ಮಕ್ಕಳ ಗಂಧದಗುಡಿ ; ಮಗು ಮನಸ್ಸಿನ ‘ಅಪ್ಪು’ಗೆ ಪ್ರೀತಿಯ ಅಪ್ಪುಗೆ, ಮೆಚ್ಚುಗೆ ನೀಡಿದ ಶಾಲಾ ಮಕ್ಕಳು

Bengaluru : ಪವರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಕನ್ನಡ ಚಿತ್ರರಂಗದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Childrens Loves Gandadagudi) ಅವರ ಅಭಿನಯ, ಮಗುವಿನ ಮನಸ್ಸು, ಚಿತ್ರರಂಗಕ್ಕೆ ಕೊಟ್ಟಂತ ಕೊಡುಗೆ ಮತ್ತು ವರ್ಚಸ್ಸಿಗಾಗಿ ಲಕ್ಷಾಂತರ, ಕೋಟ್ಯಾಂತರ ಜನರು ಪೂಜಿಸಿ, ಆರಾಧಿಸುವಂತ ವ್ಯಕ್ತಿ ಹಾಗೂ ವ್ಯಕ್ತಿತ್ವ.

ನಿಜ ಜೀವನದಲ್ಲಿ ಪ್ರಯಾಣ, ಸಾಹಸ ಮತ್ತು ವನ್ಯಜೀವಿ ಸೇರಿದಂತೆ ವ್ಯಾಪಕ ಶ್ರೇಣಿಯ ಹವ್ಯಾಸಗಳನ್ನು ಹೊಂದಿದ್ದ ನಟ ಪುನೀತ್ ರಾಜಕುಮಾರ್ ಅವರು ಗಂಧದಗುಡಿChildrens Loves Gandadagudi) ಸಿನಿಮಾ ಮುಖೇನ ತಮ್ಮ ಕನಸನ್ನು ಚಿತ್ರಿಸಿ, ಪರದೆಯ ಮೇಲೆ ಇಂದು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.

ಗಂಧದಗುಡಿ ಚಿತ್ರ ಅರಣ್ಯ ಸಂಪತ್ತು, ಸಕಲ ಜೀವರಾಶಿ, ಅರಣ್ಯ ಜೀವಸಂಕುಲಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ ಅದ್ಬುತ ಸಾಕ್ಷ್ಯಚಿತ್ರವಾಗಿದೆ.

ಪುನೀತ್ ರಾಜಕುಮಾರ್ ಅವರ ಕನಸಿನ ಚಿತ್ರವನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್(Ashwini Puneeth Rajkumar) ಅವರು ನಿರ್ಮಾಣ ಮಾಡಿದ್ದಾರೆ.

https://youtu.be/M991W7hqusw 2023 ಚುನಾವಣೆ ಹತ್ತಿರ ಬರ್ತಿದೆ ಈ ಬಗ್ಗೆ ನೀವೇನು ಹೇಳ್ತೀರಾ?

ಗಂಧದಗುಡಿ ಚಲನಚಿತ್ರವು ಇದೇ ಅಕ್ಟೋಬರ್ 28, 2022 ರಂದು ಪುನೀತ್ ರಾಜ್‌ಕುಮಾರ್ ಅವರ ನಿಧನದ ಮೊದಲ ಪುಣ್ಯಸ್ಮರಣೆ ದಿನದಂದೇ ಬಿಡುಗಡೆಗೊಳಿಸಲಾಯಿತು.

ಪುನೀತ್ ರಾಜಕುಮಾರ್ ಅವರು ತಮ್ಮ ಕನಸ್ಸಿನ ಚಿತ್ರವನ್ನು ಅವರ ನೆಚ್ಚಿನ, ಅಚ್ಚುಮೆಚ್ಚಿನ ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಪ್ರಕೃತಿಯ ಮೌಲ್ಯವನ್ನು ಚಿತ್ರದ ಮೂಲಕ ತಿಳಿಸಕೊಡಬೇಕು ಎಂಬುದು ಅವರ ದೊಡ್ಡ ಆಸೆಯಾಗಿತ್ತು.

