Health : ಮಕ್ಕಳ ಬೆಳವಣಿಗೆ ಆಗಲು ನಿದ್ರೆ ಕೂಡ ಅತ್ಯಂತ ಪ್ರಮುಖ ಅಂಶವಾಗಿದೆ. ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಂತ ಮಹತ್ವದ್ದಾಗಿದೆ. ನಿದ್ರಾಹೀನತೆಯು(Insomnia) ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೀಗಾಗಿ ನಾವು ನಿದ್ರೆಯ ಕುರಿತು ವಿಶೇಷ ಕಾಳಜಿ ವಹಿಸಿಸುವುದು ಬಹಳ ಮುಖ್ಯ. ಇನ್ನು ವಯಸ್ಕರು ಸಾಮಾನ್ಯವಾಗಿ 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಆದರೆ ಮಕ್ಕಳು ದಿನಕ್ಕೆ 10 ಗಂಟೆಗೂ ಹೆಚ್ಚು ಕಾಲ ನಿದ್ರೆ ಮಾಡಬೇಕು. ಮಕ್ಕಳು ಹೆಚ್ಚು ನಿದ್ರೆ ಮಾಡಿದಷ್ಟೂ ಮಕ್ಕಳ ಆರೋಗ್ಯ ವೃದ್ಧಿಯಾಗಿರುತ್ತದೆ.
- ಮಗು ಎಚ್ಚರವಾದಾಗ ಪೋಷಕರನ್ನು ಹುಡುಕುತ್ತದೆ. ಹೀಗಾಗಿ ಪೋಷಕರು ಸದಾ ಮಕ್ಕಳ ಬಳಿಯೇ ಇರಬೇಕು.
- ಮಗುವಿಗೆ ನಿದ್ರೆಯ ದಿನಗಳಲ್ಲಿ ಆಗುವ ಬದಲಾವಣೆಗಳು ಅವುಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತವೆ. ಹೀಗಾಗಿ ಒಂದೇ ರೀತಿಯ ದಿನಚರಿ ಅನುಸರಿಸಿ.
https://fb.watch/gAN7avqVKk/ COVER STORY | ಕಾಸು ಕೊಟ್ರೆ ಡಿಎಲ್ ! ಟೆಸ್ಟ್ ಡ್ರೈವಿಂಗ್ ಮಾಡದೇ ಡಿಎಲ್ ಸಿಗುತ್ತೆ. Brokers darbaar in RTO !
- ಗ್ಯಾಸ್, ಆ್ಯಸಿಡ್ ರಿಫ್ಲಕ್ಸ್, ಹೊಟ್ಟೆ ನೋವು ಸಮಸ್ಯೆಯಿಂದ ಮಕ್ಕಳಲ್ಲಿ ನಿದ್ರೆಯ ಸಮಸ್ಯೆಗಳು ಉಂಟಾಗುತ್ತವೆ. ಅವುಗಳ ಬಗ್ಗೆ ಪೋಷಕರು ಗಮನ ಹರಿಸಬೇಕು.
- ನವಜಾತ ಶಿಶುಗಳು ರಾತ್ರಿ ಸಮಯದಲ್ಲಿ ನಿದ್ರೆ ಮಾಡದಿರಲು ಕೆಲವು ಕಾರಣಗಳಿವೆ. ಅವುಗಳನ್ನು ಸರಿಪಡಿಸಿದರೆ ನಿದ್ರೆ ಮಾಡುತ್ತಾರೆ.
- ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಎದೆಹಾಲು ನೀಡದಿದ್ದರೆ, ಮಗುವಿಗೆ ರಾತ್ರಿಯಲ್ಲಿ ಹಸಿವು ಉಂಟಾಗುತ್ತದೆ. ಹೀಗಾಗಿ ಆಗಾಗ ಹಾಲುಣಿಸುವ ಜವಾಬ್ದಾರಿ ಇರಬೇಕು.

- ಶಿಶುಗಳು ದಿನ ಮಲಗುವ ಸ್ಥಳದಿಂದ ಬೇರೆ ಸ್ಥಳದ ವಾತಾವರಣದಲ್ಲಿ ಎಚ್ಚರಗೊಂಡರೆ, ಗೊಂದಲಕ್ಕೊಳಗಾಗುತ್ತಾರೆ. ಹೀಗಾಗಿ ಪ್ರತಿದಿನ ಒಂದೇ ಸ್ಥಳದಲ್ಲಿ ಮಲಗಿಸಿ.
ಮಕ್ಕಳು ಯಾವ ವಯಸ್ಸಿನಲ್ಲಿ ಎಷ್ಟು ನಿದ್ರೆ ಮಾಡಬೇಕು? ಎಂಬ ವಿವರಗಳು ಇಲ್ಲಿವೆ :
1ರಿಂದ 4 ವಾರಗಳ ಮಗು: ನವಜಾತ ಶಿಶುಗಳು ಸಾಮಾನ್ಯವಾಗಿ ದಿನಕ್ಕೆ 15ರಿಂದ 18 ಗಂಟೆಗಳ ಕಾಲ ನಿದ್ರೆ ಮಾಡಬೇಕು. 4ರಿಂದ 12 ತಿಂಗಳ ಮಗು: ಈ ಶಿಶುಗಳು 14 -15 ಗಂಟೆಗಳ ನಿದ್ರೆ ಮಾಡುತ್ತವೆ. 1ರಿಂದ 3 ವರ್ಷದ ಮಗು: ಈ ಮಕ್ಕಳು ದಿನಕ್ಕೆ 12-14 ಗಂಟೆಗಳು ನಿದ್ರೆ ಮಾಡಬೇಕು.
ಇದನ್ನೂ ಓದಿ : https://vijayatimes.com/vande-bharat-express/
3 ರಿಂದ 6 ವರ್ಷದ ಮಕ್ಕಳು: ಈ ಮಕ್ಕಳು ದಿನಕ್ಕೆ 12 ಗಂಟೆಗಳ ನಿದ್ರೆ ಮಾಡಬೇಕು. 7 ರಿಂದ 12 ವರ್ಷದ ಮಕ್ಕಳು: ಈ ಮಕ್ಕಳು 10-11 ಗಂಟೆಗಳು ನಿದ್ರೆ ಮಾಡಬೇಕು.12 ರಿಂದ 18 ವರ್ಷದ ಮಕ್ಕಳು: ದಿನಕ್ಕೆ 8-9 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಹದಿಹರೆಯದಲ್ಲಿ ಹೆಚ್ಚಿನ ಗಂಟೆಗಳ ನಿದ್ರೆಯು ಬೇಕಾಗುತ್ತದೆ.
- ಪವಿತ್ರ