ಮಹಿಳಾ ಮೀಸಲಾತಿ ಮಸೂದೆ ಮತ್ತು ಕರ್ನಾಟಕದಲ್ಲಿ@Karnataka ಎಸ್ಸಿ ಮತ್ತು ಎಸ್ಟಿಗೆ ಮೀಸಲಾತಿ ಶೇಕಡಾವಾರು (%) ಹೆಚ್ಚಳ ಮತ್ತು ಎಸ್ಸಿಗಳಿಗೆ ಆಂತರಿಕ ಮೀಸಲಾತಿಗಳು ಕಾಂಗ್ರೆಸ್ಗಿಂತ (Congress) ಬಿಜೆಪಿ ಮೀಸಲಾತಿಯತ್ತ ಹೆಚ್ಚು ಒಲವು ತೋರುತ್ತಿದೆ ಎಂದು ಸೂಚಿಸುತ್ತದೆ ಎಂದು ನಟ ಚೇತನ್ ಹೇಳಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಮಹಿಳಾ ಮೀಸಲಾತಿ ಮಸೂದೆ– ಸಂಸತ್ತಿನ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವುದು ಇದು ಒಳ್ಳೆಯ ಕ್ರಮ. ಅಂದರೆ ಕರ್ನಾಟಕದಲ್ಲಿ 74/224 ಕ್ಷೇತ್ರಗಳು ಮತ್ತು ಲೋಕಸಭೆಯ 181/543 ಕ್ಷೇತ್ರಗಳು ಮಹಿಳೆಯರಿಗೆ ಮಾತ್ರ ಮೀಸಲು ಮಹಿಳಾ ಮೀಸಲಾತಿ ಮಸೂದೆ ಮತ್ತು ಕರ್ನಾಟಕದಲ್ಲಿ, ಎಸ್ಸಿ ಮತ್ತು ಎಸ್ಟಿಗೆ (ST) ಮೀಸಲಾತಿ ಶೇಕಡಾವಾರು (%) ಹೆಚ್ಚಳ ಮತ್ತು ಎಸ್ಸಿಗಳಿಗೆ ಆಂತರಿಕ ಮೀಸಲಾತಿಗಳು ಕಾಂಗ್ರೆಸ್ಗಿಂತ ಬಿಜೆಪಿ (BJP) ಮೀಸಲಾತಿಯತ್ತ ಹೆಚ್ಚು ಒಲವು ತೋರುತ್ತಿದೆ ಎಂದು ಸೂಚಿಸುತ್ತದೆ ಎಂದಿದ್ದಾರೆ.
ಇನ್ನೊಂದು ಬರಹದಲ್ಲಿ ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಸೋಮವಾರ ಅಂಗೀಕರಿಸಿದೆ. ಎಲ್ಲಾ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಎಸ್ಸಿ(SC) -ಎಸ್ಟಿ(ST) ಮಹಿಳೆಯರಿಗೆ ಉಪ-ಪ್ರಾತಿನಿಧ್ಯ ಇದು ಉತ್ತಮ ಕ್ರಮವಾಗಿದೆ.
ಮಹಿಳಾ ಮೀಸಲಾತಿ ಮಸೂದೆಗಿಂತ ಹೆಚ್ಚು ಬೇಕಾಗಿರುವುದು ಎಲ್ಲಾ ಮಾನವರಿಗೆ ಪುರುಷಪ್ರಧಾನ ವ್ಯವಸ್ಥೆಯ ವಿರೋಧಿ ಸಿದ್ಧಾಂತ. ಏಕೆಂದರೆ– ಬಹುತೇಕ ಎಲ್ಲಾ ಮಹಿಳೆಯರು ಬಹುತೇಕ ಎಲ್ಲಾ ಪುರುಷರಂತೆ ಅಸ್ತಿತ್ವದಲ್ಲಿರುವ ಪುರುಷಪ್ರಧಾನ ವ್ಯವಸ್ಥೆಯನ್ನು ಭದ್ರಪಡಿಸುತ್ತಾರೆ/ಬಲಪಡಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸದ್ಯ ನಡೆಯುತ್ತಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ “ಮಹಿಳಾ ಮೀಸಲಾತಿ ಮಸೂದೆ”ಯನ್ನು ಮಂಡಿಸಿದೆ. ಈ ಮಸೂದೆಯ ಪ್ರಕಾರ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ ನೀಡಲಾಗುತ್ತದೆ. 1996ರಲ್ಲಿ ಈ ಮಸೂದೆಯನ್ನು ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡರು (H D Devegowda) ಸಂಸತ್ತಿನಲ್ಲಿ ಮಂಡಿಸಿದ್ದರು. ಆದರೆ ಕೆಲ ಪಕ್ಷಗಳ ವಿರೋಧದಿಂದಾಗಿ ಮಸೂದೆ ಪಾಸ್ ಆಗಿರಲಿಲ್ಲ. ಆದರೆ ಈಗ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.