ರಸ್ತೆಯ ಮಧ್ಯೆ ಬಿದ್ದು ಪರಸ್ಪರ ಕಿತ್ತಾಡಿಕೊಂಡ ವಿದ್ಯಾರ್ಥಿನಿಯರು!

ಮಂಗಳವಾರ(Tuesday), ಏಪ್ರಿಲ್(April) 26 ರಂದು ಚೆನ್ನೈನ(Chennai) ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತ ನಿಂತಿದ್ದ ವಿದ್ಯಾರ್ಥಿನಿಯರು ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಮಾತಿನ ಚಕಮಕಿ ಏಕಾಏಕಿ ದೊಡ್ಡ ಜಗಳಕ್ಕೆ ತಿರುಗಿದೆ.

ವಿದ್ಯಾರ್ಥಿನಿಯರು ಬಸ್ ಸ್ಟಾಪ್ ಬಿಟ್ಟು ರಸ್ತೆಯ ಮಧ್ಯೆ ಬಂದಿಳಿದು ನೆಲಕ್ಕೆ ಬಿದ್ದರು, ಜಗಳವನ್ನು ನಿಲ್ಲಿಸದೇ ಹೊಡೆದಾಡಿಕೊಂಡಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿನಿಯರು ಇಷ್ಟು ದೊಡ್ಡ ಮಟ್ಟಕ್ಕೆ ಬಡಿದಾಡಿಕೊಳ್ಳಲು ಕಾರಣವೇನು ಎಂಬುದನ್ನು ತಿಳಿಯುವುದಾದರೆ, ಚೆನ್ನೈನಲ್ಲಿ ಎರಡು ಕಾಲೇಜು ವಿದ್ಯಾರ್ಥಿನಿಯರ ನಡುವೇ ಚಿಕ್ಕ ವಿಚಾರಕ್ಕೆ ವಾಗ್ವಾದ ಉಂಟಾಗಿದೆ. ಈ ವಾಗ್ವಾದವೂ ಏಕಾಏಕಿ ವಿಕೋಪಕ್ಕೆ ತಿರುಗಿದೆ. ಮಾತಿನಲ್ಲಿ ಶುರುವಾದ ವಾಗ್ವಾದ, ಜಡೆ ಹಿಡಿದು ಬಡಿದಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ.

ವಿದ್ಯಾರ್ಥಿನಿಯರ ನಡುವೆ ಉಂಟಾದ ಘರ್ಷಣೆಗೆ ಸ್ಥಳದಲ್ಲಿದ್ದ ಜನಸಾಮಾನ್ಯರು ಬಿಡಿಸಲು ಮುಂದಾಗಿದ್ದಾರೆ. ಆದ್ರೆ ಅದು ಸಾಧ್ಯವಾಗಿಲ್ಲ! ಗುಂಪಿನೊಂದಿಗೆ ಇದ್ದ ಎರಡು ಕಾಲೇಜಿನ ವಿದ್ಯಾರ್ಥಿನಿಯರು ಒಬ್ಬರಿಗೊಬ್ಬರು ಬಗ್ಗದೇ ರಸ್ತೆಯ ಮಧ್ಯಕ್ಕೆ ಬಂದು ಕೆಳೆಗೆ ಬಿದ್ದರು ಜಗಳ ಬಿಡದೆ ಹೊಡೆದಾಡಿಕೊಂಡಿರುವುದು ಅಶ್ಚರ್ಯವೇ ನಿಜ! ನ್ಯೂ ವಾಶರ್ಮನ್‌ಪೇಟ್‌ನ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯರ ನಡುವೆ ವಾಗ್ವಾದ ಆರಂಭಗೊಂಡಿತ್ತು.

ಗಸ್ತಿನಲ್ಲಿದ್ದ ಪೊಲೀಸರು ವಿದ್ಯಾರ್ಥಿನಿಯರ ಹೊಡೆದಾಟವನ್ನು ಗಮನಿಸಿ ಕೂಡಲೇ ಮಧ್ಯಪ್ರವೇಶಿಸಿ ಗುಂಪುಗಳನ್ನು ಬೇರ್ಪಡಿಸಿದರು. ನಂತರ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿ ಎಚ್ಚರಿಕೆ ನೀಡಿ ಬಿಡಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version