ಬಿಟ್‌ ಕಾಯಿನ್ ಪ್ರಕರಣ, ಸಿಸಿಬಿ ಮೇಲೆ ಅನುಮಾನ !

ಬೆಂಗಳೂರು ನ 22 : ಬಿಟ್​ಕಾಯಿನ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ಮೇಲೆಯೇ ವಕೀಲ ಸೂರ್ಯ ಮುಕುಂದ ರಾಜ್ ಎಂಬುವವರು ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದಾರೆ.

ಬಿಟ್​ಕಾಯಿನ್ ವರ್ಗಾವಣೆ ವಿವರ ಸಂಗ್ರಹಿಸಲು ಸೈಬರ್ ತಜ್ಞರ ಅವಶ್ಯಕತೆ ಇರುತ್ತೆ. ಸಿಸಿಬಿ ಅಧಿಕಾರಿಗಳು ಮೊದಲು ಸೈಬರ್ ತಜ್ಞರು ಬೇಕೆಂದು ಬರೆದು ನಂತರ ಅದನ್ನು ಗೀಚಿದ್ದಾರೆ. ಇದರ ಹಿಂದಿರುವ ಉದ್ದೇಶವೇನು? ಐಟಿ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ದೂರನ್ನ ಮಾದಕ ವಸ್ತುಗಳ ನಿಗ್ರಹ ದಳದ ಇನ್ಸ್​ಪೆಕ್ಟರ್​ ಲಕ್ಷ್ಮೀ ಕಾಂತಯ್ಯ ಅವರ ಬಳಿ ತನಿಖೆ ಮಾಡಿಸಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ತನಿಖೆ ಬಗ್ಗೆ ಕೇಂದ್ರ ಸರ್ಕಾರದಿಂದಲೂ ತೀವ್ರ ನಿಗಾ :

ಸಾಮಾಜಿಕ ಕಾರ್ಯಕರ್ತರಾದ ಗಿರೀಶ್ ಭಾರದ್ಜಾಜ್ ಅವರು ಅಕ್ಟೋಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದು ಪೂರ್ಣ ಪ್ರಮಾಣದ ತನಿಖೆಯನ್ನು ನಡೆಸುವಂತೆ ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ರಾಜಕಾರಣಿಗಳ ಕೈವಾಡಕೇಳಿಬರುತ್ತಿರುವುದರಿಂದ ಬಿಟ್‌ ಕಾಯಿನ್ ಹಗರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಇದರಲ್ಲಿ ರಾಜಕೀಯ ಕೈವಾಡದ ಶಂಕೆ ಬಗ್ಗೆ ಪ್ರಧಾನಿ ಕಾರ್ಯಾಲಯದವೂ ಕೂಲಂಕುಶವಾಗಿ ಗಮನಿಸುತ್ತಿದ್ದು ತನಿಖಾ ಸಂಸ್ಥೆಗಳ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಿತ್ತಿದೆ ಎಂದು ತಿಳಿದುಬಂದಿದೆ.

ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣಾ ಯಾನೆ ಶ್ರೀಕಿ ಬಂಧನದ ಬಳಿಕ ಬಿಟ್‌ ಕಾಯಿನ್ ಹಗರಣದ ಹಲವು ವಿಚಾರಗಳು ಬಹಿರಂಗಗೊಂಡಿದ್ದವು. ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದರೆ ಎಂಬ ವಿಚಾರ ಸಂಚಲನ ಮೂಡಿಸಿತ್ತು. ಈ ನಡುವೆ ಪ್ರಕರಣದ ತನಿಖೆಯ ಕುರಿತಾದ ಮಾಹಿತಿಗಳನ್ನು ಬಹಿರಂಗಗೊಳಿಸಬೇಕು ಎಂಬ ಆಗ್ರಹವನ್ನು ವಿರೋಧ ಪಕ್ಷಗಳ ಮುಖಂಡರು ಮಾಡುತ್ತಿದ್ದಾರೆ.

Exit mobile version