ರಸ್ತೆ ಬ್ಲಾಕ್ ಮಾಡಿ, ಮದ್ಯ ಸೇವಿಸಿದ ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿ ; ಕೇಸ್ ದಾಖಲು!

ವಿಮಾನದಲ್ಲೇ ಸಿಗರೇಟು(Cigarette) ಸೇದಿ ವಿವಾದಕ್ಕೆ ಗುರಿಯಾಗಿದ್ದ ಹರಿಯಾಣದ(Haryana) Social Media Influencer ಹಾಗೂ ದೇಹದಾರ್ಢ್ಯಪಟು ಬಾಬಿ ಕಟಾರಿಯಾ(Bobby Katariya) ಎಂಬಾತ ನಡುರಸ್ತೆಯಲ್ಲೇ ಮದ್ಯ(Liquor/Alcohal) ಕುಡಿದಿರುವುದು ಈಗ ಬಹಿರಂಗವಾಗಿದೆ.

ವಿಮಾನದೊಳಗೆ ಸಿಗರೇಟ್ ಸೇದಿ ಈಗಾಗಲೇ ವಿವಾದವನ್ನು ಮೈಮೇಲೆ ಎಳೆದುಕೊಂಡ ಬೆನ್ನಲ್ಲೆ ಈತ ಮತ್ತೊಂದು ಪ್ರಕರಣದಲ್ಲಿ ಸಿಲುಕಿರುವುದು ವಿಪರ್ಯಾಸ. ಈತ ಸ್ಪೈಸ್‌ಜೆಟ್‌ ವಿಮಾನದಲ್ಲಿ ಧೂಮಪಾನ ಮಾಡಿದ ವಿಡಿಯೊವೊಂದು(Video) ಸಾಮಾಜಿಕ ಜಾಲತಾಣಗಳಲ್ಲಿ(Social Media) ಹರಿದಾಡುತ್ತಿದ್ದಂತೆ, ಈ ಸಂಬಂಧ ತನಿಖೆ ನಡೆಸುವಂತೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಧಿಕಾರಿಗಳಿಗೆ ಆದೇಶಿಸಿದ್ದರು.

ಈಗ ನಡುರಸ್ತೆಯಲ್ಲಿ ಮದ್ಯ ಸೇವನೆ ಮಾಡಿದ ಹಿನ್ನೆಲೆಯಲ್ಲಿ ಕಟಾರಿಯ ವಿರುದ್ಧ ಮತ್ತೊಂದು ಪ್ರಕರಣವೂ ದಾಖಲಾಗಿದೆ.
ಈ ಬಾಬಿ ಕಟಾರಿಯಾ, ಡೆಹ್ರಾಡೂನ್ನ(Deharadun) ಜನನಿಬಿಡ ರಸ್ತೆಯಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋವೊಂದು ವೈರಲ್(Viral) ಆದ ನಂತರ ಉತ್ತರಾಖಂಡ್ ಪೊಲೀಸರು(Uttarkhand Police) ಇನ್‌ಸ್ಟಾಗ್ರಾಮ್(Instagram) ಸೆಲೆಬ್ರಿಟಿಯಾದ ಬಾಬಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜುಲೈ 28 ರಂದು ಕಟಾರಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ರಸ್ತೆಗಳಲ್ಲಿ ಆನಂದಿಸಲು ಇದು ಸಮಯ” ಎಂಬ ಶೀರ್ಷಿಕೆಯನ್ನು ನೀಡಿ ರಸ್ತೆಯಲ್ಲಿ ಮದ್ಯ ಸೇವನೆ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ನೆಟ್ಟಿಗರ ಕಣ್ಣು ಕೆಂಪಾಗಿಸಿತ್ತು, ಭಾರೀ ಟೀಕೆಗೆ ಗುರಿಯಾಗಿತ್ತು. ಇಂತಹ ವಿಡಿಯೋಗಳನ್ನು ಮಾಡುವ ಸಂದರ್ಭದಲ್ಲಿ ಈತನ ಜೊತೆ ಇನ್ನೊಬ್ಬ ವ್ಯಕ್ತಿಯೂ ಕೂಡ ಸೇರಿಕೊಂಡಿದ್ದು,

ಆತನ ವಿರುದ್ಧವೂ ತನಿಖೆ ನಡೆಸುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಸದ್ಯ, ಇನ್‌ಸ್ಟಾಗ್ರಾಮ್‌ನಲ್ಲಿ 6.3 ಲಕ್ಷ ಅನುಯಾಯಿಗಳನ್ನು ಹೊಂದಿರುವ ಕಟಾರಿಯಾ, ರಸ್ತೆಯ ಮಧ್ಯೆ ಕುರ್ಚಿ, ಟೇಬಲ್ ಹಾಕಿ ಮದ್ಯ ಸೇವಿಸುತ್ತಿರುವುದನ್ನು ಕಾಣಬಹುದು. ಇದನ್ನು ಕಟಾರಿಯಾನ ಸಹಾಯಕರು ಚಿತ್ರೀಕರಿಸಿದ್ದಾರೆ. ನಂತರ ಈ ವೀಡಿಯೊವನ್ನು “ರೋಡ್ ಅಪ್ನೆ ಬಾಪ್ ಕಿ” ಎಂಬ ಹಾಡಿನೊಂದಿಗೆ ಅಪ್‌ಲೋಡ್ ಮಾಡಲಾಗಿದೆ.


ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಅವರು ಕಟಾರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಬಗ್ಗೆ ಉತ್ತರಾಖಂಡ್ ಪೊಲೀಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್(Tweet) ಮಾಡಿದೆ.

ಪೊಲೀಸರ ಟ್ವೀಟ್‌ಗೆ ಪ್ರತ್ಯುತ್ತರ ನೀಡುತ್ತಾ ಅನೇಕ ಬಳಕೆದಾರರು, ಗೌರವ್ ಖಂಡೇಲ್ವಾಲ್ ಎನ್ನುವ ವ್ಯಕ್ತಿಯೊಂದಿಗೆ ಕಟಾರಿಯಾ ಇಂತಹ ಅನೇಕ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಖಂಡೇಲ್ವಾಲ್ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Exit mobile version