ಇದನ್ನೂ ಓದಿ : https://vijayatimes.com/postpone-kantara-ott-release/

ಗಂಧದಗುಡಿ ಬಿಡುಗಡೆಗೊಂಡು ಇಂದು ಯಶಸ್ವಿಯಾಗಿ ಪ್ರತಿಯೊಬ್ಬರ ಮನ ಮುಟ್ಟುತ್ತಿದೆ ಹಾಗೂ ಶಾಲಾ ಮಕ್ಕಳನ್ನು ಆಕರ್ಷಿಸಿ, ಪ್ರಕೃತಿ ಮೌಲ್ಯವನ್ನು ಪಸರಿಸುವಲ್ಲಿ ಅಪ್ಪು ಅವರ ‘ಕನಸಿನ ಕುಡಿ’ ಈ ‘ಗಂಧದಗುಡಿ’ ಮೇಲುಗೈ ಸಾಧಿಸಿದೆ.

ಕಮರ್ಷಿಯಲ್ ಆಕರ್ಷಣೆಯ ಕೊರತೆಯ ನಡುವೆಯೂ ಚಿತ್ರಮಂದಿರವನ್ನು ಪ್ರೀತಿಯಿಂದ ಧಾರೆ ಎರೆದ ‘ಗಂಧದ ಗುಡಿ’ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಸದ್ಯ ವರದಿಗಳ ಪ್ರಕಾರ, ಚಿತ್ರವು ಆರಂಭದಲ್ಲಿ OTT ಬಿಡುಗಡೆಗೆ ಕೇಳಲಾಗಿತ್ತು, ಆದರೆ ಅಂತಿಮವಾಗಿ ಈ ಬಗ್ಗೆ ಕೆಲ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿತು.

ಇತ್ತೀಚಿಗೆ ಕೇಳಿಬಂದಿರುವ ಮಾಹಿತಿ ಅನುಸಾರ, ‘ಗಂಧದ ಗುಡಿ’ ಶೀಘ್ರದಲ್ಲೇ ಅಮೆಜಾನ್ ಪ್ರೈಮ್(Amazon Prime) ವೀಡಿಯೊದಲ್ಲಿ ಲಭ್ಯವಿರುತ್ತದೆ ಮತ್ತು ಅಭಿಮಾನಿಗಳು ಅದನ್ನು ವೀಕ್ಷಿಸಬಹುದು ಎಂಬ ಮಾಹಿತಿ.

ಇದನ್ನೂ ಓದಿ : https://vijayatimes.com/rashmika-wrote-deep-note/

ಆದಾಗ್ಯೂ, ಬಿಡುಗಡೆಯ ವಿಶೇಷತೆಗಳನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ನವೆಂಬರ್‌ನಲ್ಲಿ ಗಂಧದಗುಡಿ ಚಿತ್ರವು OTT ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದ್ರೆ ದಿನಾಂಕದ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ.

ಅಮೋಘವರ್ಷ ನಿರ್ದೇಶನದ 90 ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಅಮೋಘವರ್ಷ ಅವರು ಕರ್ನಾಟಕದ ಅಗಾಧವಾದ ಜೈವಿಕ ವೈವಿಧ್ಯತೆಯನ್ನು ಅನ್ವೇಷಿಸಿದ್ದಾರೆ.

ಕರ್ನಾಟಕ ರಾಜ್ಯದ ಅರಣ್ಯ ಸಂಪತ್ತು, ಜೀವ ವೈವಿಧ್ಯತೆ, ಆಗಾಧ ಜೀವರಾಶಿಯ ಮಹತ್ವ, ಅರಣ್ಯ ನಮಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಎಷ್ಟು ಮುಖ್ಯ? ಎಂಬ ಮಾಹಿತಿಯನ್ನು ಸರಳವಾಗಿ ತಿಳಿಸುಕೊಡುವಲ್ಲಿ ಅಪ್ಪು-ಅಮೋಘ ಸಂಗಮ ಯಶಸ್ವಿಯಾಗಿದೆ ಹಾಗೂ ಅದ್ಭುತವಾಗಿದೆ.

Exit mobile version