ಮೋಯಿನ್ ಅಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ

ಲಂಡನ್ ಸೆ 27 : ಇಂಗ್ಲೆಂಡ್ ತಂಡದ ಅನುಭವಿ ಆಲ್ರೌಂಡರ್ ಮೋಯಿನ್ ಅಲಿ ಅವರು ಟೆಸ್ಟ್ ಕ್ರಿಕೆಟ್ ಮಾಡಲು ವಿದಾಯ ಘೋಷಿಸಿದ್ದಾರೆ. ಸೀಮಿತ ಓವರ್ ಗಳ ಕ್ರಿಕೆಟ್‌ಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಟೆಸ್ಟ್ ಮಾದರಿಗೆ ವಿದಾಯ ಹೇಳಿರುವುದಾಗಿ ಅವರು ಹೇಳಿದ್ದಾರೆ.

34 ವರ್ಷದ ಮೋಯಿನ್ ಅಲಿ ಅವರು  ಇದುವರೆಗೆ 64 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2014ರಲ್ಲಿ ಟೆಸ್ಷ್  ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಅಲಿ ಐದು ಶತಕ ಮತ್ತು 14 ಅರ್ಧಶತಕ ಗಳೊಂದಿಗೆ 28.3ರ ಸದಾಸರಿಯಲ್ಲಿ 2014 ರನ್ ಗಳಿಸಿದ್ದಾರೆ ಸ್ಪಿನರ್ ಆಗಿರುವ ಇವರು ಟೆಸ್ಟ್ ಕ್ರಿಕೆಟ್ ನಲ್ಲಿ 195 ವಿಕೆಟ್  ಕಬಳಿಸಿದ್ದಾರೆ.

ಮೋಯಿನ್ ಅಲಿ ಇತ್ತೀಚೆಗೆ ನಡೆದ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಭಾಗವಹಿಸಿದ್ದು ಇದು ಇವರ ಕೊನೆಯ ಟೆಸ್ಟ್‌ ಪಂದ್ಯವಾಗಿತ್ತು. ಸದ್ಯ ಚೆನ್ನೈ ಸೂಪರ್ ಕಿಂಗ್ ಪರ ಐಪಿಎಲ್ ನಲ್ಲಿ ಆಡುತ್ತಿರುವ ಮೋಯಿನ್ ಅಲಿ ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ಪರವಾಗಿ ಸೀಮಿತ ಓವರ್ ಕ್ರಿಕೆಟ್ ಮತ್ತು ಕೌಂಟಿ ಕ್ರಿಕೆಟ್ ನಲ್ಲಿ ಆಡುವುದಾಗಿ ಹೇಳಿದ್ದಾರೆ.

Exit mobile version