Bengaluru: ಬೆಂಗಳೂರಿನ (chandapura colony become as hell) ಚಂದಾಪುರದ ಜನತಾ ಕಾಲೋನಿಯ ಅವಸ್ಥೆ ನೋಡಿದರೆ ಇಲ್ಲಿ ಮನುಷ್ಯರು ಅಲ್ಲದೆ ಬಿಡಿ ಪ್ರಾಣಿಗಳು ಸಹ ಬದುಕಲು
ಸಾಧ್ಯವಿಲ್ಲ. ಹೌದು, ಇದು ಕಾಲೋನಿಯಲ್ಲಾ ನರಕ ಕೂಪ ! ಬೆಂಗಳೂರಿನ ಚಂದಾಪುರದಲ್ಲಿ (Chandapura) ಇದೆ ಈ ನರಕ ಕೂಪ ಈ ಜನತಾ ಕಾಲೋನಿಯಲ್ಲಿ ಮನುಷ್ಯರಲ್ಲ
ಪ್ರಾಣಿಗಳು ಜೀವನ ನಡೆಸಲು (chandapura colony become as hell) ಆಗುವುದೇ ಇಲ್ಲ.

ನೀವೇನಾದರೂ ಈ ಜಾಗಕ್ಕೆ ಹೋದರೆ ಇದು ಮನುಷ್ಯರು ಬದುಕುವ ಜಾಗವೋ ಅಥವಾ ಹಂದಿಗಳ ಗೂಡೋ ಒಂದು ಗೊತ್ತಾಗುವುದಿಲ್ಲ.ಇಲ್ಲಿ ವಸ ಮಾಡುತ್ತಿರುವಂತಹ ನಿವಾಸಿಗಳು ಪ್ರಾಣಿಗಳು
ಸಹ ವಾಸ ಮಾಡಲಾಗದಂಥಾ ದುರ್ನಾತ ಭರಿತ ಜಾಗದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಇದು ಬೇಸರದ ಸಂಗತಿಯಾಗಿದ್ದು, ಇಲ್ಲಿನ ಜನರ ಜೀವನ ನೋಡಿದ್ರೆ ಎಂಥವರಿಗು ಕರುಳೂ ಚುರುಕ್ ಅನ್ನುತ್ತದೆ.
ಕೊಳಕಿನಿಂದ ಕೂಡಿದ ಈ ಕಾಲೋನಿ (Colony) ಇರೋದು ಬೆಂಗಳೂರಿನ ಚಂದಾಪುರದಲ್ಲಿದ್ದು, ಈ ಕಾಲೋನಿಯ ಪಕ್ಕದಲ್ಲೇ ಮಾಂಸದ ಮಾರುಕಟ್ಟೆ ಇದೆ. ಹಾಗಾಗಿ ಈ ಮಾರುಕಟ್ಟೆಯಿಂದ ಬರುವ
ದುರ್ನಾತ ಭರಿತ ನೀರು ಕಾಲೋನಿಯ ಜನರ ಬದುಕನ್ನು ಘೋರಗೊಳಿಸಿದೆ. ಇನ್ನು ಈ ಜನತಾ ಕಾಲೋನಿ ಚಂದಾಪುರ ಸಭೆಯಿಂದ ಕೈ ಅಳತೆ ದೂರದಲ್ಲಿದ್ದು, ಆದರೂ ಇಲ್ಲಿನ ಜನರಿಗೆ ಮೂಲಭೂತ
ಸೂರ್ಯಯಾನ: ಚಂದ್ರಯಾನ ಯಶಸ್ವಿ ಬೆನ್ನಲ್ಲೇ ಸೆಪ್ಟೆಂಬರಲ್ಲಿ ಸೂರ್ಯಕ್ರಾಂತಿಗೆ ಇಸ್ರೋ ತಯಾರಿ
ಸೌಕರ್ಯ ಮರೀಚಿಕೆಯಾದಂತಿದೆ. ಕುಡಿಯಲು ಶುದ್ಧ ನೀರು ಇಲ್ಲದೆ ರಸ್ತೆಗಳು ಇಲ್ಲವೇ ಇಲ್ಲ. ಇಲ್ಲಿನ ಜನರ ಜೀವನ ಹಂದಿಗಳಿಗಿಂತ ಕಡೆಯಾಗಿ ಬದುಕುವಂತೆ ಮಾಡಿದ್ದು, ಸ್ಥಳೀಯ ಆಡಳಿತ ವ್ಯವಸ್ಥೆಯ
ಸೌಲಭ್ಯ ದೊರಕುತ್ತಿಲ್ಲ ಎನ್ನುವುದು ಜನರನ್ನು ಆಕ್ರೋಶಕ್ಕೆ ಎದೆ ಮಾಡಿಕೊಟ್ಟಿದೆ.

