ಆಸ್ಕರ್‌ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಲು ಇಚ್ಛಿಸಿದ್ದೆ. ಆದ್ರೆ, ಯಾರು ಕರೆ ಮಾಡಲಿಲ್ಲ! ನಟ ರಾಮ್ ಚರಣ್

Tamilnadu : ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅವರ ಪುತ್ರ ನಟ ರಾಮ್ ಚರಣ್ ತೇಜಾ (Ram Charan Teja) ಅವರು ನನಗೆ ಆಸ್ಕರ್‌ ಪ್ರಶಸ್ತಿ ಕಾರ್ಯಕ್ರಮದ ವೇದಿಕೆಯಲ್ಲಿ ನಾಟು (charan waiting to dance) ನಾಟು ಹಾಡಿಗೆ ಡ್ಯಾನ್ಸ್ ಮಾಡಲು ಆಸೆಯಿತ್ತು. ಆದ್ರೆ, ಯಾರಿಂದಲೂ ನನಗೆ ಕರೆ ಬರಲಿಲ್ಲ ಎಂದು ಹೇಳಿದ್ದಾರೆ.

ನಟ ರಾಮ್ ಚರಣ್ ಅವರು ಆಸ್ಕರ್‌ (Oscar) ಪ್ರಶಸ್ತಿ ಸಮಾರಂಭದಲ್ಲಿ ನಾಟು ನಾಟು (Natu Natu) ಹಾಡಿಗೆ ಪ್ರದರ್ಶಿಸಲು ಬಯಸಿದ್ದರು. ಆದರೆ ಅವರನ್ನು ಯಾರು ಸಂಪರ್ಕಿಸಲಿಲ್ಲ ಎಂದು ಹೇಳಲಾಗಿದೆ.

ಈ ಬಗ್ಗೆ ಖುದ್ದಾಗಿ ನಟ ರಾಮ್ ಚರಣ್ ಅವರನ್ನು ನೇರವಾಗಿ ಪ್ರಶ್ನಿಸಿದಾಗ ಮನಬಿಚ್ಚಿ ಮಾತನಾಡಿದ ನಟ ರಾಮ್ ಚರಣ್,

ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ನಾನು 100 ಪರ್ಸೆಂಟ್ ಸಿದ್ಧನಾಗಿದ್ದೆ ಎಂದು ಹೇಳಿದ್ದಾರೆ.

ಆಸ್ಕರ್‌ನಲ್ಲಿ ನಟ ಜೂನಿಯರ್ ಎನ್‌ಟಿಆರ್ (NTR) ಜೊತೆಯಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಪ್ರದರ್ಶಿಸಲು ನಾನು 100 ಪರ್ಸೆಂಟ್ ಸಿದ್ಧನಿದ್ದೆ.

ಆದ್ರೆ, ಯಾರಿಂದಲೂ ಕರೆ ಬರಲಿಲ್ಲ ಎಂದು ರಾಮ್ ಚರಣ್ ಹೇಳಿದರು.

ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಿರೀಕ್ಷೆಗಳ ಹೊರತಾಗಿಯೂ ಕಳೆದ ತಿಂಗಳು 95 ನೇ ಅಕಾಡೆಮಿ

ಅವಾರ್ಡ್ಸ್‌ನಲ್ಲಿ ಅವರ ಚಲನಚಿತ್ರ RRR ನಿಂದ ನಾಟು ನಾಟು ಹಾಡಿಗೆ ಲೈವ್ ಪ್ರದರ್ಶನ ನೀಡಲಿಲ್ಲ.

ಈ ಹಿಂದೆ, ಚಿತ್ರದ ಇಬ್ಬರು ನಟರಾದ ರಾಮ್ ಚರಣ್ ಮತ್ತು ಜೂ. ಎನ್ ಟಿಆರ್ ಇಬ್ಬರು ನಾಟು ನಾಟು ಹಾಡಿಗೆ ಚಿತ್ರದಲ್ಲಿ ಡ್ಯಾನ್ಸ್ ಮಾಡಿದಂತೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು.

ಆದ್ರೆ, ಅಂದುಕೊಂಡಂತೆ ನಟರಿಬ್ಬರು ವೇದಿಕೆಯಲ್ಲಿ ಪ್ರದರ್ಶಿಸಲಿಲ್ಲ. ಬದಲಾಗಿ ಡ್ಯಾನ್ಸರ್ಸ್ (Dancers) ಗ್ರೂಪ್ ಪ್ರಶಸ್ತಿಗಳಲ್ಲಿ ಆಸ್ಕರ್ ವಿಜೇತ ಹಾಡಿಗೆ ಪ್ರದರ್ಶನ ನೀಡಿದರು.

