Bengaluru: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸದ್ಯ ಲಭ್ಯವಿರುವ 22 ಸೇವೆಗಳ ಜೊತೆಗೆ 44 ಸರ್ಕಾರಿ (Certificate service at Bapuji Center) ಸೇವೆಯನ್ನು
ಪ್ರಮುಖ ಇಲಾಖೆಗಳ ಮೂಲಕ 66 ಸೇವೆಗಳನ್ನು (Certificate service at Bapuji Center) ಪಡೆಯಬಹುದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಂದಾಯ, ಕಾರ್ಮಿಕ,ಇಂಧನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ವಿವಿಧ ಸೇವೆ ಸೇರ್ಪಡೆ.ಇನ್ನು ಬೇರೆ ಬೇರೆ ಪ್ರಮಾಣ ಪತ್ರಗಳಿಗಾಗಿ
ವಿವಿಧ ಇಲಾಖೆಗಳಿಗೆ ಅಲೆದಾಡುತ್ತಿದ್ದರೆ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾಕೇಂದ್ರಗಳಲ್ಲಿ ಲಭ್ಯವಿದ್ದ
22 ಸೇವೆಗಳನ್ನು 66ಕ್ಕೆ ಹೆಚ್ಚಿಸಲಾಗಿದೆ ಇನ್ಮುಂದೆ ಯಾವುದೇ ಅಲೆದಾಟ ವಿಲ್ಲದೆ ಸರ್ಕಾರಿ ಪ್ರಮಾಣ ಪತ್ರ ಪಡೆದುಕೊಳಬಹುದಾಗಿದೆ .
ನಗರ ಪ್ರದೇಶದ ಸೇವಾ ಕೇಂದ್ರ ಮತ್ತು ತಾಲೂಕು, ಉಪನೋಂದಣಿ ಕಚೇರಿಗೆ ಅಲೆಯಬೇಕಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಆನ್ಲೈನ್ ಸೇವೆಗಳನ್ನು ಗ್ರಾಮಪಂಚಾಯಿತಿ
ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿಯು ಸೇರಿ ಹೊಸ ಹಲವು ಸರ್ಕಾರಿ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ.
ಎಷ್ಟು ಇಲಾಖೆ ಲಭ್ಯ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ (Panchayath Raj) ಇಲಾಖೆ ಪ್ರಕಟಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕರಿಗೆ ಕಂದಾಯ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯಯಿತಿ ರಾಜ್ ಇಲಾಖೆಯ ಸೇವೆಗಳ ಜೊತೆಯಲ್ಲಿ ಇನ್ನು ಮುಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಇಂಧನ, ಇಲಾಖೆಗಳ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಪ್ರತಿಯೊಂದು ಹೋಬಳಿಯು 6 ರಿಂದ 7 ಗ್ರಾಮ ಪಂಚಾಯಿತಿಗಳನ್ನು ಹೊಂದಿದ್ದು,ಸರ್ಕಾರಿ ಸೇವೆಗಳನ್ನು ಪಡೆಯಲು ಹೋಬಳಿ ಕೇಂದ್ರಕ್ಕೆ ಹೋಗಬೇಕಾಗಿತ್ತು ಈ ವ್ಯಾಪ್ತಿಯ 20 ಸಾವಿರದಿಂದ
50 ಸಾವಿರ ಜನರು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಈ ಸಮಸ್ಯೆ ನಿವಾರಿಸಲು 44 ಸೇವೆ ಆರಂಭಿಸಲಾಗಿದೆ ಎಂದು ಹೇಳಿದೆ.
ಯಾವ ಸೇವೆಗಳು ಲಭ್ಯ?
