ಪ್ರತಿಷ್ಠಿತ ಕೆಥಡ್ರೆಲ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ `ಕ್ರಿಸ್ಟಿ ಗ್ಲೋರಿ’ ಅಕ್ರಮ ಬಯಲು !

Collage scam

ಬೆಂಗಳೂರಿನ (Bengaluru) ಪ್ರತಿಷ್ಠಿತ ಕಾಲೇಜಿನಲ್ಲಿ, ನಕಲಿ ದಾಖಲೆಗಳನ್ನು ನೀಡಿ ಪ್ರಾಂಶುಪಾಲರಾದ ಕ್ರಿಸ್ಟಿ ಗ್ಲೋರಿ (Cathedral collage principal fake scam)

ಕೆಥಡ್ರೆಲ್ ವಿದ್ಯಾಸಂಸ್ಥೆಯಲ್ಲಿ (Cathedral College) ಹಣಕಾಸು ಅವ್ಯವಹಾರ ಮಾಡಿದ್ದು, ಪ್ರಾಂಶುಪಾಲರಿಂದ ಪ್ರತಿಷ್ಠಿತ ವಿದ್ಯಾಸಂಸ್ಥೆಗೆ ಭಾರೀ ಮೋಸವಾಗಿದೆ!

ಬೆಂಗಳೂರಿನ ಪ್ರತಿಷ್ಠಿತ, ಹೆಸರುವಾಸಿಯಾದ ಕೆಥಡ್ರೆಲ್ ಹೈ-ಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜು ಸಂಸ್ಥೆಯ ಪ್ರಾಂಶುಪಾಲೆ ಕ್ರಿಸ್ಟಿ ಗ್ಲೋರಿ ಶಾಂತಿ (Cathedral collage principal fake scam) ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ.

ಹೌದು, ಬೆಂಗಳೂರು ನಗರದ ಕೆಥಡ್ರೆಲ್ ಸಂಸ್ಥೆ ಉತ್ತಮ ಶಿಕ್ಷಣ ಗುಣಮಟ್ಟಕ್ಕೆ ಹೆಚ್ಚು ಹೆಸರುವಾಸಿಯಾದ ಕಾಲೇಜು.

ಈ ಸಂಸ್ಥೆ ಪ್ರಾಥಮಿಕ ಹಾಗೂ ಪದವಿ ಕಾಲೇಜು ಎರಡನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದು, ಶಿಕ್ಷಣ ಗುಣಮಟ್ಟ, ವಿದ್ಯಾರ್ಥಿಗಳ ಶಿಸ್ತು, ಶಿಕ್ಷಣದ ಮೌಲ್ಯತೆ,

ಶಿಕ್ಷಕರು-ವಿದ್ಯಾರ್ಥಿಗಳ ಒಡನಾಟ, ಪೋಷಕರೊಡನೆ ವಿದ್ಯಾರ್ಥಿಗಳ ಮಾಹಿತಿ ಇವೆಲ್ಲದಕ್ಕೂ ಈ ಸಂಸ್ಥೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಆದ್ರೆ, ಎಲ್ಲಾ ವಿಚಾರದಲ್ಲೂ ಉತ್ತಮ ಸ್ಥಾನ, ಅಭಿಪ್ರಾಯಗಳನ್ನು ಪಡೆದುಕೊಂಡಿದ್ದ ಈ ಕಾಲೇಜಿಗೆ ಈಗ ಕಪ್ಪು ಚುಕ್ಕೆಯೊಂದು ಅಂಟುಕೊಂಡಿದೆ! ಹೌದು, ಅಷ್ಟಕ್ಕೂ ಇಂಥ ಪ್ರತಿಷ್ಠಿತ ಸಂಸ್ಥೆಗೆ ಎದುರಾದ ತೊಂದರೆಯಾದರೂ ಏನೂ ಎಂದು ತಿಳಿಯುವುದಾದರೆ,

ಕಳೆದ ಹಲವು ದಿನಗಳಿಂದ ಈ ಕಾಲೇಜಿನ ಪ್ರಾಂಶುಪಾಲೆಯಾದ ಕ್ರಿಸ್ಟಿ ಗ್ಲೋರಿ ಶಾಂತಿ ಅವರ ಮೇಲೆ ಕಾಲೇಜಿನ ಶಿಕ್ಷಕರ ವರ್ಗ ಸೇರಿದಂತೆ, ಆಡಳಿತ ಮಂಡಳಿಗೆ ಅನುಮಾನದ ಹುತ್ತ ಹುಟ್ಟಿಕೊಂಡಿದೆ.

ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಸ್ಟಿ ಗ್ಲೋರಿ ಅವರು ನಕಲಿ ದಾಖಲೆಗಳನ್ನು ಸಂಸ್ಥೆಗೆ ಸಲ್ಲಿಸಿ ಭಾರೀ ವಂಚನೆ ಎಸಗಿದ್ದಾರೆ.

ಕ್ರಿಸ್ಟಿ ಅವರು ಸಂಸ್ಥೆಗೆ ಪ್ರಾಂಶುಪಾಲೆಯಾಗಿ (Principal) ಸೇರುವ ಮುನ್ನ ಒದಗಿಸಿದ ಪ್ರತಿಯೊಂದು ಮುಖ್ಯ ದಾಖಲಾತಿಗಳು ಕೂಡ ನಕಲಿಯಾಗಿವೆ.

ಇದಕ್ಕೆ ಪೂರಕವಾದ ಸಾಕ್ಷಿಗಳು ವಿಜಯಟೈಮ್ಸ್‌ಗೆ (Vijaya Times) ಲಭ್ಯವಾಗಿದೆ. ಆದ್ರೆ ಇವರ ನಕಲಿ ವ್ಯವಹಾರ ಯಾರೊಬ್ಬರಿಗೂ ತಿಳಿದಿಲ್ಲದಿರುವುದು ನಿಜವಾಗ್ಲೂ ಅಚ್ಚರಿ ಮೂಡಿಸುತ್ತೆ.

ಕ್ರಿಸ್ಟಿ ಅವರು ಸಂಸ್ಥೆಗೆ ರೆಸ್ಯೂಮ್ (Resume), 10ನೇ ತರಗತಿಯ ಅಂಕಪಟ್ಟಿ, 12ನೇ ತರಗತಿಯ ಅಂಕಪಟ್ಟಿ, ಪ್ಯಾನ್ ಕಾರ್ಡ್, ಪಿಜಿಡಿಸಿಎ (ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದಲ್ಲಿ ಸ್ನಾತಕೋತರ ಪದವಿ ಪಡೆದಿರುವ ಪ್ರಮಾಣಪತ್ರ),

ಎಂ.ಫಿಲ್ ಪ್ರಮಾಣಪತ್ರ, ಶಿಕ್ಷಕಿ/ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಅನುಭವದ ಪತ್ರ ಮುಂತಾದ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಆದ್ರೆ, ಅವರು ಸಲ್ಲಿಸಿರುವ ದಾಖಲೆಗಳ್ಯಾವುದು ಕೂಡ ಅಸಲಿಯಾಗಿಲ್ಲ, ಬದಲಾಗಿ ನಕಲಿಯಾಗಿದೆ.

ಪ್ರಾಂಶುಪಾಲೆಯ ದಾಖಲಾತಿಗಳ ಬಗ್ಗೆ ಅನುಮಾನದ ಅಲೆ ಜೋರಾಗಿ ಬೀಸಿದ ಪರಿಣಾಮವೋ ಏನೋ, ಅದನ್ನು ಸೂಕ್ತವಾಗಿ ಪರಿಶೀಲಿಸಿದ ಬಳಿಕ ಇದು ಅಪಟ್ಟ ನಕಲಿ ಎಂಬುದು ಸಾಬೀತಾಗಿದೆ.

ಪ್ರಾಂಶುಪಾಲೆಯಾಗಲು ಈಕೆ ಒದಗಿಸಿರುವ ಅಷ್ಟು ದಾಖಲೆಗಳಲ್ಲೂ ಅಸಲಿ ಮಾಹಿತಿಗಳು ಕಿಂಚಿತ್ತೂ ಇಲ್ಲ.

https://vijayatimes.com/siddaramaiah-attacks-bjp-with-a-issue/

ಮೊದಲಾಗಿ ಬಿಬಿಎಂಪಿ (BBMP) ಮೂಲಕ ಜನನ ಪತ್ರ (Birth Certificate) ಪಡೆದಿದ್ದು, ಅದರಲ್ಲಿ ಜನ್ಮ ದಿನಾಂಕ ಸೇರಿದಂತೆ ತಪ್ಪು ಮಾಹಿತಿಗಳನ್ನು ಸೇರಿಸಿದ್ದಾರೆ. ಜನನ ಪತ್ರ ಸೇರಿದಂತೆ ಆಧಾರ್ ಕಾರ್ಡ್‍ನಲ್ಲೂ (Aadhar Card) ಜನ್ಮ ದಿನಾಂಕ ಬದಲಾಗಿದೆ.

