ಅಕ್ಕಿ ಪಾಲಿಟಿಕ್ಸ್‌: ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ನಿರಾಕರಣೆ : ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ

ಬೆಂಗಳೂರು: ರಾಜ್ಯ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು (Central refusal to Annabhagya) ಜುಲೈ 1 ರಿಂದ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಯೋಜಿಸಿತ್ತು.

ಆದರೆ, ಕೇಂದ್ರ ಸರ್ಕಾರ (Central Government) ಈ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿದೆ. ಇದರಿಂದ ಜುಲೈ 1ರಂದು ಈ ಯೋಜನೆ ಜಾರಿಯಾಗುವ ಸಾಧ್ಯತೆ ಅನಿಶ್ಚಿತವಾಗಿದ್ದು,

ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು (Central refusal to Annabhagya) ಮುಂದಾಗಿದೆ.

ಅಕ್ಕಿ ಖರೀದಿಗೆ ಕಾಂಗ್ರೆಸ್ (Congress) ಆಡಳಿತವಿರುವ ಹತ್ತಿರದ ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಹೆಚ್ಚುವರಿಯಾಗಿ ಸಿಎಂ ಸಿದ್ದರಾಮಯ್ಯ (Siddaramaiah) ತೆಲಂಗಾಣ (Telangana)

ಸಿಎಂ ಅವರನ್ನು ಸಂಪರ್ಕಿಸಿ ಅಕ್ಕಿ ಪೂರೈಕೆಗೆ ಮನವಿ ಮಾಡಿದ್ದಾರೆ. ಅನ್ನಭಾಗ್ಯ ಅನುಷ್ಠಾನದ ಸುತ್ತಲಿನ ಸಮಸ್ಯೆಗಳನ್ನು ಪರಿಹರಿಸಲು, ರಾಜ್ಯ ಆಹಾರ ಇಲಾಖೆಯು ಪಂಜಾಬ್, ಹರಿಯಾಣ,

ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳನ್ನು ಸಂಪರ್ಕ (Central refusal to Annabhagya) ಮಾಡಿದೆ. ತಲುಪಿದೆ.

ಇದನ್ನು ಓದಿ: ಪಠ್ಯ ಪರಿಷ್ಕರಣೆ : ಕಾರ್ಕೋಟ ಮತ್ತು ಅಹೋಮ್ ರಾಜವಂಶಗಳ ಪಾಠ ಕೈಬಿಟ್ಟ ಕಾಂಗ್ರೆಸ್ ಸರ್ಕಾರ..!

ಅನ್ನಭಾಗ್ಯ ಯೋಜನೆ ಭವಿಷ್ಯ ಇಂದೇ ನಿರ್ಧಾರ ಆಗುತ್ತಾ?

ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ದೂರವಾಣಿ ಕರೆಗಳ ಮೂಲಕ ಅಕ್ಕಿ ವೆಚ್ಚ, ಸಾಗಾಣಿಕೆ ವೆಚ್ಚ ಸೇರಿದಂತೆ ಮಾಹಿತಿ ಸಂಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ.

ಆಹಾರ ಇಲಾಖೆಯು ಈಗಾಗಲೇ ಅಕ್ಕಿಯ ಲಭ್ಯತೆಯ ಬಗ್ಗೆ ಪ್ರಾಥಮಿಕ ವರದಿಗಳನ್ನು ಸರ್ಕಾರಕ್ಕೆ ನೀಡಿದೆ. ಪ್ರತಿ ತಿಂಗಳು ರಾಜ್ಯದ ನಾಗರಿಕರಿಗೆ ಉಚಿತ ಅಕ್ಕಿ ವಿತರಿಸಲು

2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಅನ್ನಭಾಗ್ಯ ಯೋಜನೆ ಪ್ರಸ್ತುತ ರಾಜ್ಯ ಸರ್ಕಾರಕ್ಕೆ ಮಹತ್ವದ ಸವಾಲಾಗಿದೆ.

ತೆಲಂಗಾಣ ಸಿಎಂಗೆ ಕರೆ ಮಾಡಿದ್ದ ಸಿಎಂ ಸಿದ್ದರಾಮಯ್ಯ

ತೆಲಂಗಾಣ ಸಿಎಂಗೆ ಕರೆ ಮಾಡಿ ಸ್ವತಃ ಸಿಎಂ ಸಿದ್ದರಾಮಯ್ಯ ಅಕ್ಕಿ ಪೂರೈಕೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ತೆಲಂಗಾಣ ಸಿಎಂ ಮಾಹಿತಿ ನೀಡಿದ್ದಾರೆ. ರೈತರ ಜೊತೆಗೆ ದೇಶ ಕೂಡ ನಡೆಯಲೇಬೇಕು.

ರೈತರು ಬಯಸಿದ್ರೆ ಎಲ್ಲರನ್ನೂ ಅಸಹಾಯಕರಾಗಿಯೂ ಮಾಡಬಹುದು.ಆದರೆ ದಲ್ಲಾಳಿಗಳ ಪರ ನಿಂತು,ರೈತರ ಅಸಹಾಯಕತೆಯ ಲಾಭ ಪಡೆದು ದೇಶ ಹಾಳು ಮಾಡುವುದು ಯಾವುದೇ ರೀತಿಯಲ್ಲೂ ಸಮಂಜಸವಲ್ಲ

ಕರ್ನಾಟಕದಲ್ಲಿ ನೂತನವಾಗಿ ಆಯ್ಕೆಯಾದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ರವರು ನಿನ್ನೆಯಷ್ಟೇ ನನ್ನ ಜೊತೆಗೆ ಫೋನ್‌ನಲ್ಲಿ ಮಾತನಾಡಿದ್ದರು.ಚಂದ್ರಶೇಖರ್‌ ರಾವ್‌ಜೀ (Chandrashekhar Rao) ನಮಗೆ

27 ಲಕ್ಷ ಟನ್‌ ಅಕ್ಕಿ ಬೇಕಾಗಿದೆ. ನಿಮ್ಮ ಬಳಿ ಅಕ್ಕಿ ಇದ್ದರೆ ಅದರ ಒಟ್ಟು ದರ ಹೇಳಿ ನಾವು ಖರೀದಿಸುತ್ತೇವೆ ಎಂದು ಮಾತನಾಡಿದ್ದಾರೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌

ಅವರು ನಾಗ್ಪುರದಲ್ಲಿ (Nagpur) ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಶ್ಮಿತಾ ಅನೀಶ್

Exit mobile version