ಸಿಡಿ ಪ್ರಕರಣ: ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ; ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾ. 09: ತಮ್ಮ‌ ವಿರುದ್ಧದ ರಾಸಲೀಲೆ ಪ್ರಕರಣದ ಬಗ್ಗೆ ಕಡೆಗೂ ಮೌನ ಮುರಿದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಪ್ರಕರಣದ ಬಗ್ಗೆ ಹಲವು ಕುತೂಹಲದ ವಿಷಯಗಳನ್ನು ರಿವಿಲ್ ಮಾಡಿದ್ದು, ಆ ಮೂಲಕ ಸಿಡಿ ಪ್ರಕರಣದ ಬಗ್ಗೆ ಹೊಸದೊಂದ್ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನ ಸದಾಶಿವ ನಗರದ ತಮ್ಮ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ‌, ಬೆಂಗಳೂರಿನ ಹುಳಿಮಾವು ಮತ್ತು ಯಶವಂತಪುರದ ಅಪಾರ್ಟ್ ಮೆಂಟ್ ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಕುತಂತ್ರದಿಂದ ನನಗೆ ಹೀಗೆಲ್ಲಾ ಮಾಡಿದ್ದಾರೆ. ಆ ಮಹಾನ್ ನಾಯಕನನ್ನು ನಾನು ಬಿಡುವುದಿಲ್ಲ, ಅವನನ್ನು ಜೈಲಿಗೆ ಕಳುಹಿಸುವ ತನಕ ನಾನು ವಿಶ್ರಮಿಸುವುದಿಲ್ಲ. ಇಂತಹ ಹತ್ತು ಪೋಲಿಸ್ ಕಂಪ್ಲೆಂಟ್ ಆದರೂ ನಾನು ಹೆದರುವುದಿಲ್ಲ ಎಂದಿದ್ದಾರೆ.

ನನಗೆ ರಾಜಕೀಯ ಮಾಖ್ಯವಲ್ಲ, ನನ್ನ ಕುಟುಂಬ ಬಹಳ ಮುಖ್ಯ.
ಆ ಯುವತಿಗೆ ಅವರು ಕೊಟ್ಟಿರುವುದು 50 ಲಕ್ಷ ರೂಪಾಯಿ ಅಲ್ಲ, 5 ಕೋಟಿ ಎಂಬ ಸತ್ಯಾಂಶವನ್ನು ಸ್ಪಷ್ಟಪಡಿಸಿರುವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಸಿಡಿ ಹೊರಬಂದ ಬೆನ್ನಲ್ಲೇ ತಮಗೆ ಆತ್ಮಸ್ಥೈರ್ಯ ನೀಡಿದ ಬಗ್ಗೆ ಮಾಹಿತಿ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು, ಸಿಡಿ ಬಿಡುಗಡೆಗೊಂಡ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನನ್ನ ಪರ ಮಾತಾಡಿದ್ದಾರೆ. ನನ್ನ ವಿರೋಧಿಗಳಿಗೆ ಇದಿ ದೊಡ್ಡ ಅಸ್ತ್ರವಾಗಿದೆ. ಇದು ನೂರಕ್ಕೆ ನೂರು ನಕಲಿ‌ ಸಿಡಿಯಾಗಿದ್ದು, ನನ್ನ ರಾಜಿನಾಮೆ ಪಡೆಯುವುದು ಅವರ ಉದ್ದೇಶವಾಗಿತ್ತು. ಅಲ್ಲದೇ ಸಿಡಿ ಬಿಡುಗಡೆಗೆ 20 ಕೋಟಿ ಖರ್ಚು ಮಾಡಿದ್ದಾರೆ ಎಂದು ತಮ್ಮ ಮಾತಿನ ವೇಳೆ ಭಾವುಕರಾಗಿ ರಮೇಶ್ ಜಾರಕಿಹೊಳಿ ಕಣ್ಣೀರು ಹಾಕಿದರು.

Exit mobile version