National Film Award: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ. ‘ಚಾರ್ಲಿ 777’ ಅತ್ಯುತ್ತಮ ಕನ್ನಡ ಚಿತ್ರ

Delhi: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ಗುರುವಾರ ಘೋಷಣೆಯಾಗಿದ್ದು, 2022ನೇ ಸಾಲಿನಲ್ಲಿ ಬಿಡುಗಡೆಯಾದ ‘ರಾಕೆಟ್ರಿ ದಿ ನಂಬಿ ಎಫೆಕ್ಟ್’ (Charlie received national award)

ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅದೇ ರೀತಿ ‘ಚಾರ್ಲಿ 777’ (Charlie 777) ಗೆ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪಶಸ್ತಿ ಲಭಿಸಿದೆ. ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhat)

ಮತ್ತು ಕೃತಿ ಸನೋನ್‌ (Kriti Sanon) ಅವರಿಗೆ ‘ಗಂಗೂಬಾಯಿ ಕಥಿಯಾವಾಡ’ (Gangubai Kathiawada) ಮತ್ತು ‘ಮಿಮಿ’ (Mimi) ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ‍

ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್‌ (Allu Arjun) ಅವರಿಗೆ ‘ಪುಷ್ಪ’ (Pushpa) ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಅಲ್ಲದೆ ಅತ್ಯುತ್ತಮ ನೃತ್ಯ ನಿರ್ದೇಶನ, ಸಾಹಸ ನಿರ್ದೇಶನ ಮತ್ತು

ಉತ್ತಮ ಎಫೆಕ್ಟ್‌ ವಿಭಾಗದಲ್ಲಿ ರಾಜಮೌಳಿ (Rajamouli) ನಿರ್ದೇಶನದ ‘ಆರ್‌ಆರ್‌ಆರ್‌’ (RRR) ಚಿತ್ರ ಆಯ್ಕೆಗೊಂಡಿದೆ. 2021ರಲ್ಲಿ ಕೋವಿಡ್ (Covid) ಕಾರಣದಿಂದ ಬಿಡುಗಡೆಗೊಂಡಿದ್ದ ಚಲನಚಿತ್ರಗಳಿಗೆ

ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಆದರೆ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ. ಕೇಂದ್ರ ಸರಕಾರ ಇದೇ

ಮೊದಲ ಬಾರಿಗೆ ತಡವಾಗಿ (Charlie received national award) ಪ್ರಶಸ್ತಿ ಘೋಷಣೆ ಮಾಡಿದೆ.

ಪ್ರಶಸ್ತಿಯ ವಿವರಗಳು

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ನಟ ಮಾಧವನ್‌ (Madhavan) ನಿರ್ದೇಶನದ ಇಸ್ರೋ (ISRO) ವಿಜ್ಞಾನಿಯಾದ ನಂಬಿ ನಾರಾಯಣ್‌ (Nambi Narayan) ಅವರ ಜೀವನಾಧಾರಿತ ಚಿತ್ರ

ರಾಕೆಟ್ರಿ: ನಂಬಿ ಎಫೆಕ್ಟ್ (Rocketry The Nambi Effect) ಚಿತ್ರವು ರಾಷ್ಟ್ರೀಯ ಪ್ರಶಸ್ತಿ (Charlie received national award) ಪಡೆದುಕೊಂಡಿದೆ. ಹಾಗೂ ಅತ್ಯುತ್ತಮ ಪೋಷಕ

ʼಶಿವಶಕ್ತಿʼ ನಾಮಕರಣ ತಪ್ಪಲ್ಲ, ಹೊರಗಿನ ಹುಡುಕಾಟ ವಿಜ್ಞಾನವಾದರೆ, ಅಂತರಂಗಕ್ಕೆ ಆಧ್ಯಾತ್ಮ: ಇಸ್ರೋ ಅಧ್ಯಕ್ಷ

ನಟ ಪ್ರಶಸ್ತಿಯು ‘ಮಿಮಿ’ (Mimi) ಚಿತ್ರದ ಪಂಕಜ್‌ ತ್ರಿಪಾಠಿ (Pankaj Tripathi) ಮತ್ತು ಅತ್ಯುತ್ತಮ ಪೋಷಕ ನಟಿ ‘ದಿ ಕಾಶ್ಮೀರ್‌ ಫೈಲ್ಸ್‌’ (The Kashmir files) ನಲ್ಲಿ ವಿವಿ ಪ್ರೊಫೆಸರ್‌

ಪಾತ್ರ ನಿಭಾಯಿಸಿದ್ದ ಪಲ್ಲವಿ ಜೋಶಿ (Pallavi Joshi) ಅವರ ಪಾಲಾಗಿದೆ. ಬೆಸ್ಟ್‌ ಅಡಾಪ್ಟೆಡ್‌ ಸ್ಕ್ರೀನ್‌ ಪ್ಲೇ (Best Adapted Screen Play), ಬೆಸ್ಟ್‌ ಡೈಲಾಗ್‌ ವಿಭಾಗದಲ್ಲಿ ಗಂಗೂಬಾಯಿ

ಕಥಿಯಾವಾಡಿ (Gangubai Kathiawadi) ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಜಯಿಸಿದೆ.

ಭವ್ಯಶ್ರೀ ಆರ್.ಜೆ

Exit mobile version