Bengaluru: ಕೋಟ್ಯಂತರ ರೂಪಾಯಿಯನ್ನು ಚೈತ್ರಾ ಮತ್ತು ಆಕೆಯ ಗ್ಯಾಂಗ್ ಉದ್ಯಮಿಯೊಬ್ಬರಿಗೆ ವಂಚನೆ ಮಾಡಿದ್ದ (Chaitra Froud Case – Charge Sheet) ಪ್ರಕರಣಕ್ಕೆ
ಸಂಬಂಧಿಸಿದಂತೆ 9 ಆರೋಪಿಗಳ ವಿರುದ್ಧ ಸಿಸಿಬಿ (CCB) ಚಾರ್ಜ್ಶೀಟ್ ಸಲ್ಲಿಸಿದ್ದು, 1ನೇ ಎಸಿಎಂಎಂ (ACMM) ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. 75 ಮಂದಿ ಸಾಕ್ಷಿಗಳ ಹೇಳಿಕೆ
ದಾಖಲಿಸಿ ಸುಮಾರು 800 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದು, ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ (Halashree), ಧನರಾಜ್ ಸೇರಿದಂತೆ 9 ಆರೋಪಿಗಳ
ವಿರುದ್ಧ ಚಾರ್ಜ್ ಶೀಟ್ (Chaitra Froud Case – Charge Sheet) ಸಲ್ಲಿಕೆಯಾಗಿದೆ.
ಡಿಜಿಟಲ್ ಸಾಕ್ಷಿಗಳು, ಬ್ಯಾಂಕ್ ಸ್ಟೇಟ್ ಮೆಂಟ್ಗಳು (Bank Statement), ಸಾಂದರ್ಭಿಕ ಸಾಕ್ಷಿಗಳು, ಸ್ವಾಮಿಜಿ ಕಾರು ಚಾಲಕ ಹಣ ಇಟ್ಟು ಹೋಗಿದ್ದ ಬಗ್ಗೆ ಮೈಸೂರು ಮೂಲದ ವ್ಯಕ್ತಿಯು ನೀಡಿದ ಹೇಳಿಕೆ
ಸೇರಿದಂತೆ ಸ್ಪಾಟ್ ಮಹಜರ್ ನಡೆಸಿ ಹಣ ಸೀಜ್ ಮಾಡಿದ ಸ್ಥಳಗಳ ಬಗ್ಗೆ ಸಿಸಿಬಿ ಪೊಲೀಸರು ಚಾರ್ಜ್ಶೀಟ್ನಲ್ಲಿ (Charge Sheet) ಉಲ್ಲೇಖಿಸಿದ್ದಾರೆ.
ಚೈತ್ರಾ ವಂಚನೆ ಪ್ರಕರಣದಲ್ಲಿ ಬರೋಬ್ಬರಿ 4 ಕೋಟಿ 11 ಲಕ್ಷ ರೂಪಾಯಿ ರಿಕವರಿ ಮಾಡಲಾಗಿದ್ದು, ಚೈತ್ರಾ ವಂಚನೆ ಪ್ರಕರಣದ ತನಿಖೆಯನ್ನು ಸಿಸಿಬಿ ತಂಡ ಪೂರ್ಣಗೊಳಿಸಿದೆ. ಎಂಎಲ್ಎ ಟಿಕೆಟ್
(MLA Ticket) ಡೀಲ್ ಸಂಬಂಧ 68 ಸಾಕ್ಷ್ಯಗಳನ್ನ ಕಲೆ ಹಾಕಿ, 75 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿ ಸುಮಾರು 800 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ.
ಚೈತ್ರಾ ಗ್ಯಾಂಗ್ಗೆ ಬೃಹತ್ ಮೊತ್ತದ ಹಣ ರಿಕವರಿ ಹಿನ್ನಲೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್ (Srikanth), ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 9
ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸಿಸಿಬಿ ಪೊಲೀಸರು ದೂರುದಾರ ಗೋವಿಂದ ಬಾಬು ಪೂಜಾರಿ (Govind Babu Poojari) ಬಳಿ ಎಲ್ಲಾ ಆಡಿಯೋ, ವಿಡಿಯೋವನ್ನು ಪಡೆದಿದ್ದಾರೆ.
ಆಡಿಯೋ (Audio), ವಿಡಿಯೋಗಳ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಗೋವಿಂದ ಪೂಜಾರಿ ಬಳಿಯೇ ಡೀಲ್ (Deal) ಸಂಬಂಧ 10 ವಿಡಿಯೋ ಪಡೆಯಲಾಗಿದೆ. ಆರೋಪಿಗಳ ಮೊಬೈಲ್ ಗಳ ಡೇಟಾ ರಿಟ್ರೀವ್ (Data Retrieve) ವರದಿ ಕೂಡ ಉಲ್ಲೇಖಿಸಲಾಗಿದೆ. ಆರೋಪಿಗಳ
ಮೊಬೈಲ್ ಚಾಟ್ (Mobile Chat), ಕರೆಗಳ ಸಂಬಂಧ ಡೇಟಾ ರಿಟ್ರೀವ್ ಮಾಡಿ ವರದಿ ಸಲ್ಲಿಸಲಾಗಿದೆ. ಸದ್ಯ ಚೈತ್ರಾ ಗ್ಯಾಂಗ್ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿದ್ದು, ಇನ್ನೂ ಕೂಡ
ಜಾಮೀನು ಸಿಗದೇ ಪರದಾಡುವಂತಾಗಿದೆ.
ಇದನ್ನು ಓದಿ: ಎಸ್.ಬಿ.ಐನಲ್ಲಿ ಖಾಲಿಯಿರುವ 47 ಡೆಪ್ಯುಟಿ ಮ್ಯಾನೇಜರ್, ಡೇಟಾ ವಿಶ್ಲೇಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!
- ಭವ್ಯಶ್ರೀ ಆರ್.ಜೆ