10ನೇ ತರಗತಿಯ ಅಸಲಿ ಅಂಕಪಟ್ಟಿಯನ್ನು ಕೂಡ ಒದಗಿಸಿಲ್ಲ ಕಾರಣ, ಅಸಲಿ ಕೊಟ್ಟರೇ ಜನ್ಮದಿನಾಂಕ ಹಾಗೂ ತಮಿಳು ಭಾಷೆ ಇರುವುದು ತಿಳಿದು, ಕೆಲಸ ಸಿಗುವುದಿಲ್ಲ ಎಂಬುದನ್ನು ಮುಂಚಿತವಾಗಿಯೇ ಆಲೋಚಿಸಿ ಈ ದಾಖಲೆಯನ್ನು ಒದಗಿಸಿಲ್ಲ.

ಕ್ರಿಸ್ಟಿ ಅವರು ಬರೀ ತಮ್ಮ ನಕಲಿ ದಾಖಲೆ ಒದಗಿಸಿ ಅಕ್ರಮ ಎಸಗಿಲ್ಲ ಬದಲಾಗಿ ಶಾಲೆಯ ಹಣದ ವ್ಯವಹಾರದಲ್ಲೂ ಮೋಸ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.

ವಿದ್ಯಾರ್ಥಿಗಳು ಶಾಲೆಗೆ ಪಾವತಿಸುವ ಹಣದ ಲೆಕ್ಕವನ್ನು ಆಡಿಟ್ (Audit) ಮಾಡಿಸದೇ ಗೋಲ್‍ಮಾಲ್ ಮಾಡಿದ್ದಾರೆ.

ಸ್ವಯಂಪ್ರೇರಿತವಾಗಿ ಆಡಿಟ್ ಮಾಡುವ ಮೂಲಕ ಶಾಲೆಯ ಖಜಾನೆಗೆ ಬಂದಿರುವ ಹಣವನ್ನು ಲಪಟಾಯಿಸಿದ್ದಾರೆ ಎಂಬುದನ್ನು ಶಾಲೆಯ ಆಡಳಿತ ಮಂಡಳಿ ಪ್ರತಿಯೊಂದು ದಾಖಲೆಯನ್ನು ಮುಂದಿಟ್ಟು ಸಾಬೀತುಪಡಿಸಿದೆ. https://youtu.be/7_IxcBoPL2g

ಈ ಕುರಿತು ಆಡಳಿತ ಮಂಡಳಿ ಮಾತನಾಡಿ, ಇಷ್ಟೊಂದು ನಕಲಿ ದಾಖಲೆಗಳನ್ನು ಅವರು ಸೃಷ್ಟಿಸಿಕೊಂಡಿರುವುದಾದರೂ ಹೇಗೆ? ಒಂದು ದಾಖಲೆಯಲ್ಲಿ ನಕಲಿ ಒಪ್ಪಬಹುದು,

ಆದ್ರೆ ಪ್ರತಿಯೊಂದು ದಾಖಲೆಯಲ್ಲೂ ನಕಲಿ ಅಂದ್ರೆ ಹೇಗೆ? ಇದನ್ನು ಒಪ್ಪುವುದಾದರೂ ಹೇಗೆ? ಇವರ ನಕಲಿ ದಾಖಲಾತಿ ಸೃಷ್ಟಿಯ ಕೈಚಳಕದಲ್ಲಿ ಬಿಬಿಎಂಪಿ ಸೇರಿದಂತೆ ಅನೇಕ ಇಲಾಖೆಗಳು ಕೂಡ ಕೈಜೋಡಿಸಿವೆ.

ಈ ಕುರಿತು ಕೂಲಂಕಷ ತನಿಖೆ ಮಾಡಬೇಕು ಅನ್ನೋದು ಕೆಥಡ್ರೆಲ್ ಶಿಕ್ಷಣ ಸಂಸ್ಥೆಯ ಪೋಷಕರ ಒತ್ತಾಯ.
Exit mobile version