ಸಾರ್ವಜನಿಕರಿಗೆ ಮತ್ತು ಜನತಾ ಕಾಲೋನಿ ನಿವಾಸಿಗಳಿಗೆ ನಿರ್ಮಿಸಿರುವ ಶೌಚಾಲಯಗಳನ್ನು ಈ ಮೊದಲೇ ಉದ್ಘಾಟನೆ ಮಾಡಿ ಅದು ಪಾಳು ಬಿದ್ದಿದ್ದು, . ಒಮ್ಮೆ ಇಲ್ಲಿಗೆ ನೀವು ಭೇಟಿಕೊಟ್ರೆ ಇದರ ಅವ್ಯವಸ್ಥೆಯನ್ನೂ
ಕಣ್ಣಾರೆ ನೋಡಬಹುದು. ಈ ಬಗ್ಗೆ ಪುರ ಸಭೆಯ ಅಧಿಕಾರಿಗಳಿಗೆ ಎಷ್ಟ್ಟು ಮನವಿ ಮಾಡಿದರು ಕೂಡ ಅವರು ಜನರ ಮನವಿಗೆ ಸ್ಪಂದಿಸದೆ ಇಲ್ಲಿನ ಜನರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ.
ಚಂದಾಪುರದ (Chandapura) ಜನತಾ ಕಾಲೋನಿಯ ಜನರು ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ಸುಮಾರು ಬಾರಿ ಅವರ ಗಮನಕ್ಕೆ ತಂದರು ಶಾಸಕರು ಮಾತ್ರ ಸಂಬಂಧವೇ ಇಲ್ಲದಂತೆ
ಸುಮ್ಮನಿದ್ದಾರೆ. ಚುನಾವಣೆ ಸಮಯದಲ್ಲಿ ಬರುವ ಶಾಸಕರು ಆಶ್ವಾಸನೆ ಕೊಟ್ಟು ಹೋದರೆ ಮತ್ತೆ ಈ ಕಾಲೋನಿಗೆ ಬರುವುದಿಲ್ಲ ಎಂಬುವುದು ಇಲ್ಲಿಯ ನಿವಾಸಿಗಳ ಅಳಲಾಗಿದೆ.
ಚುನಾವಣೆ ಬಂದಾಗ ಮಾತ್ರ ಬರುವ ನಾಯಕರಿಗೆ ನಾಚಿಕೆ ಆಗಲ್ವಾ? ಅವರಿಗೆ ಕಣ್ಣೇ ಇಲ್ವಾ? ರಾಜಧಾನಿ ಬೆಂಗಳೂರಿನ (Bengaluru) ಜನತಾ ಕಾಲೋನಿಯ ಈ ದುಸ್ಥಿತಿಗೆ ಪರಿಹಾರವೇ ಇಲ್ವೇ?
ಸಚಿವರೇ, ಶಾಸಕರೇ ಈಗಾಲಾದ್ರೂ ಎಚ್ಚೆತ್ತುಕೊಂಡು ಇಲ್ಲಿನ ಜನರ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕು ಎಂಬುವುದು ಎಲ್ಲರ ಆಗ್ರಹವಾಗಿದೆ.
ಭವ್ಯಶ್ರೀ ಆರ್.ಜೆ