ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ‌ಸಿಂಧೂರಿಗೆ ಕ್ಲೀನ್ ಚಿಟ್

ಚಾಮರಾಜನಗರ, ಮೇ. 13: ಆಕ್ಸಿಜನ್ ಸಿಗದೆ 24 ಜನರು ಮೃತರಾದ ಚಾಮರಾಜನಗರದ ಪ್ರಕರಣ ಸಂಬಂಧ ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಈ ಪ್ರಕರಣ ಸಂಬಂಧ ನಿವೃತ್ತ ನ್ಯಾಯಮೂರ್ತಿಗಳ‌ ಆಯೋಗ ಹೈಕೋರ್ಟ್ ಗೆ ವರದಿ‌ ಸಲ್ಲಿಸಿದೆ. ರೋಹಿಣಿ ಸಿಂಧೂರಿ ತಪ್ಪು ಮಾಡಿರುವ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ. ಆದರೆ ಈ ದುರಂತಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮತ್ತು ಜಿಲ್ಲಾಸ್ಪತ್ರೆ ಕಾರಣ ಎಂದು ಆಯೋಗ ವರದಿಯಲ್ಲಿ ಸ್ಪಷ್ಟಪಡಿಸಿದೆ. ದುರಂತ ನಡೆದ ದಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲ‌. ಇದೇ ದುರಂತಕ್ಕೆ ‌ಕಾರಣ ಎಂದು ಆಯೋಗ‌ ತಿಳಿಸಿದೆ.

ಆಕ್ಸಿಜನ್ ನೀಡಬೇಡಿ ಅಂತ ರೋಹಿಣಿ ಸಿಂಧೂರಿ ಅವರು ಕೈಗಾರಿಕೆಗಳಿಗೆ ಆದೇಶಿಸಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ತಿಳಿಸಲಾಗಿದೆ. ಆದರೆ ರೋಹಿಣಿ ಸಿಂಧೂರಿ ಆಮ್ಲಜನಕ ಪೂರೈಕೆಗೆ ತಡೆಯೊಡಿದ್ದಾರೆ ಎಂಬುದಕ್ಲೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಕ್ಕೆ ಚಾಮರಾಜ ನಗರ ಜಿಲ್ಲಾಧಿಕಾರಿ ಬಳಿ ಯಾವುದೇ ದಾಖಲೆ ಇಲ್ಲ.

ಹೀಗಾಗಿ ಆಮ್ಲಜನಕ ಪೂರೈಕೆಕೆ ತಡೆಯೊಡ್ಡಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ತನಿಖಾ ತಂಡ ವರದಿಯಲ್ಲಿ ತಿಳಿಸಿದೆ. ವರದಿ ಬಳಿಕ ಡಿಸಿ ರೋಹಿಣಿ ಸಿಂಧೂರಿ ದೋಷ ಮುಕ್ತರಾಗಿದ್ದಾರೆ. ಅಲ್ಲದೇ ಈ ಘಟನೆಗೆ ಚಾಮರಾಜನಗರ ಜಿಲ್ಲಾಡಳಿತವೇ ನಿರ್ಲಕ್ಷ್ಯವೇ ಕಾರಣ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿ ಪ್ರಕಾರ ಹೈಕೋರ್ಟ್ ಪ್ರತಿಕ್ರಿಯೆ ಏನು ಮತ್ತು ತಪ್ಪಿತಸ್ಥರಿಗೆ ಯಾವ ಶಿಕ್ಷೆ ನೀಡುತ್ತದೆ ಅಂತ ಕಾದು ನೋಡಬೇಕಿದೆ.

Exit mobile version