ನಿಮ್ಮ ಮಗು ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ? ಹಾಗಿದ್ರೆ ಇವುಗಳನ್ನು ಅನುಸರಿಸಿ

Health : ಮಕ್ಕಳ ಬೆಳವಣಿಗೆ ಆಗಲು ನಿದ್ರೆ ಕೂಡ ಅತ್ಯಂತ ಪ್ರಮುಖ ಅಂಶವಾಗಿದೆ. ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಂತ ಮಹತ್ವದ್ದಾಗಿದೆ.  ನಿದ್ರಾಹೀನತೆಯು(Insomnia) ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೀಗಾಗಿ ನಾವು ನಿದ್ರೆಯ ಕುರಿತು ವಿಶೇಷ  ಕಾಳಜಿ ವಹಿಸಿಸುವುದು ಬಹಳ ಮುಖ್ಯ. ಇನ್ನು ವಯಸ್ಕರು ಸಾಮಾನ್ಯವಾಗಿ 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಆದರೆ ಮಕ್ಕಳು ದಿನಕ್ಕೆ 10 ಗಂಟೆಗೂ ಹೆಚ್ಚು ಕಾಲ ನಿದ್ರೆ ಮಾಡಬೇಕು. ಮಕ್ಕಳು ಹೆಚ್ಚು ನಿದ್ರೆ ಮಾಡಿದಷ್ಟೂ ಮಕ್ಕಳ ಆರೋಗ್ಯ ವೃದ್ಧಿಯಾಗಿರುತ್ತದೆ.

ಮಕ್ಕಳು ಯಾವ ವಯಸ್ಸಿನಲ್ಲಿ ಎಷ್ಟು ನಿದ್ರೆ ಮಾಡಬೇಕು? ಎಂಬ ವಿವರಗಳು ಇಲ್ಲಿವೆ :

1ರಿಂದ 4 ವಾರಗಳ ಮಗು: ನವಜಾತ ಶಿಶುಗಳು ಸಾಮಾನ್ಯವಾಗಿ ದಿನಕ್ಕೆ 15ರಿಂದ 18 ಗಂಟೆಗಳ ಕಾಲ ನಿದ್ರೆ ಮಾಡಬೇಕು. 4ರಿಂದ 12 ತಿಂಗಳ ಮಗು: ಈ ಶಿಶುಗಳು 14 -15 ಗಂಟೆಗಳ ನಿದ್ರೆ ಮಾಡುತ್ತವೆ. 1ರಿಂದ 3 ವರ್ಷದ ಮಗು: ಈ ಮಕ್ಕಳು ದಿನಕ್ಕೆ 12-14 ಗಂಟೆಗಳು ನಿದ್ರೆ ಮಾಡಬೇಕು.  

ಇದನ್ನೂ ಓದಿ : https://vijayatimes.com/vande-bharat-express/

3 ರಿಂದ 6 ವರ್ಷದ ಮಕ್ಕಳು: ಈ ಮಕ್ಕಳು ದಿನಕ್ಕೆ 12 ಗಂಟೆಗಳ ನಿದ್ರೆ ಮಾಡಬೇಕು. 7 ರಿಂದ 12 ವರ್ಷದ ಮಕ್ಕಳು: ಈ ಮಕ್ಕಳು 10-11 ಗಂಟೆಗಳು ನಿದ್ರೆ ಮಾಡಬೇಕು.12 ರಿಂದ 18 ವರ್ಷದ ಮಕ್ಕಳು: ದಿನಕ್ಕೆ 8-9 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಹದಿಹರೆಯದಲ್ಲಿ ಹೆಚ್ಚಿನ ಗಂಟೆಗಳ ನಿದ್ರೆಯು ಬೇಕಾಗುತ್ತದೆ.

Exit mobile version