ವಂಚನೆ ಪ್ರಕರಣದಲ್ಲಿ ವಿಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ಅವರನ್ನು ಬಂಧಿಸಿದ ಸಿಬಿಐ

Delhi : ಐಸಿಐಸಿಐ ಬ್ಯಾಂಕ್‌ಗೆ  ವಂಚನೆ ಮಾಡಿರುವ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು (cbi arrested videocon chief) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಚಂದಾ ಕೊಚ್ಚರ್ ಮತ್ತು,

ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಇದೀಗ ಸಿಬಿಐ , ವಿಡಿಯೋಕಾನ್ ಗ್ರೂಪ್‌ನ ಮುಖ್ಯಸ್ಥ ವೇಣುಗೋಪಾಲ್ ಧೂತ್ ಅವರನ್ನು ಬಂಧಿಸಿದೆ.

ಕೊಚ್ಚರ್ ದಂಪತಿಗಳ ವಿರುದ್ಧದ ಆರೋಪಗಳ ಪ್ರಕಾರ, ಅವರಿಬ್ಬರೂ ಐಸಿಐಸಿಐ ಬ್ಯಾಂಕ್‌ನಲ್ಲಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು,

2009 ಮತ್ತು 2011 ರಲ್ಲಿ ವಿಡಿಯೋಕಾನ್ ಗ್ರೂಪ್ ಮುಖ್ಯಸ್ಥ ವೇಣುಗೋಪಾಲ್ ಧೂತ್‌ಗೆ ಸಾಲ ನೀಡಿದ್ದಾರೆ.

ಕೊಚ್ಚರ್, ಅವರ ಪತಿ ಮತ್ತು ವಿಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ವಿರುದ್ಧ ಸಿಬಿಐ ಕ್ರಿಮಿನಲ್ ಪಿತೂರಿ (cbi arrested videocon chief) ಮೊಕದ್ದಮೆ ದಾಖಲಿಸಿದೆ. 

ಸಾಲ ಪಡೆದ ನಂತರ ವೇಣುಗೋಪಾಲ್ ಧೂತ್ “ನುಪವರ್ ರಿನ್ಯೂವಬಲ್ಸ್”ನಲ್ಲಿ (Nupower Renewables) ಕೋಟಿಗಟ್ಟಲೆ ಹೂಡಿಕೆ ಮಾಡಿದ್ದಾರೆ. 

ಇದನ್ನೂ ಓದಿ: https://vijayatimes.com/bbmp-relaunched-application/

ನಂತರ  ಐಸಿಐಸಿಐ ಬ್ಯಾಂಕ್‌ನಿಂದ ಪಡೆದ ಸಾಲಗಳನ್ನು 2012 ರಲ್ಲಿ ಅನುತ್ಪಾದಕ ಆಸ್ತಿಗಳೆಂದು ಘೋಷಿಸಲಾಗಿತ್ತು.

ಇನ್ನು ಆರ್ಥಿಕ ಅಪರಾಧಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವೂ (Enforcement Directorate)  ಈ ತನಿಖೆಯಲ್ಲಿ ತೊಡಗಿದೆ. ಕಳೆದ ತಿಂಗಳು, ಇಡಿ(ED) ಈ ವಿಷಯದ ಬಗ್ಗೆ ವೇಣುಗೋಪಾಲ್ ಧೂತ್ ಅವರನ್ನು ಪ್ರಶ್ನಿಸಿತ್ತು.

https://vijayatimes.com/tajmahal-received-tax-notice/

ಈ ಪ್ರಕರಣದಲ್ಲಿ ನುಪವರ್ ರಿನ್ಯೂವಬಲ್ಸ್ ನ ನಿರ್ದೇಶಕ ಮತ್ತು ಧೂತ್‌ನ ಆಪ್ತ ಸಹಾಯಕ ಮಹೇಶ್ ಪುಂಗಾಲಿಯಾ ಅವರನ್ನು ಸಹ ಜಾರಿ ನಿರ್ದೇಶನಾಲಯ ಈ ಹಿಂದೆ ಪ್ರಶ್ನಿಸಿದೆ.ಫೆಬ್ರವರಿ 2019 ರಲ್ಲಿ  ವೇಣುಗೋಪಾಲ್ ಧೂತ್,
ಕೊಚ್ಚರ್ ಮತ್ತು ಆಕೆಯ ಪತಿ ದೀಪಕ್ ವಿರುದ್ಧ ಇಡಿ ಪ್ರಕರಣ ದಾಖಲಿಸಿತ್ತು. ಈ ಹಿಂದೆ ಅವರ ನಿವಾಸಗಳಲ್ಲಿಯೂ ಶೋಧ ನಡೆಸಲಾಗಿತ್ತು.
Exit mobile version