ಚಿಪ್ಸ್ ರಹಸ್ಯ! ಮಕ್ಕಳ ಚಿಪ್ಸ್‌ ತಿನ್ನೋ ಹುಚ್ಚಿಗೆ ಬ್ರೇಕ್ ಹಾಕಿ.

ಪೋಷಕರೇ ನಿಮ್ಮ ಮಕ್ಕಳು ಚಿಪ್ಸ್‌ ಪ್ರಿಯರಾ? ಇವತ್ತೇ ಮಕ್ಕಳ ಚಿಪ್ಸ್‌(Chips are dangerous) ಚಟಕ್ಕೆ ಬ್ರೇಕ್‌ ಹಾಕಿ. ನಾವು ಇಷ್ಟಪಟ್ಟು ತಿನ್ನೋ ಚಿಪ್ಸ್‌ ಕ್ಯಾನ್ಸರ್‌ ತರುವಷ್ಟರ ಮಟ್ಟಿಗೆ ಅಪಾಯಕಾರಿಯಾಗಿದೆ .ಆಲೂಗಡ್ಡೆಯ ಚಿಪ್ಸ್‌ ನಾನಾ ರೂಪ, ರುಚಿ, ಬಣ್ಣಗಳಲ್ಲಿ ಮಾರುಕಟ್ಟೆಗೆ ಬಂದಿವೆ.

ದೊಡ್ಡ ದೊಡ್ಡ ಕಂಪೆನಿಗಳು ಬಣ್ಣ ಬಣ್ಣದ ಜಾಹೀರಾತು(Advertisement) ಕೊಟ್ಟು ಗ್ರಾಹಕರನ್ನು ಮರಳು ಮಾಡುತ್ತಿದ್ದಾರೆ. ಕಲರ್‌ ಕಲರ್ ಪ್ಯಾಕೇಟ್‌ಗಳಲ್ಲಿ ಚಿಪ್ಸ್‌ ಮಾರಿ ಮಕ್ಕಳಿಗೆ ಮೋಡಿ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಪ್ಸೇ ಮಕ್ಕಳ ಪ್ರಮುಖ ಡಯಟ್‌ ಆಗಿದೆ.

ಚಿಪ್ಸ್‌ಗೆ ಹಾಕ್ತಾರೆ ಡೆಡ್ಲಿ ಕೆಮಿಕಲ್‌:

ಪ್ಯಾಕೇಟ್‌ ಚಿಪ್ಸ್‌ನ ಬಣ್ಣ ಹಾಗೂ ರುಚಿಯನ್ನು ಕಾಪಾಡಿಕೊಳ್ಳಲು ಸೋಡಿಯಂ ಬೆಂಸೈಟ್(Sodium Benzite) ಎನ್ನುವ ರಾಸಾಯನವನ್ನು  ಉಪಯೋಗಿಸಲಾಗುತ್ತದೆ. 

ಈ  ರಾಸಾಯನವನ್ನು ಹೆಚ್ಚಿನ ಟಾಯ್ಲೆಟ್  ಕ್ಲೀನರ್(Toilet cleaner) ಗಳಲ್ಲಿ  ಉಪಯೋಗಿಸಲಾಗುತ್ತದೆ. ಚಿಪ್ಸಿಗೂ ಇದನ್ನು ಸಿಂಪಡಿಕೆ ಮಾಡ್ತಾರೆ.

https://vijayatimes.com/lord-siddeshwar-is-immortal/

ಆದ್ರೆ ಈ ಕೆಮಿಕಲ್‌ ಆಲೂಗೆಡ್ಡೆ ಚಿಪ್ಸ್ ನಲ್ಲಿರುವ ಅತ್ಯಧಿಕ ಪ್ರಮಾಣದ ವಿಟಮಿನ್ ಬಿ12(Vitamin B12) ಸೋಡಿಯಂ ಬೆಂಸೈಟ್ ಜೊತೆಗೆ ಸೇರಿಕೊಂಡು ಪ್ರಾಣಕ್ಕೆ ಹಾನಿಯನ್ನು  ಉಂಟುಮಾಡಬಹುದು.