ಕೃಷಿ ಕಾರ್ಮಿಕ ಪ್ರಮಾಣ ಪತ್ರ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ, ಮೇಲುಸ್ತರಕ್ಕೆ ಸೇರಿಲ್ಲವೆಂದು ದೃಢೀಕರಣ ಪತ್ರ, ಬೋನಪೈಡ್ ದೃಢೀಕರಣ ಪತ್ರ,ಭೂ ಹಿಡುವಳಿ ಪ್ರಮಾಣ
ಪತ್ರ,ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ,ಜನಸಂಖ್ಯಾ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ (ಅ.ಜಾ/ಅ.ಪಂ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ (ಪ್ರವರ್ಗ-ಎ), ಹಿಂದುಳಿದ
ಪ್ರವರ್ಗ ಪತ್ರ (ಕೇ.ಸ), ವಾಸ ಸ್ಥಳ ಪ್ರಮಾಣ ಪತ್ರ,ವಿಧವಾ ದೃಢೀಕರಣ ಪತ್ರ,ಗೇಣಿ ರಹಿತ ದೃಢೀಕರಣ ಪತ್ರ,ವ್ಯವಸಾಯಗಾರರ ಕುಟುಂಬದ ದೃಢೀಕರಣ ಪತ್ರ, ಜೀವಂತ ದೃಢೀಕರಣ ಪತ್ರ, ಮರು
ವಿವಾಹವಾಗದಿರುವ ಬಗ್ಗೆ ದೃಢೀಕರಣ ಪತ್ರ, ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ.
ಸರ್ಕಾರಿ ನೌಕರಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ, ನಿರುದ್ಯೋಗಿ ದೃಢೀಕರಣ ಪತ್ರ, ಮೃತರ ಕುಟುಂಬ ಸದಸ್ಯರ ದೃಢೀಕರಣ ಪತ್ರ, ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ,ವ್ಯವಸಾಯಗಾರ ದೃಢೀಕರಣ ಪತ್ರ,
ನಿವಾಸಿ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ (ಉದ್ಯೋಗದ ಸಲುವಾಗಿ ಮಾತ್ರ), ಆದಾಯ ದೃಢೀಕರಣ ಪತ್ರ (ಅನುಕಂಪದ ಆಧಾರದ ನೇಮಕಾತಿಗೆ), ಕುಟುಂಬ ವಂಶವೃಕ್ಷ ದೃಢೀಕರಣ.
ಹೈದ್ರಾಬಾದ್ (Hyderabad) – ಕರ್ನಾಟಕ (Karnataka) ವಿಭಾಗ- ವಲಯದ ವಾಸಸ್ಥಳ ದೃಢೀಕರಣ ಪತ್ರ, ಸಂಧ್ಯಾ ಸುರಕ್ಷಾ ಯೋಜನೆ,ಅಂಗವಿಕಲ ಪೋಷಣಾ ವೇತನ, ನಿರ್ಗತಿಕ ವಿಧವಾ ವೇತನ,
ರಾಷ್ಟ್ರೀಯ ಕುಟುಂಬ ಕ್ಷೇಮ ಯೋಜನೆ, ಬೆಳೆ ದೃಢೀಕರಣ ಪತ್ರ, ಆಸಿಡ್ ದಾಳಿಗೊಳಗಾದ ಮಹಿಳೆಯ ವೇತನ, ರೈತರ ವಿಧವಾ ವೇತನ ಮತ್ತು ಎಂಡೋಸಲ್ಫಾನ್ ಸಂತ್ರಸ್ತರ ಪಿಂಚಣಿ ಮತ್ತು ಅಲ್ಪಸಂಖ್ಯಾತ
ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ (ಆರ್ಯ ವೈಶ್ಯ), ಆದಾಯ ಹಾಗೂ ಆಸ್ತಿ ಪ್ರಮಾಣಪತ್ರ (ಇಡಬ್ಲ್ಯೂಎಸ್), ಜಾತಿ ಪ್ರಮಾಣಪತ್ರ (SC/ST-Migrant), ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ,
ಮೈತ್ರಿ, ಮನಸ್ವಿನಿ, ಅಂತ್ಯ ಸಂಸ್ಕಾರ ಯೋಜನೆ ಪತ್ರ ಈ ಎಲ್ಲದಕ್ಕು ಸಂಬಂಧ ಪಟ್ಟ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.
ಇದನ್ನು ಓದಿ: ಪಠಾಣ್ ಕೋಟ್ ದಾಳಿಯ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಹತ್ಯೆ
- ಮೇಘಾ ಮನೋಹರ ಕಂಪು