ಬಿಟ್‌ಕಾಯಿನ್ ಹಗರಣ: ಸಿಐಡಿಗೆ ತಪ್ಪು ಪಾಸ್ ವರ್ಡ್ ನೀಡಿ ತನಿಖೆ ಹಾದಿ ತಪ್ಪಿಸಿದ ಸಿಸಿಬಿ !

Bengaluru : ಸಿಸಿಬಿ ಪೊಲೀಸರು (CCB misled CID investigation) ತನಿಖೆಯ ವೇಳೆ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ ಮತ್ತಿತರ ಉಪಕರಣಗಳನ್ನು ಬಿಟ್‌ಕಾಯಿನ್

(Bit Coin) ಹಗರಣದ ರುವಾರಿ ಶ್ರೀಕಿಯಿಂದ ವಶಪಡಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸಿಐಡಿಗೆ(CID) ತಪ್ಪಾಗಿ ಪಾಸ್ ವರ್ಡ್ ನೀಡಿದ್ದರಿಂದ ಸಿಐಡಿ

ತನಿಖೆ ಹಾದಿ ತಪ್ಪಿರುವುದು ಇದೀಗ ಬೆಳಕಿಗೆ (CCB misled CID investigation) ಬಂದಿದೆ.

ಹಲವು ಮಹತ್ವದ ಸಾಕ್ಷ್ಯಗಳು ಶ್ರೀಕಿಯಿಂದ (Sri Krishna) ವಶಪಡಿಸಿಕೊಂಡಿದ್ದ ಉಪಕರಣಗಳಿಂದ ಸಂಗ್ರಹಿಸಿದ್ದ ಮಾಹಿತಿಯಲ್ಲಿ ಇದ್ದವು ಆದರೆ , ಸಿಸಿಬಿ ಪೊಲೀಸರು ಆ ಮಾಹಿತಿ ಯನ್ನು

ಫೋರೆನ್ಸಿಕ್ ಇಮೇಜ್ ಪ್ರತಿ (Forensic Image copy)ಮಾಡಿಸಿ, ನಿಗೂಢ ಲಿಪಿಗೆ (ಎನ್ ಕ್ರಿಪ್ಪನ್) ಅದನ್ನು ಪರಿವರ್ತಿಸಿದ್ದರು. ಬಳಿಕ ಸಿಐಡಿಗೆ ತನಿಖೆ ವರ್ಗಾವಣೆಯಾದಾಗ ಅದಕ್ಕೆ ತಪ್ಪಾದ ಪಾಸ್

ವರ್ಡ್(Password) ನೀಡಿದ್ದರು ಎಂಬ ಅಂಶ ಗೊತ್ತಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಬಾಂಬ್ ದಾಳಿಗೆ ಪ್ಲ್ಯಾನ್‌ : ಐವರು ಶಂಕಿತ ಭಯೋತ್ಪಾದಕರು ಅರೆಸ್ಟ್‌ !

ಇದರಿಂದಾಗಿ ಸುಮಾರು 200 ಕೋಟಿ ರು.ಗೂ ಅಧಿಕ ಮೊತ್ತಕ್ಕೆ ಸರಕಾರಿ ಬೊಕ್ಕಸಕ್ಕೆ ಕನ್ನ ಹಾಕಿದ ಬಹುಕೋಟಿ ವಂಚನೆ ಪ್ರಕರಣದ ಕುರಿತು ಮತ್ತು ಸುಮಾರು ಹತ್ತು ಸಾವಿರ ಕೋಟಿ ರುಪಾಯಿಗೂ

ಅಧಿಕ ಮೊತ್ತದ ಹಣಕಾಸು ವಂಚನೆಯ ಆರಂಭಿಕ ತನಿಖೆ ನಡೆಸಿದ ಸಿಸಿಬಿ ತನಿಖಾಧಿಕಾರಿಗಳೇ ಈ ಪ್ರಕರಣದಲ್ಲಿ ಶಾಮೀಲಾಗಿ, ಪ್ರಮುಖ ಆರೋಪಿ ಶ್ರೀಕಿನನ್ನು ಬಳಸಿಕೊಂಡು ಅವ್ಯವಹಾರ ನಡೆಸಿದ್ದಾರೆ

ಎಂಬ ಅನುಮಾನಗಳಿಗೆ ಪುರಾವೆ ಸಿಕ್ಕಿದಂತಾಗಿದೆ.

