ಭಾರತೀಯ ಕ್ರಿಕೆಟ್ ಆಟಗಾರರು ಫಿಟ್‌ನೆಸ್‌ಗಾಗಿ ನಿಷೇಧಿತ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ: ಚೇತನ್‌ಶರ್ಮಾ

Mumbai : ಖಾಸಗಿ ಮಾದ್ಯಮವೊಂದು ನಡೆಸಿದ ಕುಟುಕು ಕಾರ್ಯಾಚರಣೆಯ ವೇಳೆ ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್‌ ಶರ್ಮಾ(Chetan Sharma), ಟೀಮ್‌ ಇಂಡಿಯಾದ(Team India) ಕುರಿತು ಅನೇಕ ರಹಸ್ಯ (Chetan Sharma revealed fact) ಮಾಹಿತಿಗಳನ್ನು ಹೇಳಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರೀ ವೈರಲ್‌ ಆಗುತ್ತಿದೆ.

ಈ ವಿಡಿಯೋದಲ್ಲಿ ಅವರು ಭಾರತ ತಂಡದ ಅನೇಕ ಆಟಗಾರರು ದೈಹಿಕವಾಗಿ ಫಿಟ್‌ ಅಲ್ಲದಿದ್ದರೂ ,

ಅದನ್ನು ಸಾಭೀತುಪಡಿಸಲು ನಿಷೇಧಿತ ಚುಚ್ಚುಮದ್ದನ್ನು(Injection) ಬಳಸುತ್ತಿದ್ದಾರೆ. ಆದರೆ ಅದರಲ್ಲಿ ಡ್ರಗ್‌ (Drug)ಅಂಶ ಇರುವುದಿಲ್ಲ.

ಹೀಗಾಗಿ ಡೋಪ್‌ ಪರೀಕ್ಷೆ ನಡೆಸಿದರು, ಅವರು ಸಿಕ್ಕಿ ಬೀಳುವುದಿಲ್ಲ. ನನಗಿರುವ ಮಾಹಿತಿಯ ಪ್ರಕಾರ ಭಾರತ ತಂಡದ ಅನೇಕ ಆಟಗಾರರು (Chetan Sharma revealed fact) ಕೇವಲ 80ರಷ್ಟು ಮಾತ್ರ ಫಿಟ್‌ಆಗಿದ್ದು,

100ಕ್ಕೆ 100ರಷ್ಟು ಫಿಟ್‌ಎಂದು ಆಯ್ಕೆ ಸಮಿತಿಗೆ ತೋರಿಸಲು ನಿಷೇಧಿತ ಚುಚ್ಚುಮದ್ದು ಪಡೆಯುತ್ತಿದ್ದಾರೆ.

ಈ ಸಂಗತಿ ಆಯ್ಕೆ ಸಮಿತಿಯ ಗಮನಕ್ಕೂ ಬಂದಿದೆ ಎಂದು ಚೇತನ್‌ ಶರ್ಮಾ ಆಘಾತಕಾರಿ ಸಂಗತಿಯನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: 50 ಲೀಟರ್‌ ಸಾಮರ್ಥ್ಯದ ಜಡ್ಜ್ ಕಾರಿಗೆ 57 ಲೀಟರ್‌ ಪೆಟ್ರೋಲ್ ತುಂಬಿ ಗೋಲ್‌ಮಾಲ್: ಪೆಟ್ರೋಲ್ ಬಂಕ್ ಸೀಲ್

ಇನ್ನು ಭಾರತ ತಂಡದ ಪರ ಯಾರು ಆಡಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ. ಈ ನಡುವೆ ತಂಡದ ನಾಯಕ ಕೂಡಾ ತನ್ನ ನೆಚ್ಚಿನ ಆಟಗಾರನ ಹೆಸರನ್ನೂ ಸೂಚಿಸಬಹುದು.

ಭವಿಷ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಮುಖ್ಯವಾಗಿ ವಿರಾಟ್‌ಕೊಹ್ಲಿ(Virat Kohli) ಮತ್ತು ರೋಹಿತ್‌ಶರ್ಮಾ(Rohit Sharma) ಅವರಂತ ದೊಡ್ಡ ಆಟಗಾರರಿಗೆ ಟಿ-20 ಕ್ರಿಕೆಟ್‌ನಿಂದ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.

ಹೀಗಾಗಿಯೇ ಶುಭ್‌ಮನ್‌ ಗಿಲ್‌ ಅವರಂತ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ.

ಅದೇ ರೀತಿ ರೋಹಿತ್ ಶರ್ಮಾ ಅವರ ಬದಲಿಗೆ ಹಾರ್ದಿಕ್ ಪಾಂಡ್ಯ(Hardik Pandya) ದೀರ್ಘಾವಧಿಗೆ ಭಾರತ ತಂಡದ ನಾಯಕರಾಗಿರುತ್ತಾರೆ ಎಂದು ಚೇತನ್ ಶರ್ಮಾ ಬಹಿರಂಗಪಡಿಸಿದರು.

ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಶುಭಮನ್ ಗಿಲ್ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಆಟಗಾರರನ್ನು ನಾನು ಭಾರತ ತಂಡಕ್ಕೆ ಕರೆತಂದಿದ್ದೇನೆ.

ಕೆಎಲ್ ರಾಹುಲ್(KL Rahul), ಶಿಖರ್ ಧವನ್, ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನಕ್ಕೆ ಯುವ ಬ್ಯಾಟ್ಸ್‌ಮನ್‌ಗಳಾದ ಸೂರ್ಯಕುಮಾರ್‌ಯಾದವ್‌,

ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಅಪಾಯವಾಗುತ್ತಾರೆ ಎಂದಿರುವ ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.

Exit mobile version