Cashew Fruit : ಗೇರು ಹಣ್ಣಿನಿಂದ ತಯಾರಿಸಲ್ಪಡುವ, ರಾಸಾಯನಿಕ ಮುಕ್ತ ಸಾವಯವ ಪೆನ್ನಿ ಎಂಬ ಮದ್ಯದ ಬಗ್ಗೆ ಇಲ್ಲಿದೆ ಮಾಹಿತಿ

Cashew

Health : ಗೇರು ಬೀಜಕ್ಕೆ(Cashew Fruit Seed) ಅಪಾರ ಬೇಡಿಕೆಯಿರುವುದು ನಮಗೆಲ್ಲ ತಿಳಿದಿರುವ ವಿಷಯ. ಆದರೆ ಬಹಳಷ್ಟು ಜನರಿಗೆ ಗೇರು ಹಣ್ಣಿನ ಮಹತ್ವ ಗೊತ್ತಿಲ್ಲ, ಅದರ ಔಷಧೀಯ ಗುಣಗಳ ಬಗ್ಗೆಯೂ ಅರಿವಿರುವುದಿಲ್ಲ.

500 ವರ್ಷಗಳ ಹಿಂದೆ ಬ್ರಿಟಿಷರು(British) ಭಾರತಕ್ಕೆ ತಂದ ಈ ಗೋಡಂಬಿ ಅಥವಾ ಗೇರು ಹಣ್ಣು ಭಾರತದ(India) ಪಶ್ಚಿಮ ಕರಾವಳಿಯ ಉದ್ದಕ್ಕೂ ಹಬ್ಬಿದೆ.

ಗೋವಾದ(Goa) ಉತ್ತರ ತುದಿಯಿಂದ ಕೇರಳದ ದಕ್ಷಿಣ ತುದಿಯವರೆಗೆ ಕರಾವಳಿಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಅಪಾರ ಪ್ರಮಾಣದ ಗೇರು ಹಣ್ಣನ್ನು ಬೆಳೆಯಲಾಗುತ್ತದೆ.

ಕೇವಲ ಗೇರು ಬೀಜಕ್ಕಷ್ಟೇ ಆದ್ಯತೆ ನೀಡುವ ಕೆಲವರು ಹಣ್ಣನ್ನು ಬಿಸಾಡುತ್ತಾರೆ. ಹಳ್ಳಿ ಪ್ರದೇಶದಲ್ಲಿ ಈಗಲೂ ಒಂದಿಷ್ಟು ಮಂದಿ ಈ ಹಣ್ಣನ್ನು ಇಷ್ಟಪಟ್ಟು ತಿನ್ನುವವರಿದ್ದಾರೆ.

ಈ ಹಣ್ಣಿನಿಂದ ತಂಪು ಪಾನೀಯ, ಚಟ್ನಿ, ಉಪ್ಪಿನಕಾಯಿ, ಹಲ್ವ, ಚಾಕೋಲೇಟ್ ಮುಂತಾದವುಗಳನ್ನು ತಯಾರಿಸಬಹುದು.

https://youtu.be/6clWuCfzpKY

ಸಿಪ್ಪೆಯಿಂದ ರುಚಿಕರವಾದ ಚಟ್ನಿ, ಉಪ್ಪಿನಕಾಯಿ, ಹಲ್ವವನ್ನೂ ಸಿದ್ಧಪಡಿಸಬಹುದು.ಯಾವುದೇ ಪೋಷಣೆಯ ಅಗತ್ಯವಿಲ್ಲದೆ, ಬಿದ್ದಲ್ಲಿ ಬೇರೂರಿ ಕೃಷಿಕರಿಗೆ ಕೈತುಂಬ ವರಮಾನ ನೀಡುವ ಗೇರು ಹಣ್ಣಿನ ಬೆಳೆ ಇತ್ತೀಚೆಗೆ ನಶಿಸುತ್ತಿರುವುದು ಬೇಸರದ ಸಂಗತಿ. ಮಂಗಳೂರು, ಕೊಚ್ಚಿ, ಪಣಜಿಗಳಲ್ಲೂ ಗೋಡಂಬಿ ಫ್ಯಾಕ್ಟರಿಗಳು ಕಡಿಮೆಯಾಗುತ್ತಿವೆ.

