ಲಿಂಗಾಯತ ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ : ನಟ ಚೇತನ್

Bengaluru : ಲಿಂಗಾಯತ ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ (Social Activist) ಚೇತನ್‌ (Chethan Ahimsa Statement) ಅಭಿಪ್ರಾಯಪಟ್ಟಿದ್ದಾರೆ.

Chethan

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಪ್ರಸ್ತುತ ಸಂದರ್ಭದಲ್ಲಿ, ಬ್ರಾಹ್ಮಣ್ಯದಿಂದ ಸರ್ವಸಮ್ಮತವೆಂದು ತಪ್ಪಾಗಿ ಪ್ರಕ್ಷೇಪಿಸಲಾಗಿರುವ ಲಿಂಗಾಯತ-ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ – ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ.

21 ಶತಮಾನದ ಲಿಂಗಾಯತ ಧರ್ಮವು (ಸಮಾನತೆ ಮತ್ತು ನ್ಯಾಯದ ಮುಖಾಂತರ ಶರಣ ತತ್ವ) ಇಂದಿನ ಅಪ್ಪರ್-ಕಾಸ್ಟ್ ಶೂದ್ರರ (ಅಂದರೆ ಲಿಂಗಾಯತರ) ಭೂ ಮತ್ತು ರಾಜಕೀಯ ಪ್ರಾಬಲ್ಯವನ್ನು ಕಿತ್ತುಹಾಕುವುದನ್ನು ಪ್ರತಿಪಾದಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : https://vijayatimes.com/yogi-gives-deadline-to-officers/

ಇದಕ್ಕೂ ಮುನ್ನ ಕೇಸರಿ ಬಣ್ಣದ ಧ್ವಜ ಹಿಂದುತ್ವವಲ್ಲ (Chethan Ahimsa Statement) ನಾವು ನಡೆಸುತ್ತಿರುವ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ಈ ಬಸವಣ್ಣರವರ ಚಿತ್ರವು ಸಂಕೇತಿಸುತ್ತದೆ.

ನಾವು 260 ಪ್ರತ್ಯೇಕ ಧರ್ಮಗಳನ್ನು ಸಂವಿಧಾನಾತ್ಮಕವಾಗಿ 260 ವಚನಕಾರರಿಗೆ ಅನುಗುಣವಾಗಿ ಗುರುತಿಸಿದ ನಂತರವೇ ಈ ಪರಿವರ್ತನಾ ಚಳುವಳಿ ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತೇನೆ.

Chethan

ಇನ್ನು ಲಿಂಗಾಯತರು ಯಾವತ್ತೂ ಹಿಂದೂಗಳು ಅಥವಾ ವೀರಶೈವರು ಆಗಿರಲಿಲ್ಲ. ಸಾಮಾಜಿಕ ಸಿದ್ಧಾಂತವಾದಿಯಾದ ಆಶಿಶ್ ನಂದಿ ಅವರು, ಆರ್‌ಎಸ್‌ಎಸ್ನ ಹಿಂದುತ್ವವನ್ನು ಗಾಂಧಿವಾದದ ‘ಸನಾತನಿ’ ಹಿಂದೂ ಧರ್ಮದಿಂದ ಪ್ರತ್ಯೇಕಿಸುತ್ತಾರೆ.

https://youtu.be/7_IxcBoPL2g

ಆರ್‌ಎಸ್‌ಎಸ್ನ (RSS) ಸಂಸ್ಥಾಪಕರಾದ ಹೆಡ್ಗೆವಾರ್ (Hedgewar) ಅವರು ‘ಹಿಂದೂ ರಾಷ್ಟ್ರೀಯತೆಯ ಅನೇಕ ಪ್ರವರ್ತಕರಂತೆ, ಹಿಂದೂ ಧರ್ಮದ ಆಕ್ರಮಣಕಾರಿ ವಿಮರ್ಶಕರಾಗಿದ್ದರು’ ಎಂದು ವಾದಿಸಿದರು.

ಇದನ್ನೂ ಓದಿ : https://vijayatimes.com/bjp-will-lead-in-karnataka-if/

ಹಾಗಾಗಿ, ಹಿಂದುತ್ವವನ್ನು ಪ್ರತಿಗಾಮಿ ಮತ್ತು ಎಬ್ರಹಾಮಿಕ್ ‘ಸುಧಾರಣೆ’ಯ ಚಳುವಳಿಯಂತೆ ಕಾಣಬಹುದು ಎಂದಿದ್ದಾರೆ.

Exit mobile version