ಆಸ್ಕರ್‌ನಲ್ಲಿ ನಾಟು ನಾಟು ಹಾಡಿಗೆ ನೀವು ಯಾಕೆ ನೃತ್ಯ ಮಾಡಲಿಲ್ಲ, ಕಾರಣವೇನು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರಾಮ್ ಚರಣ್(Ram Charan ), ಇಲ್ಲ ನಾನು ಆಸ್ಕರ್‌ ವೇದಿಕೆಯಲ್ಲಿ ಡ್ಯಾನ್ಸ್ ಮಾಡಲು ಆಸೆಪಟ್ಟಿದ್ದೆ,

ಆದ್ರೆ ಯಾರಾದರೂ ಕರೆ ಮಾಡಲಿದ್ದಾರೆ ಎಂದು ಕಾಯುತ್ತಿದ್ದೆ ಮತ್ತು ಸಿದ್ಧವಾಗಿದ್ದೆ ಎಂದು ಹೇಳಿದ್ದಾರೆ. ಮಾರ್ಚ್‌ನಲ್ಲಿ ನಡೆದ ಆಸ್ಕರ್ ಸಮಾರಂಭದಲ್ಲಿ,

ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರು ವೇದಿಕೆಯಲ್ಲಿ ನೃತ್ಯಗಾರರು ಪ್ರದರ್ಶಿಸಿದಾಗ ನಾಟು ನಾಟುವನ್ನು ಲೈವ್ ಆಗಿ ಹಾಡಿದರು.

ನಟಿ ದೀಪಿಕಾ ಪಡುಕೋಣೆ (Deepika Padukone) ಡ್ಯಾನ್ಸ್ ಮಾಡುವ ತಂಡವನ್ನು ವೇದಿಕೆಗೆ ಪರಿಚಯಿಸಿದ್ದರು. ನಾನು ಡ್ಯಾನ್ಸ್ ಮಾಡಲು ಆಸೆಯನ್ನು ಹೊಂದಿದ್ದೆ.

ಪ್ರಾಯಶಃ ನಾನು ಸಿದ್ಧನಾಗಿದ್ದೆ, ಆ ಕರೆಯನ್ನು ಪಡೆಯಲು ನಾನು 100 ಪರ್ಸೆಂಟ್ (Percent) ಸಿದ್ಧನಾಗಿದ್ದೆ. ಯಾರ ಕರೆಯೂ ನನಗೆ ಬರಲಿಲ್ಲ. ಅದು ಯಾಕೆ? ಏನಾಯಿತು ಎಂದು ನನಗೆ ನಿಜವಾಗಿಯೂ ತಿಳಿದಿಲ್ಲ.

ಆದರೆ ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಏಕೆಂದರೆ ಅಲ್ಲಿ ಡ್ಯಾನ್ಸ್ ಮಾಡಿದ ತಂಡ ಅದ್ಭುತವಾಗಿದ್ದರು ಮತ್ತು ಅವರು ನಮಗಿಂತ (charan waiting to dance) ಉತ್ತಮವಾಗಿ ಕೆಲಸ ಮಾಡಿದ್ದಾರೆ.

ನಾನು ನಾಟು ನಾಟು ಹಾಡಿಗೆ ಈ ಹಿಂದೆ ಹಲವು ವೇದಿಕೆಯ ಮೇಲೆ, ಸಂದರ್ಶನಗಳಲ್ಲಿ ಡ್ಯಾನ್ಸ್ ಮಾಡಿದ್ದೇನೆ.

ಆದ್ದರಿಂದ ಈಗ, ನಾನು ವಿಶ್ರಾಂತಿ ಪಡೆಯುವುದು ಒಳಿತು ಎಂದು ಭಾವಿಸುತ್ತೇನೆ ಮತ್ತು ಕುಳಿತು ಆನಂದಿಸಲು ಬಯಸುತ್ತೇನೆ.

ನನಗೆ ಅನ್ನಿಸುವುದು ಏನೇಂದರೆ ನಾಟು ನಾಟು ಹಾಡು ಇದು ಇನ್ನು ಮುಂದೆ ನಮ್ಮ ಹಾಡು ಅಲ್ಲ! ಇದು ಭಾರತದ ಹಾಡು. ಇದು ಜನರ ಹಾಡು ಎಂದು ರಾಮ್ ಚರಣ್ ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.

Exit mobile version