Baku: ಎಫ್‌ಐಡಿಇ (FIDE) ಚೆಸ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ಯುವ ಚೆಸ್ ಗ್ರ್ಯಾನ್ ಮಾಸ್ಟರ್ ಆರ್ (chessplayer prajnananda to final) ಪ್ರಜ್ಞಾನಂದ
(R Prajnananda) ಅವರು ಫ್ಯಾಬಿಯಾನೊ ಕರುವಾನಾ ವಿರುದ್ಧ ಗೆಲುವು ಪಡೆದಿದ್ದಾರೆ. ಈ ಮೂಲಕ ಫೈನಲ್‌ಗೆ (Final) ಲಗ್ಗೆ ಇಟ್ಟಿದ್ದು, ಮತ್ತೊಂದೆಡೆ ವಿಶ್ವದ ನಂ.1 ಚೆಸ್ ಆಟಗಾರ
ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಕೂಡ ಫೈನಲ್ ತಲುಪಿದ್ದಾರೆ. ಈ ಇಬ್ಬರು ಕೆನಡಾದಲ್ಲಿ (Canada) ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಅಝರ್‌ಬೈಜಾನ್ (Azerbaijan) ಬಾಕುವಿನಲ್ಲಿ ನಡೆಯುತ್ತಿರುವ ಎಫ್‌ಐಡಿಇ ಚೆಸ್ (Chess) ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಉದಯೋನ್ಮುಖ ಚೆಸ್ ಪಟು ಆರ್ ಪ್ರಜ್ಞಾನಂದ ಅವರು
ಸೋಮವಾರ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಸೆಮಿಫೈನಲ್ ಹಣಾಹಣಿಯಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ (Fabiano Caruana) ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
18ರ ಪ್ರಾಯದ ಪ್ರಜ್ಞಾನಂದ ಅವರು ಆರಂಭದಲ್ಲಿ ಸಮಬಲ ಹೋರಾಟ ನಡೆಸಿದರೂ ಅಂತಿಮವಾಗಿ 3.5-2.5 ಅಂತರದಲ್ಲಿ ಫ್ಯಾಬಿಯಾನೊ ಅವರನ್ನು ಸೋಲಿಸಿದರು. ಈ ಮೂಲಕ 21 ವರ್ಷಗಳ
ಬಳಿಕ ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಸಾಧನೆಯನ್ನು ತಮಿಳುನಾಡು (Tamilnadu) ಬಾಲಕ ಮಾಡಿದ್ದಾನೆ.
2024ರಲ್ಲಿ ಕೆನಡಾದಲ್ಲಿ ನಡೆಯುವ ಫೈನಲ್‌ನಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ವಿರುದ್ಧ ಭಾರತೀಯ ಚೆಸ್ ಪಟು ಸೆಣಸಲಿದ್ದಾರೆ. ಸೆಮಿಫೈನಲ್ (Semifinal)
ಪಂದ್ಯದ ಕ್ಲಾಸಿಕಲ್ ಆರಂಭಿಕ ಎರಡು ಗೇಮ್‌ಗಳಲ್ಲಿ (Game) ಪ್ರಜ್ಞಾನಂದ ಅವರು ಫ್ಯಾಬಿಯಾನೊ ವಿರುದ್ಧ 1-1 ಟೈ ಮಾಡಿಕೊಂಡಿದ್ದರು. ಆದರೆ ಅಮೆರಿಕನ್ (America) ಗ್ರ್ಯಾನ್ ಮಾಸ್ಟರ್
ಎದುರು ಭಾರತೀಯ ಗ್ರ್ಯಾನ್ ಮಾಸ್ಟರ್ (Gran Master) ತಮ್ಮ ಬುದ್ದಿವಂತಿಕೆ ಹಾಗೂ ತಂತ್ರದಲ್ಲಿ ಮೇಲುಗೈ ಸಾಧಿಸಿದರು. ಆ ಮೂಲಕ ಗೆಲುವು ತನ್ನ ತೆಕ್ಕೆಗೆ ಹಾಕಿಕೊಂಡರು.

ವಿಶ್ವನಾಥನ್ ಆನಂದ (Vishwanath Anand) ಅವರ ನಂತರ 21 ವರ್ಷಗಳ ಬಳಿಕ ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ
ಭಾಜನರಾಗಿದ್ದಾರೆ. ಭಾರತೀಯ ಚೆಸ್ ದಂತಕತೆ ವಿಶ್ವನಾಥನ್ ಆನಂದ್ ಅವರು 2000 ಹಾಗೂ 2002ರಲ್ಲಿ ವಿಭಿನ್ನ ಮಾದರಿಗಳಲ್ಲಿ ಎರಡು ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದರು.
ಚೆಸ್ ದಂತಕತೆ ವಿಶ್ವನಾಥನ್ ಆನಂದ ಅವರು ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಸೆಮಿಫೈನಲ್ ಗೆದ್ದ ಆರ್ ಪ್ರಜ್ಞಾನಂದ (R Prajnananda) ಅವರನ್ನು
ಗುಣಗಾನ ಮಾಡಿದ್ದಾರೆ. ಪ್ರಜ್ಞಾನಂದ ಅವರು ಫೈನಲ್ ತಲುಪಿದ್ದಾರೆ. ಇವರು ಫ್ಯಾಬಿಯಾನೊ ಕರುವಾನಾ ವಿರುದ್ಧ ಟೈಬ್ರೇಕ್‌ನಲ್ಲಿ (Tiebreak) ಗೆದ್ದಿದ್ದಾರೆ ಹಾಗೂ ಫೈನಲ್‌ನಲ್ಲಿ ಮ್ಯಾಗ್ನಸ್
ಕಾರ್ಲ್‌ಸನ್ ವಿರುದ್ಧ ಸೆಣಸಲಿದ್ದಾರೆ. ಎಂಥಾ ಪ್ರದರ್ಶನ ಎಂದು ವಿಶ್ವನಾಥನ್ ಆನಂದ್ ಟ್ವೀಟ್ (Tweet) ಮಾಡಿ ಗುಣಗಾನ (chessplayer prajnananda to final) ಮಾಡಿದ್ದಾರೆ.
ಇವರು ಫೈನಲ್‌ನಲ್ಲಿ ಕಾರ್ಲ್‌ಸನ್ ವಿರುದ್ಧ ಕಾದಾಟಕ್ಕೆ ಸಿದ್ಧರಾಗಲಿದ್ದು, ಈ ಟೂರ್ನಿಯುದ್ದಕ್ಕೂ ತೋರಿದ ಪ್ರದರ್ಶನವನ್ನೇ ಫೈನಲ್ ಹಣಾಹಣಿಯಲ್ಲಿಯೂ ತೋರಲು ಅವರು ಎದುರು ನೋಡುತ್ತಿದ್ದಾರೆ.
ಅಲ್ಲದೆ ಇದರ ಜೊತೆಗೆ ಚೆಸ್ ಶ್ರೀಮಂತ ಇತಿಹಾಸವನ್ನು ಹೊಂದಿರುವ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವ ಭರವಸೆ ಮೂಡಿಸಿದ್ದಾರೆ. ಪ್ರಜ್ಞಾನಂದ ಅವರ ಈ ಸಾಧನೆಯನ್ನು ಕಾಂಗ್ರೆಸ್
(Congress) ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಪ್ರಮುಖರು ಅಭಿನಂದನೆ ತಿಳಿಸಿದ್ದಾರೆ.
ಭವ್ಯಶ್ರೀ ಆರ್.ಜೆ