ಕಾರ್ಡ್ ಇಲ್ಲದಿದ್ದಲ್ಲಿ ಇನ್ನು ಮುಂದೆ ಮೊಬೈಲ್​ನ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯಬಹುದು…ಹೇಗೆ? ಇಲ್ಲಿದೆ ಮಾಹಿತಿ

Tech News : ತಂತ್ರಜ್ಞಾನ ಮುಂದುವರೆದಂತೆ, ಹೊಸ ಆವಿಷ್ಕಾರಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಎಟಿಎಂ (cash withdraw through UPI) ಮತ್ತು ಯುಪಿಐಗಳನ್ನು

(UPI) ಪರಿಚಯಿಸಿದ ನಂತರ, ಬ್ಯಾಂಕಿಂಗ್ (Banking) ವ್ಯವಸ್ಥೆಯು ಸುಲಭವಾಯಿತು. ಎಟಿಎಂನಲ್ಲಿ ನಗದು ಪಡೆಯುವುದರಿಂದ ಹಿಡಿದು ಸ್ಟೇಟ್ಮೆಂಟ್​ವರೆಗೆ ಹಲವು ಕಾರ್ಯಗಳನ್ನು ನಿರ್ವಹಿಸಬಹುದು.

ನಮಗೆ ನಗದು ಬೇಕಾದರೆ ಬ್ಯಾಂಕ್‌ಗೆ ಹೋಗಿ ನಮ್ಮ ಖಾತೆಯಿಂದ ಪಡೆಯುತ್ತೇವೆ. ಇಲ್ಲದಿದ್ದರೆ ನಾವು ಎಟಿಎಂನಲ್ಲಿ ಹಣವನ್ನು ತೆಗೆದುಕೊಳ್ಳುತ್ತೇವೆ.

ಎಟಿಎಂಗಳಲ್ಲಿ ಪಡೆಯಲು ಕಾರ್ಡ್ ಅಗತ್ಯವಿದೆ. ಆದಾಗ್ಯೂ, ನೀವು ಈಗ ಎಟಿಎಂನಿಂದ ಕಾರ್ಡ್ ಇಲ್ಲದೆಯೂ (cash withdraw through UPI) ಹಣವನ್ನು ಪಡೆಯಬಹುದು.

ICCW ಅಥವಾ Interoperable Cardless Cash Withdrawal ಎಂಬ ತಂತ್ರಜ್ಞಾನವನ್ನು ಅನಾವರಣಗೊಳಿಸಲಾಗಿದೆ. ಇಲ್ಲಿ ನಾವು ಯುಪಿಐ ಆಪ್ ಮೂಲಕ ಎಟಿಎಂನಲ್ಲಿ ಹಣವನ್ನು ಪಡೆಯಬಹುದು.

ಈ ಮೂಲಕವಾಗಿ ನೀವು ದಿನಕ್ಕೆ 10,000 ರೂ.ವರೆಗೆ ಪಡೆಯಲು ಸಾಧ್ಯ,UPI ಮೂಲಕ, ನೀವು ಎಟಿಎಂಗಳಿಂದ ದಿನಕ್ಕೆ ಎರಡು ಬಾರಿ ಮಾತ್ರ ಹಣವನ್ನು ಪಡೆಯಬಹುದು. ಒಂದು ಬಾರಿಗೆ 5,000 ರೂ.ವರೆಗೆ ಸ್ವೀಕರಿಸಬಹುದು

ಅಂದರೆ ದಿನಕ್ಕೆ 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಡೆಯಲು ಪ್ರಸ್ತುತ ಸಾಧ್ಯವಾಗುವುದಿಲ್ಲ. ಬ್ಯಾಂಕ್ ಆಫ್ ಬರೋಡಾ (Bankk of Baroda) ಮಾತ್ರ ಇಲ್ಲಿಯವರೆಗೆ ICCW ಅನ್ನು ಜಾರಿಗೊಳಿಸಿದೆ. ಭವಿಷ್ಯದಲ್ಲಿ ಇತರ ಬ್ಯಾಂಕುಗಳು ಇದನ್ನು ಬಳಸಬಹುದು.

ಇದನ್ನೂ ಓದಿ : ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಭಾರತ-ಆಸ್ಟ್ರೇಲಿಯಾ ನಡುವೆ ರೋಚಕ ಕದನಕ್ಕೆ ಕ್ಷಣಗಣನೆ

ಸದ್ಯಕ್ಕೆ ಯುಪಿಐ ಮೂಲಕ ಕ್ಯಾಷ್ ವಿತ್​ಡ್ರಾ ಮಾಡಲು ಬ್ಯಾಂಕ್ ಆಫ್ ಬರೋಡಾದ ಎಟಿಎಂಗಳಲ್ಲಿ ಮಾತ್ರ ಸಾಧ್ಯವಿದೆ. ಹಾಗಂದ ಮಾತ್ರಕ್ಕೆ ಕೇವಲ ಬ್ಯಾಂಕ್ ಆಫ್ ಬರೋಡಾದ ಖಾತೆದಾರರಿಗೆ ಮಾತ್ರವೇ ಈ ಸೇವೆ

ಸೀಮಿತವಾಗಿಲ್ಲ.ಬ್ಯಾಂಕ್ ಆಫ್ ಬರೋಡಾದ ಎಟಿಎಂಗೆ ಯಾವುದೇ ಬ್ಯಾಂಕ್​ನ ಗ್ರಾಹಕರು ಕೂಡ ಹೋಗಿ ಕಾರ್ಡ್ ಬಳಸದೆಯೇ ಯುಪಿಐ ಮೂಲಕ ಕ್ಯಾಷ್ ಡ್ರಾ ಮಾಡಿಕೊಂಡು ಬರಬಹುದು.

