ಸತೀಶ್‌ ಜಾರಕಿಹೊಳಿ ವಿರೋಧವನ್ನು ಲೆಕ್ಕಿಸದೆ ಅದರ ಪರವಾಗಿ ನಿಲ್ಲುವ ಧೈರ್ಯವನ್ನು ಹೊಂದಿರಬೇಕು : ನಟ ಚೇತನ್

Bengaluru : ಸತೀಶ್‌ ಜಾರಕಿಹೊಳಿ(Chetan Over Hindu Controversy) ಅವರ ಮಾತಿನಲ್ಲಿ ಪದದ ವ್ಯುತ್ಪತ್ತಿಯು ಸತ್ಯ ಎಂದು ನಂಬಿದ್ದರೆ, ವಿರೋಧವನ್ನು ಲೆಕ್ಕಿಸದೆ ಅದರ ಪರವಾಗಿ ನಿಲ್ಲುವ ಧೈರ್ಯವನ್ನು ಹೊಂದಿರಬೇಕು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ(Chethan Ahimsa) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌(Chetan Over Hindu Controversy) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಶಾಸಕ ಸತೀಶ್ ಜಾರಕಿಹೊಳಿ ‘ಹಿಂದೂ’ ಎಂಬ ಪದದ ಬಗ್ಗೆ ಹೇಳಿಕೆ ನೀಡಿ, ಇವಾಗ ಹಿಂಪಡೆದಿದ್ದಾರೆ. ನಿರಾಶಾದಾಯಕ ಹೆಜ್ಜೆ. ಜಾರಕಿಹೊಳಿ ಅವರ ಮಾತಿನಲ್ಲಿ ಪದದ ವ್ಯುತ್ಪತ್ತಿಯು ಸತ್ಯ ಎಂದು ನಂಬಿದ್ದರೆ, ವಿರೋಧವನ್ನು ಲೆಕ್ಕಿಸದೆ ಅದರ ಪರವಾಗಿ ನಿಲ್ಲುವ ಧೈರ್ಯವನ್ನು ಹೊಂದಿರಬೇಕು.

ಹೀಗೆ ಹಿಂತೆಗೆದುಕೊಳ್ಳುವ ಮೂಲಕ, ಜಾರಕಿಹೊಳಿ ಸೋತು ಮತ್ತು ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೊಂದು ಬರಹದಲ್ಲಿ, ಶಾಸಕ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಆರ್ಟಿಕಲ್ 19 – ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿದೆ.

https://youtu.be/-I-tDriCCcg ಕಾಪಾಡಿ ಕಂದಮ್ಮಗಳನ್ನ! Killer commission!

ಪರ್ಷಿಯನ್ ಪದವಾದ ‘ಹಿಂದೂ’ವಿನ ಪರ್ಯಾಯ ವ್ಯಾಖ್ಯಾನಗಳ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಚರ್ಚೆಗಳ ಅಗತ್ಯವಿದೆ. ಭವಿಷ್ಯದಲ್ಲಿ, ಜಾರಕಿಹೊಳಿ ಅವರು ರಾಜಕೀಯ ಲಾಭಕ್ಕಾಗಿ ‘ಹಿಂದೂ’ ಕಾಂಗ್ರೆಸ್‌ ಜೊತೆ ನಿಲ್ಲುವುದರ ಬದಲಾಗಿ ಸಮಾನತಾವಾದಿಗಳಾದ ನಮ್ಮೊಂದಿಗೆ ಮತ್ತು ಸತ್ಯದೊಂದಿಗೆ ನಿಲ್ಲುತ್ತಾರೆ ಎಂದು ಭಾವಿಸುತ್ತೇವೆ ಎಂದಿದ್ದರು.

ಇದನ್ನೂ ಓದಿ : https://vijayatimes.com/childrens-loves-gandadagudi/

ಇನ್ನು ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ಶಾಸಕ(Congress MLA) ಸತೀಶ್‌ ಜಾರಕಿಹೊಳಿ ‘ಮಾನವ ಬಂಧುತ್ವ ವೇದಿಕೆ’ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಹಿಂದೂ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿ, ಅನೇಕರಿಂದ ವಿರೋಧ ವ್ಯಕ್ತವಾಗಿತ್ತು.

ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಮತ್ತು ಸುರ್ಜೇವಾಲಾ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಈ ಹೇಳಿಕೆಗೂ ಕಾಂಗ್ರೆಸ್‌ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅಂತರ ಕಾಯ್ದುಕೊಂಡಿದ್ದರು. ಇದೀಗ ಸತೀಶ್‌ ಜಾರಕಿಹೊಳಿ ತಮ್ಮ ಹೇಳಿಕೆಗೆ ವಿಷಾದ‌ ವ್ಯಕ್ತಪಡಿಸಿದ್ದಾರೆ.

Exit mobile version