ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ ಇನ್ನೊಂದರ ಅಗತ್ಯವಿಲ್ಲ : ನಟ ಚೇತನ್‌

Bengaluru : ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ, ಇನ್ನೊಂದರ ಅಗತ್ಯವಿಲ್ಲ ಎಂದು ನಟ (Chethan Slams Aravind Kejrival) ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ಅವರು ಆಮ್‌ ಆದ್ಮಿ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಎಎಪಿ ಪಕ್ಷದ (AAP Party) ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ (Aravind Kejrival) ಅವರು,

ಬ್ಯಾಂಕ್ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ಫೋಟೋಗಳನ್ನು ಮುದ್ರಿಸಿ (Chethan Slams Aravind Kejrival) ಎಂದು ಆಗ್ರಹ ನೀಡಿದ್ದಾರೆ, ಇದರಿಂದ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದು ಕೂಡ ವಾದಿಸಿದ್ದಾರೆ. https://vijayatimes.com/bombay-highcourt-verdict/

ಇದು ಎಷ್ಟು ಅಸಂಬದ್ಧವಾದ ಹೇಳಿಕೆ.. ಇಂತಹ ಅಸಾಂವಿಧಾನಿಕ ಮೂಢನಂಬಿಕೆಯ ಮೌಢ್ಯಗಳ ಹೇರಿಕೆಯನ್ನು ಕೇಜ್ರಿವಾಲ್ ಅವರು ನಿಲ್ಲಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ ,ಇನ್ನೊಂದರ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

https://fb.watch/gq4NX1StpD/ ಪ್ರಧಾನಿಯಾದ ಬಳಿಕ ಮಾತನಾಡಿದ ರಿಷಿ ಸುನಕ್ ಅವರು ಹೇಳಿದ್ದೇನು ಗೊತ್ತಾ?

ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೇಶದ ಕರೆನ್ಸಿಗಳ ಮೇಲೆ ಲಕ್ಷ್ಮೀ ಮತ್ತು ಗಣೇಶ್ ದೇವರುಗಳ ಫೋಟೋಗಳನ್ನು ಹಾಕುವುದರಿಂದ ದೇಶದ ಜನರು ಆರ್ಥಿಕತೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ಸಫಲರಾಗುತ್ತಾರೆ‌ ಎಂದು ಹೇಳಿಕೆ ನೀಡಿದ್ದರು. 

ಕೇಜ್ರಿವಾಲ್‌ ಅವರ ಈ ಹೇಳಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರು ಕೇಜ್ರಿವಾಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ “ಲಕ್ಷ್ಮಿ ದೇವಿಯ ಫೋಟೋವನ್ನು ಹಾಕುವ ಅವರ ಆಲೋಚನೆಯು ಅನುಚಿತವಲ್ಲ. ಆದರೆ ಒಮ್ಮೆ ನಾವು ಹಳೆಯ ಸ್ಥಾಪಿತ ಮಾನದಂಡಗಳನ್ನು ಅನುಸರಿಸಲು ಪ್ರಾರಂಭಿಸಿದರೆ,

ನಂತರ ನೀವು ವೈವಿಧ್ಯಮಯ ಕರೆನ್ಸಿ ನೋಟುಗಳ ಮೇಲೆ ಪ್ರತಿನಿಧಿಸಲು ಹಕ್ಕುದಾರರ ಅಂತ್ಯವಿಲ್ಲದ ಸರತಿಯನ್ನು ಹೊಂದಿರುತ್ತೀರಿ” ಎಂದು ಲೇವಡಿ ಮಾಡಿದ್ದಾರೆ.
Exit mobile version