ಚಿನ್ನಸ್ವಾಮಿ ಮೈದಾನ: 1200 ರೂ. ಐಪಿಎಲ್ ಟಿಕೆಟನ್ನು 8 ಸಾವಿರಕ್ಕೆ ಪೊಲೀಸರೇ ಮಾರುತ್ತಿದ್ದಾರೆ- ಅಭಿಮಾನಿಗಳ ಆಕ್ರೋಶ

Bengaluru : ಕ್ರಿಕೆಟ್ ಎಂದರೆ ವಿಪರೀತ ಕ್ರೇಜ್. ಯುವಕರು, ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಕೂಡ ಕ್ರಿಕೆಟ್ ಅನ್ನು ಪ್ರೀತಿಸುತ್ತಾರೆ. ಇತ್ತೀಚಿನ ಕೆಲವು ದಿನಗಳಿಂದ ಐಪಿಎಲ್ (IPL) ಸೀಸನ್ ಆರಂಭವಾಗಿದೆ. ಆದರೆ ಒಂದು ಸಮಸ್ಯೆ ಏನೆಂದರೆ ಚಿನ್ನಸ್ವಾಮಿ ಮೈದಾನದಲ್ಲಿ (Chinnaswamy Stadium) ಐಪಿಎಲ್ ಪಂದ್ಯಗಳ ಬಗ್ಗೆ ಈಗ ಸಾಕಷ್ಟು ಚರ್ಚೆ ನಡೆಯುತ್ತಿದೆ.

2023 ರ ಮೇ 21 ರಂದು ಆರ್‌ಸಿಬಿ (RCB) ಮತ್ತು ಗುಜರಾತ್ ಟೈಟಾನ್ಸ್ (Gujarat Titans) ನಡುವೆ ಐಪಿಎಲ್ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಿದ್ದರಿಂದ ಅಭಿಮಾನಿಗಳು ಕಾತರರಾಗಿದ್ದರು. ಆದರೆ ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸಲು ಟಿಕೆಟ್ ಸಿಗದ ಕಾರಣ ಅಭಿಮಾನಿಗಳು ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸೆಣಸುತ್ತಿವೆ. ಹುಬ್ಬಳ್ಳಿ, ಧಾರವಾಡ, ರಾಯಚೂರು ಸೇರಿದಂತೆ ಹಲವು ಕಡೆಯಿಂದ ಅಭಿಮಾನಿಗಳು ಬರುತ್ತಾರೆ. ಆದರೆ ಪಂದ್ಯ ವೀಕ್ಷಿಸಲು ಟಿಕೆಟ್ ಸಿಗಲಿಲ್ಲ. ಅನೇಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : https://vijayatimes.com/virat-kohli-records-in-ipl/

ಅಭಿಮಾನಿಗಳು ಹೇಳಿದ್ದೇನು? :

9 ಸಾವಿರ ಟಿಕೆಟ್‌ಗಳಿವೆ. ಆದರೆ ಇನ್ನೂ 100 ಟಿಕೆಟ್ ವಿತರಿಸಿಲ್ಲ. ಬೆಳಗ್ಗೆ 5 ಗಂಟೆಯಿಂದಲೇ ಟಿಕೆಟ್‌ಗಾಗಿ ಕಾಯುತ್ತಿದ್ದೇವೆ. 1,200 ರೂಪಾಯಿ ಮೌಲ್ಯದ ಟಿಕೆಟ್ 8,000 ರೂಪಾಯಿಗೆ ಮಾರಾಟವಾಯಿತು. ಈ ಟಿಕೆಟ್‌ಗಳನ್ನು ಪೊಲೀಸರೇ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ಮ್ಯಾನೆಜ್‌ಮೆಂಟ್ ಬಳಿ ಕೇಳಿದರೆ ಫ್ರಿಡಂ ಪಾರ್ಕ್‌ನಲ್ಲಿ (Freedom Park) ಕುಳಿತು ಪೈಟ್ ಮಾಡಿ ಇಲ್ಲವಾದರೆ ಪೊಲೀಸರ ಬಳಿ ದೂರು ನೀಡಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.ಕೋಲಾರ,ಹುಬ್ಬಳ್ಳಿ,ದಾವಣಗೆರೆ ಹೀಗೆ ಬೇರೆ ಬೇರೆ ಊರುಗಳಿಂದ ಟಿಕೆಟ್‌ಗಾಗಿ ಸರಿ ಸುಮಾರು 5000 ಜನರು ಕಾಯುತ್ತಿದ್ದೇವೆ ಆದರೆ ಟಿಕೆಟ್ ಸಿಗುತ್ತಿಲ್ಲ.

ಒಟ್ಟು 40 ಸಾವಿರ ಆಸನಗಳು ಕ್ರೀಡಾಂಗಣದಲ್ಲಿ ಇವೆ ಆದರೆ ಕೇವಲ 150 ಟಿಕೆಟ್ ಮಾತ್ರ ಕೊಟ್ಟಿದ್ದಾರೆ. ಉಳಿದ ಟಿಕೆಟ್‌ಗಳನ್ನು ಯಾಕೆ ಕೊಡುತ್ತಿಲ್ಲ ಎಂದು ಈ ಕುರಿತಾಗಿ ಪ್ರಶ್ನೆ ಮಾಡಿದರೂ ಯಾರು ಕೂಡ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.

Exit mobile version