ಸಿಸಿಬಿ ಪೊಲೀಸರು ಪ್ರಕರಣದ ಕುರಿತು ಪ್ರಮುಖ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ಸ್ವತಃ ಸಿಸಿಪಿಎಸ್‌ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಮಹತ್ವದ ಮಾಹಿತಿಯನ್ನು ಸಿಐಡಿ

ಅಧಿಕಾರಿಗಳಿಂದ ಮರೆಮಾಚಿದ್ದರು ಎಂಬುದು ಉಲ್ಲೇಖಿಸಲಾಗಿದೆ. ಸಾವಿರಾರು ಕೋಟಿ ಮೊತ್ತದ ಬಿಟ್ ಕಾಯಿನ್ ಅನ್ನು ಜಾಗತಿಕ ಮಟ್ಟದ ವಿವಿಧ ಬಿಟ್ ಕಾಯಿನ್ ಕಂಪನಿಗಳ ಸರ್ವರ್ ಹ್ಯಾಕ್ (Server Hack)

ಮಾಡಿ ಲಪಟಾಯಿಸಿ ಅವುಗಳನ್ನು ವಿವಿಧ ಬಿಟ್ ಕಾಯಿನ್ ವಹಿವಾಟುದಾರರ ಖಾತೆಗಳಿಗೆ ಮತ್ತು ರಾಜ್ಯದ ಅಧಿಕಾರಸ್ಥರ ಆಪ್ತರಿಗೆ ಕೂಡ ರವಾನಿಸಿ ಭಾರೀ ವಂಚನೆ ಎಸಗಿರುವ ಗಂಭೀರ ಪ್ರಕರಣ ಇದಾಗಿದೆ.

ಇದನ್ನೂ ಓದಿ : 8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!

ಅದರೊಂದಿಗೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ, ಸುಮಾರು 200 ಕೋಟಿಗೂ ಅಧಿಕ ಮೊತ್ತದ ಹಣಕಾಸು ವಂಚನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಈ ಪೇಮೆಂಟ್ ಪೋರ್ಟಲ್‌ಗಳನ್ನು

(E Payment Portal) ಕೂಡ ಹ್ಯಾಕ್ ಮಾಡಿ ಎಸಗಿರುವುದಾಗಿ ಸ್ವತಃ ಪೊಲೀಸರೇ ಈ ಹಿಂದೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಹೇಳಲಾಗಿತ್ತು. ಬಿಟ್‌ಕಾಯಿನ್ ಹಗರಣದಲ್ಲಿ ಸಿಸಿಬಿ ಅಧಿಕಾರಿಗಳು

ಭಾಗಿಯಾಗಿರು ವುದು ಇದೀಗ ಸಿಸಿಪಿಎಸ್‌(CCPS) ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಿಂದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ.

ತನಿಖೆ ಪ್ರಾರಂಭಕ್ಕೆ ಬೇಕು ಆರು ತಿಂಗಳು

ಪ್ರಸ್ತುತ ಎಸ್‌ಐಟಿಗೆ (SIT) ಬಿಟ್ ಕಾಯಿನ್ ಪ್ರಕರಣವನ್ನು ವಹಿಸಲಾಗಿದೆ. ಸರಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಜೆನ್ಸಿಗಳ ಸಹಾಯ ಪಡೆಯಲು ಕ್ರಮ ವಹಿಸಬೇಕಿದೆ. ಆಧುನಿಕ ತಂತ್ರಜ್ಞಾನದ

ನೆರವು ಬಿಟ್ ಕಾಯಿನ್ ಕ್ರಿಪ್ಲೋ ಕರೆನ್ಸಿ ವ್ಯೂಹ ಭೇದಿಸಲು ಬೇಕಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ನಿಯಂತ್ರಣ ಮಾಡುವ ದೇಶಗಳ ಸಹಕಾರ ಕೂಡ ಅಗತ್ಯ ಮಾಹಿತಿ ಪಡೆಯಲು ಬಹುಮುಖ್ಯವಾಗಿದೆ.

ಬಿಟ್ ಕಾಯಿನ್ ಹಗರಣದ ಸಂಪೂರ್ಣ ತನಿಖೆಗೆ ಪ್ರಸ್ತುತ ಆರೋಪ ಪಟ್ಟಿ ದಾಖಲಾಗಿದ್ದರೂ ಮತ್ತೆ ಸರಕಾರ ಮುಂದಾಗಿ ಅದನ್ನು ಎಸ್‌ಟಿಗೆ ವಹಿಸಿದೆ. ಸದ್ಯ ಸಿಐಡಿಯಲ್ಲಿ ಈ ವಿಚಾರ ಇನ್ನೂ ಚರ್ಚೆಯಾಗುತ್ತಿದೆ.

ತನಿಖೆಗೆ ತಾಂತ್ರಿಕ ತಂಡ ಕೂಡ ರಚನೆಯಾಗಲಿದ್ದು ತನಿಖೆ ಆರಂಭಿಸಲು ಆರು ತಿಂಗಳು ಬೇಕಾಗಬಹುದು ಎಂದು ಹಿರಿಯ ಅಧಿಕಾರಿಗಳೇ ಹೇಳುತ್ತಾರೆ.

ರಶ್ಮಿತಾ ಅನೀಶ್

Exit mobile version