ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Bengaluru: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ(Nandi Hills) ತಪ್ಪಲಿನಲ್ಲಿ ಆದಿಯೋಗಿ ಪ್ರತಿಮೆ(Chikkaballapur Adiyogi stay order) ಅನಾವರಣ ಮತ್ತು ಈಶ ಯೋಗ ಕೇಂದ್ರದ ಉದ್ಘಾಟನೆಗೆ ರಾಜ್ಯ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿ, ತಡೆಯಾಜ್ಞೆ ನೀಡಿದೆ.

ರಾಜ್ಯ ಸರ್ಕಾರ, ಯೋಗ ಕೇಂದ್ರ ಮತ್ತು ಇತರ 14 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರತಿಮೆಯನ್ನು ಜನವರಿ 15 ರಂದು ಸದ್ಗುರುಗಳ ಈಶಾ ಫೌಂಡೇಶನ್(Isha Foundation) ಉದ್ಘಾಟಿಸಲು ನಿರ್ಧರಿಸಲಾಗಿತ್ತು. ನ್ಯಾಯಾಲಯವು ಮುಂದಿನ ಆದೇಶ ನೀಡುವವರೆಗೂ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ.

ಪರಿಸರ ದುರ್ಬಲ ವಾತಾವರಣದಲ್ಲಿ ವಾಣಿಜ್ಯ ಉದ್ದಿಮೆಯನ್ನು ಸ್ಥಾಪಿಸಲಾಗುತ್ತಿದೆ ಮತ್ತು ರಾಜ್ಯ ಸರ್ಕಾರವು ಈ ಉದ್ದೇಶಕ್ಕಾಗಿ ಕಾನೂನುಬಾಹಿರವಾಗಿ ಭೂಮಿಯನ್ನು ಮಂಜೂರು ಮಾಡಿದೆ ಎಂದು

ಚಿಕ್ಕಬಳ್ಳಾಪುರದ ಕ್ಯಾತಪ್ಪ(Kyathappa) ಎಸ್ ಮತ್ತು ಇತರ ಕೆಲವು ಗ್ರಾಮಸ್ಥರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ಕರ್ನಾಟಕ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಕೊಯಮತ್ತೂರಿನ

ಈಶ ಯೋಗ ಕೇಂದ್ರವು ಸೇರಿದಂತೆ 16 ಜನರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿದೆ.

ಪರಿಸರ ವ್ಯವಸ್ಥೆ, ಜಲಾನಯನ, ನಂದಿಬೆಟ್ಟದ ಕೋರ್ ಕಮಾಂಡ್ ಪ್ರದೇಶ ಮತ್ತು ಚಿಕ್ಕಬಳ್ಳಾಪುರ ಹೋಬಳಿಯ ಎನ್‌ಡಿಬಿ(Chikkaballapur Adiyogi stay order) ಪಾದಚಾರಿ ಪ್ರದೇಶವನ್ನು ನಾಶಪಡಿಸಿ,

ಪ್ರಸಿದ್ಧ ನಂದಿ ಬೆಟ್ಟದ ಬುಡದಲ್ಲಿ ಖಾಸಗಿ ಪ್ರತಿಷ್ಠಾನ ಸ್ಥಾಪಿಸಲು ಅಧಿಕಾರಿಗಳು ಕಾನೂನು ಉಲ್ಲಂಘನೆಗೆ ಅನುಮತಿ ನೀಡಿದ್ದಾರೆ ಎಂದು ಪಿಐಎಲ್(PIL) ನಲ್ಲಿ ಆರೋಪಿಸಲಾಗಿದೆ.

ಪರಿಸರ ಕಾನೂನುಗಳನ್ನು ಉಲ್ಲಂಘಿಸಿ ಹಲವಾರು ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಪರಿಸರ ವ್ಯವಸ್ಥೆ,

ಪರಿಸರ ಮತ್ತು ನೈಸರ್ಗಿಕ ಮಳೆನೀರಿನ ತೊರೆಗಳು, ಜಲಮೂಲಗಳು, ಜಲಧಾರೆ ಹೊಳೆಗಳು ಮತ್ತು ನರಸಿಂಹ ದೇವರ ಶ್ರೇಣಿ (ಬೆಟ್ಟ) ನಾಶಪಡಿಸಲು, ವಿರೂಪಗೊಳಿಸಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಪಿಐಎಲ್ ಹೇಳಿದೆ.

ಇದನ್ನೂ ಓದಿ: https://vijayatimes.com/does-modi-have-morals/

ಇದು ನಂದಿ ಬೆಟ್ಟದ ಪ್ರದೇಶದ ಜೀವನ, ಜೀವನೋಪಾಯ, ದನ, ಕುರಿ, ಕಾಡು ಪ್ರಾಣಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಉತ್ತರ ಪಿನಾಕಿನಿ ಮತ್ತು ದಕ್ಷಿಣ ಪಿನಾಕಿನಿ ನದಿಗಳು ನಂದಿ ಬೆಟ್ಟದಲ್ಲಿ ಹುಟ್ಟುತ್ತವೆ,

ಇದರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಈ ಪ್ರದೇಶದಲ್ಲಿ ಪರಿಸರವನ್ನು ದುರ್ಬಲಗೊಳಿಸುವ ಇಂತ ಯೋಜನೆಗಳಿಗೆ ಅವಕಾಶ ನೀಡಬಾರದು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

Exit mobile version