ಲಡಾಕ್‌ ಗಡಿಯಲ್ಲಿ(LAC) ಚೀನಾ ಯುದ್ದ ವಿಮಾನಗಳು ; ಭಾರತೀಯ ವಾಯಪಡೆಯಿಂದ ಪ್ರತ್ಯುತ್ತರ

China

ಲಡಾಕ್‌ : ಪೂರ್ವ ಲಡಾಕ್‌ಗಡಿಯ(LAC) ನೈಜ ನಿಯಂತ್ರಣ ಗಡಿರೇಖೆಯ ಸಮೀಪ ಚೀನಾದ ಯುದ್ದ ವಿಮಾನಗಳು ಕಾಣಿಸಿಕೊಂಡಿವೆ. ಕಳೆದ ಕೆಲವು ದಿನಗಳಿಂದ ಚೀನಾ(China) ತನ್ನ ವಾಯುಪಡೆಯನ್ನು ಈ ಭಾಗದಲ್ಲಿ ಹೆಚ್ಚು ಸಕ್ರಿಯಗೊಳಿಸಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಪೂರ್ವ ಲಡಾಕ್‌ನ ನೈಜ ನಿಯಂತ್ರಣ ಗಡಿ ರೇಖೆಯುದ್ದಕ್ಕೂ ಚೀನಾದ ಯುದ್ದ ವಿಮಾನಗಳು ತಾಲೀಮು ನಡೆಸುತ್ತಿವೆ. ಭಾರತದ ವಾಯು ಪ್ರದೇಶವನ್ನು ಉಲ್ಲಂಘಿಸುತ್ತಿವೆ. ಭಾರತೀಯ ಪಡೆಗಳು ಇದಕ್ಕೆ ಪ್ರತ್ಯುತ್ತರವಾಗಿ ನೈಜ ನಿಯಂತ್ರಣ ಗಡಿ ರೇಖೆಯುದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿವೆ. ಚೀನಾದ ಯಾವುದೇ ರೀತಿಯ ದಾಳಿಯನ್ನು ಎದುರಿಸಲು ಮತ್ತು ತುರ್ತು ಪ್ರತ್ಯುತ್ತರ ನೀಡಲು ಭಾರತೀಯ ವಾಯುಪಡೆ(Indian Airforce) ಸನ್ನದ್ದ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಈ ಕುರಿತು ದೆಹಲಿ ಮಟ್ಟದಲ್ಲಿ ಉನ್ನತ ಸಭೆಯನ್ನು ನಡೆಸಲಾಗಿದೆ.

ಚೀನಾ ಸೇನೆಗೆ ತಕ್ಕ ಪ್ರತ್ಯುತ್ತರ ನೀಡುವಂತೆ ದೆಹಲಿಯಿಂದ ಆದೇಶ ನೀಡಲಾಗಿದೆ ಎಂದು ಸೇನೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಚೀನಾ ವಾಯುಪಡೆ ಲಡಾಕ್‌ ಗಡಿಯಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಭಾರತೀಯ ಪಡೆಗಳನ್ನು ಪ್ರಚೋದಿಸುವ ದುಸ್ಸಾಹಸಕ್ಕೆ ಕೈಹಾಕುತ್ತಿದೆ. ಪದೇ ಪದೇ ಭಾರತದ ವಾಯು ಪ್ರದೇಶಕ್ಕೆ ನುಗ್ಗಲು ಚೀನಾದ ಯುದ್ದ ವಿಮಾನಗಳು ಪ್ರಯತ್ನಿಸುತ್ತಿರುವುದು ರಾಡಾರ್‌ಗಳಲ್ಲಿ ದಾಖಲಾಗಿದೆ. ಈ ಕುರಿತು ಚೀನಾ ಸೇನೆಯೊಂದಿಗೆ ಮಾತುಕತೆ ನಡೆಸಿರುವ ಭಾರತೀಯ ಅಧಿಕಾರಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಗಡಿಯಲ್ಲಿ ಭಾರತೀಯ ಪಡೆಗಳನ್ನು ನಿಮ್ಮ ಸೇನೆ ಪ್ರಚೋದಿಸುತ್ತಿದೆ. ಈ ರೀತಿಯ ಘಟನೆಗಳು ಸಂಘರ್ಷಕ್ಕೆ(Conflict) ಕಾರಣವಾಗುತ್ತವೆ. ಹೀಗಾಗಿ ತುರ್ತಾಗಿ ನಿಮ್ಮ ವಾಯುಪಡೆಗಳನ್ನು ಗಡಿ ಭಾಗದಿಂದ ಹಿಂದಕ್ಕೆ ತೆಗೆದುಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನು ೨೦೨೦ರ ಗಲ್ವಾನ್‌ ಕಣಿವೆಯ ಸಂಘರ್ಷದ ನಂತರ ಗಡಿ ಭಾಗದಲ್ಲಿ ಇಂದಿಗೂ ಉದ್ವೀಗ್ನತೆ ಮುಂದುವರೆದಿದೆ. ಈ ಕುರಿತು ಹಲವು ಬಾರಿ ಉನ್ನತ ಮಟ್ಟದ ಮಾತುಕತೆಗಳು ನಡೆದರು ಪ್ರಯೋಜನವಾಗಿಲ್ಲ. ಚೀನಾ ಸೇನೆ ಭಾರತೀಯ ಪಡೆಗಳನ್ನು ಪ್ರಚೋದಿಸುವ ಕೆಲಸ ಮುಂದುವರೆಸಿದೆ. ಈ ಕುರಿತು ಭಾರತ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.

Exit mobile version