ಜೊತೆಗೆ ಗೇರು ಹಣ್ಣಿನಿಂದ ತಯಾರಿಸಲ್ಪಡುವ ವಿಶೇಷ ಪಾನೀಯವಾದ ಸಾಂಪ್ರದಾಯಿಕ ಕ್ಯಾಶ್ಯೂ ಪೆನ್ನಿ(Cashew Penny) ಎನ್ನುವ ಮದ್ಯದ(Alcohol) ಉತ್ಪಾದನೆಯೂ ಕುಸಿಯತೊಡಗಿದೆ.

ಹೌದು, ಗೇರು ಹಣ್ಣು ದನಗಳಿಗೆ, ಪಶು ಪಕ್ಷಿಗಳಿಗೆ ಆಹಾರವಾಗಿ, ತೋಟಕ್ಕೆ ಗೊಬ್ಬರವಾಗಿ ಹಾಗೂ ಮದ್ಯ ತಯಾರಿಕೆಗೂ ಬಳಕೆಯಾಗುತ್ತದೆ.

ಈ ಗೇರು ಹಣ್ಣಿನ ಪೆನ್ನಿ ಹೆಚ್ಚಾಗಿ ಕೇರಳದಲ್ಲಿ ಮಾತ್ರ ತಯಾರಾಗುತ್ತದೆ. ಕರ್ನಾಟಕ ಹಾಗೂ ಕೇರಳದ ಕೆಲವು ಕಡೆ ಮನೆಯಲ್ಲಿ ಸ್ವಂತ ಬಳಕೆಗಾಗಿಯೂ ಗೇರು ಹಣ್ಣಿನ ಪಾನೀಯವನ್ನು ತಯಾರಿಸಲಾಗುತ್ತದೆ.

ಆದರೆ ಗೇರು ಹಣ್ಣಿನ ಪೆನ್ನಿಗೆ ಭಾರತದಲ್ಲಿ ಪ್ರಸಿದ್ಧವಾಗಿರುವ ಸ್ಥಳ ಗೋವಾ. ಇಲ್ಲಿ ಲೆಕ್ಕವಿಲ್ಲದಷ್ಟು ಸ್ವಾದಿಷ್ಟವಾದ ದೇಸಿ ಪೆನ್ನಿಗಳು ತಯಾರಾಗುತ್ತವೆ.

ಇದನ್ನೂ ಓದಿ : https://vijayatimes.com/graduate-petitioner-got-fined-by-sc/


ಆದರೆ, ಇತ್ತೀಚೆಗೆ ಯಂತ್ರ ಆಧಾರಿತ ಮಧ್ಯ ತಯಾರಿಕಾ ಘಟಕಗಳ ಸ್ಥಾಪನೆಯ ಕಾರಣದಿಂದ ಮನೆಯಲ್ಲಿಯೇ ತಯಾರಾಗುತ್ತಿದ್ದ ರಾಸಾಯನಿಕ ಮುಕ್ತ ಸಾವಯವ ಪೆನ್ನಿಗೆ ಈಗ ಬೇಡಿಕೆ ಕಡಿಮೆಯಾಗಿದೆ.

ಗೇರು ಹಣ್ಣನ್ನು ಕಾಡಿನಿಂದ ಸಂಗ್ರಹಿಸಿ, ಅದರಿಂದ ಹಣ್ಣಿನ ರಸವನ್ನು ತಯಾರಿಸಿ, ಅದನ್ನು ಭಟ್ಟಿ ಇಳಿಸಿ ಮದ್ಯ ತಯಾರಿಸುವ ಪದ್ಧತಿ ಈಗ ನಶಿಸುತ್ತಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳ ಭವಿಷ್ಯವೂ ಆತಂಕಕ್ಕೆ ಸಿಲುಕಿದೆ.
Exit mobile version