ಐಸಿಸಿಡಬ್ಲ್ಯೂ ಆಯ್ಕೆಯು ಯುಪಿಐ ಆ್ಯಪ್​ಗಳಲ್ಲಿ ಎನೇಬಲ್ ಆಗಿರಬೇಕು :

ಮುಖ್ಯವಾಗಿ ಇಲ್ಲಿ ಗ್ರಾಹಕರು ಗಮನಿಸಬೇಕಾದ ಅಂಶವೆಂದರೆ ಗ್ರಾಹಕರು ಬ್ಯಾಂಕ್ ಆಫ್ ಬರೋಡಾದ ವರ್ಲ್ಡ್ ಯುಪಿಐ,ಭೀಮ್ ಯುಪಿಐ,ಫೋನ್​ಪೇ (Phone pay),ಪೇಟಿಎಂ (Paytm), ಅಥವಾ ಅಥವಾ ಬೇರೆ

ಯಾವುದಾದರೂ ಇತರ ಯುಪಿಐ ಆ್ಯಪ್​ಗಳನ್ನು ಅವರ ಮೊಬೈಲ್​ಗಳಲ್ಲಿ ಹೊಂದಿರಬೇಕು.ಆ ಆಪ್ ನಲ್ಲಿ ಐಸಿಸಿಡಬ್ಲ್ಯೂ(ICCW) ಆಯ್ಕೆಯನ್ನು ಎನೇಬಲ್ ಮಾಡಿಕೊಂಡಿರಬೇಕು.

ಆಗ ಮಾತ್ರವೇ ಎಟಿಎಂ ನಲ್ಲಿ ಯುಪಿಐ ಮೂಲಕ ಕ್ಯಾಷ್ ವಿತ್​ಡ್ರಾ ಮಾಡಬಹುದು.

ಯುಪಿಐ ಬಳಸಿ ಎಟಿಎಂನಲ್ಲಿ ಹಣ ಡ್ರಾ ಮಾಡುವ ವಿಧಾನ :

  1. ಮೊದಲು ಬ್ಯಾಂಕ್ ಅಫ್ ಬರೋಡಾದ ಯಾವುದಾದರೂ ಎಟಿಎಂ ಸೆಂಟರ್​ಗೆ ಹೋಗಿ
  2. ನಂತರ ಅದರಲ್ಲಿ ಯುಪಿಐ ಕ್ಯಾಷ್ ವಿತ್​ಡ್ರಾಯಲ್ ಎಂಬ ಅಯ್ಕೆ ಅರಿಸಿಕೊಳ್ಳಿ
  3. ನೀವು ವಿತ್​ಡ್ರಾ ಮಾಡಬೇಕೆಂದಿರುವ ಒಟ್ಟು ಮೊತ್ತವನ್ನುಇಲ್ಲಿ ನಮೂದಿಸಿ
  4. ಕ್ಯೂಆರ್ ಕೋಡ್ ಎಟಿಎಂ ಪರದೆ ಮೇಲೆ ಕಾಣಿಸುತ್ತದೆ.
  5. ಈಗಾಗಲೇ ನಿಮ್ಮ ಮೊಬೈಲ್ ನಲ್ಲಿ ಐಸಿಸಿಡಬ್ಲ್ಯೂ ಎನೇಬಲ್ ಆಗಿರುವ ಯುಪಿಐ ಆ್ಯಪ್ ತೆರೆದು ನಂತರ ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿರಿ.
  6. ನಂತರ ನಿಮ್ಮ ಮೊಬೈಲ್ ಆ್ಯಪ್​ನಲ್ಲಿ ಯುಪಿಐ ಪಿನ್ ಹಾಕಿದರೆ ಎಟಿಎಂನಲ್ಲಿ ಹಣ ಬರುತ್ತದೆ.

ಆಗಲೇ ವಿವರಿಸಿದಂತೆ ನೀವು ಎಟಿಎಂನಲ್ಲಿ ಯುಪಿಐ ಮೂಲಕ 5,000 ರೂಗಿಂತ ಹೆಚ್ಚು ಹಣ ಒಂದು ಸಲಕ್ಕೆ ವಿತ್​ಡ್ರಾ ಮಾಡಲು ಆಗುವುದಿಲ್ಲ.

ಯಾವಾಗ ನಿಮ್ಮ ಬಳಿ ಎಟಿಎಂ ಕಾರ್ಡ್ ಇಲ್ಲದಿರುವುದೋ ಆ ಸಂದರ್ಭದಲ್ಲಿ ಈ ಸೌಲಭ್ಯ ಬಹಳ ಸಹಾಯಕ್ಕೆ ಬರುತ್ತದೆ.

ರಶ್ಮಿತಾ ಅನೀಶ್

Exit mobile version