ ಬಾಡಿಸಿ, ಕೊನೆಯಲ್ಲಿ

ಡ್ರೈ ಫ್ರೂಟ್ಸ್ ಸೇರಿಸಿ ತಿನ್ನಲು ಕೊಡಿ ತಿನ್ನಲು ಸಿಹಿ ಅರೋಗ್ಯದ ಪ್ರಯೋಜನವನ್ನು ಪಡೆಯಿರಿ.​

ಇದನ್ನು ಓದಿ: ಪರಿಶಿಷ್ಟ ಜಾತಿಯವನು ಎನ್ನುವ ಕಾರಣಕ್ಕೆ ಹೆಡಗೇವಾರ್ ವಸ್ತುಸಂಗ್ರಹಾಲಯ ಪ್ರವೇಶಕ್ಕೆ ಬಿಡಲಿಲ್ಲ: ಗೂಳಿಹಟ್ಟಿ ಶೇಖರ್

Exit mobile version