New Delhi: ಚುನಾವಣಾ ಆಯೋಗವು ಪಂಚರಾಜ್ಯ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆಯೇ (Challenge for five state elections) ಉಪ ಚುನಾವಣೆಯ ಸಣ್ಣ ಪರೀಕ್ಷೆಯಲ್ಲಿ ಗೆದ್ದು
ಬೀಗಿದ್ದ ಐಎನ್ಡಿಐಎ (INDIA) ಮೈತ್ರಿಕೂಟಕ್ಕೆ, ಚುನಾವಣೆಗೂ ಮುನ್ನ ಇದು ಪೂರ್ವ ಭಾವಿ ಪರೀಕ್ಷೆಯಂತಿದ್ದು, ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಮಾಡುವ ಮೂಲಕ ಐಎನ್ಡಿಐಎ ಮೈತ್ರಿಕೂಟಕ್ಕೆ (Challenge for five state elections) ಮತ್ತೊಂದು ಸವಾಲು ಹಾಕಿದೆ.
2024ಕ್ಕೆ ಲೋಕಸಭೆ ಚುನಾವಣೆಯೂ ನಡೆಯುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳ ವೇಗ ಮತ್ತಷ್ಟು ಹೆಚ್ಚಾಗಲಿದ್ದು, ಪ್ರತಿಪಕ್ಷಗಳು ಐಎನ್ಡಿಐಎ ಹೆಸರಿನ ಒಕ್ಕೂಟ ರಚಿಸಿಕೊಂಡು ಬಿಜೆಪಿ
(BJP) ವಿರುದ್ಧ ಒಗ್ಗಟ್ಟಿನ ಹೋರಾಟ ಘೋಷಿಸಿದ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದಾಗಿದೆ. ಪ್ರತಿಪಕ್ಷಗಳು ಮತ್ತು ಬಿಜೆಪಿ ನಡುವಿನ ಪೈಪೋಟಿಗೆ ಇದು ಸಾಕ್ಷಿಯಾಗಲಿರುವುದಲ್ಲದೆ
ಐಎನ್ಡಿಐಎ ಮೈತ್ರಿಕೂಟದ ಒಗ್ಗಟ್ಟನ್ನೂ ಪಂಚರಾಜ್ಯ ಚುನಾವಣೆ ಒರೆಗೆ ಹಚ್ಚಲಿದೆ.
5 ರಾಜ್ಯಗಳ ಪೈಕಿ ರಾಜಸ್ಥಾನ (Rajasthan) ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಅಧಿಕಾರ ಉಳಿಸಿಕೊಳ್ಳುವ ಸವಾಲಾಗಿದೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು,
ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವ ಸವಾಲು ಎದುರಿಸಲಿದೆ. ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ
ಮತ್ತು ಕಾಂಗ್ರೆಸ್ (Congress) ಕಾರ್ಯತಂತ್ರ ರೂಪಿಸಿವೆ.
3 ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ಮಧ್ಯ ಪ್ರದೇಶ (Madhya Pradesh), ಛತ್ತೀಸ್ಗಢ ಮತ್ತು ರಾಜಸ್ಥಾನ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ದಿನವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, 230 ಸ್ಥಾನಗಳ ಮಧ್ಯ
ಪ್ರದೇಶ ವಿಧಾನಸಭೆ ಸಮರಕ್ಕೆ 57 ಅಭ್ಯರ್ಥಿಗಳ ಪಟ್ಟಿ ಸೋಮವಾರ ಹೊರಬಿದ್ದಿದೆ. ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan) ಅವರು ಬುದ್ನಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಬಿಜೆಪಿ ಮೊದಲ ಎರಡು ಪಟ್ಟಿಗಳನ್ನು ಚುನಾವಣೆ ತಯಾರಿಗಳು ನಡೆಯುತ್ತಿರುವಾಗಲೇ ಪ್ರಕಟಿಸಿತ್ತು. ಮಧ್ಯಪ್ರದೇಶದ 230 ಸದಸ್ಯ ಸ್ಥಾನಗಳಿಗೆ ಬಿಜೆಪಿ 135 ಅಭ್ಯರ್ಥಿಗಳ ಹೆಸರನ್ನು ಮೂರು ಪಟ್ಟಿಗಳಲ್ಲಿ
ಈಗಾಗಲೇ ಪ್ರಕಟಿಸಿದೆ.
ಮಾಜಿ ಸಿಎಂ ರಮಣ್ಸಿಂಗ್ ಸೇರಿದಂತೆ 64 ಅಭ್ಯರ್ಥಿಗಳ ಪಟ್ಟಿಯನ್ನು ಛತ್ತೀಸ್ಗಢದಲ್ಲಿ ಬಿಜೆಪಿ ಘೋಷಿಸಿದ್ದು, 90 ಸದಸ್ಯ ಬಲದ ವಿಧಾನಸಭೆಗೆ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಅರುಣ್ ಸಾವೊ
(Arun Saho) ಅವರಿಗೂ ಟಿಕೆಟ್ ಸಿಕ್ಕಿದೆ.
- ಭವ್ಯಶ್ರೀ ಆರ್.ಜೆ