ರಕ್ತದೊತ್ತಡ ಹೆಚ್ಚಿಸುತ್ತದೆ:

ಇನ್ನು ಅತಿಯಾದ ಚಿಪ್ಸ್ ಸೇವನೆಯಿಂದ ರಕ್ತದೊತ್ತಡ ಕಾಯಿಲೆ(Blood pressure) ಹೆಚ್ಚಾಗುತ್ತದೆ. ಏಕೆಂದರೆ ಚಿಪ್ಸ್ ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಡಿಯಂ(Chips are dangerous) ಬಳಸಲಾಗುತ್ತೆ.

ಇಷ್ಟೊಂದು ಪ್ರಮಾಣದಲ್ಲಿ ಸೋಡಿಯಂ ಇರುವ ಚಿಪ್ಸನ್ನು ನಿರಂತರವಾಗಿ ತಿಂದರೆ ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತವೇ ಸಂಭವಿಸಬಹುದು. 

ಕ್ಯಾನ್ಸರ್‌ಗೆ ಕಾರಣವಾಗಬಹುದು:

ಇನ್ನು ಇಷ್ಟದ ಚಿಪ್ಸ್, ಕುರ್ಕುರೆ(Kurkure) ಐಟಂ ಕ್ಯಾನ್ಸರ್(Cancer) ಅಪಾಯವನ್ನು ಹೆಚ್ಚಿಸುತ್ತೆ . ಅಮೆರಿಕನ್ ಕ್ಯಾನ್ಸರ್ ಅಸೋಸಿಯೇಷನ್(American cancel association) ಹೇಳುವ ಪ್ರಕಾರ ಈ ಸಂಸ್ಕರಿಸಿದ ಆಹಾರಗಳಲ್ಲಿ  ಅಕ್ರಿಲಾಮೈಡ್ ಎಂಬ ರಾಸಾಯನಿಕ ಇರುತ್ತೆ. ಇದು ಕ್ಯಾನ್ಸರ್ ಕಾರಕ ಗುಣಗಳನ್ನು ಹೊಂದಿದೆ.

ಅಷ್ಟೇ  ಅಲ್ಲದೆ  ಸಿಗರೇಟ್(Cigarette) ನಲ್ಲಿ ಬಳಸುವ ಕಾರ್ಸೋಜನಿಕ್ ರಾಸಾಯನಿಕವನ್ನೂ ಈ ಚಿಪ್ಸ್ ತಯಾರಿಕೆಯಲ್ಲಿ ಬಳಸಲಾಗುತ್ತೆ. ಹಾಗಾಗಿ ನಿರಂತರವಾಗಿ ಚಿಪ್ಸ್‌ ತಿನ್ನೋದು ಕ್ಯಾನ್ಸರ್‌ಗೆ ಆಹ್ವಾನ ಕೊಟ್ಟಂತೆ.

ಹೃದ್ರೋಗ ಪಕ್ಕಾ :

ಇನ್ನು ಸಂಸ್ಕರಿಸಿದ ಆಹಾರದಲ್ಲಿ ಬಳಸುವ ಕೊಬ್ಬಿನಂಶವು ನಮ್ಮ ಹೃದಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್(National library of medicine) 2009ರ  ಅಧ್ಯಾಯನದ ಪ್ರಕಾರ   ಚಿಪ್ಸ್ ತಯಾರಿಕೆಯಲ್ಲಿ ಬಳಸುವ   ಅಕ್ರಿಲಾಮೈಡ್  ಹೃದಯದ ಮೇಲೆ ನೇರ ಪ್ರಭಾವ  ಬೀರುತ್ತದೆ

ಸ್ಟ್ರೋಕ್ ಕಾಡಬಹುದು:

ಇನ್ನು ಮಯೋ ಕ್ಲಿನಿಕ್ ಹೇಳುವ ಪ್ರಕಾರ ಈ ಸಂಸ್ಕರಿಸಿದ ಆಹಾರದಲ್ಲಿ ಅತಿ ಹೆಚ್ಚಾಗಿ ಕೊಬ್ಬಿನಂಶ ಇರುತ್ತದೆ. ಈ ಕೊಬ್ಬಿನಂಶ ನಮ್ಮ ರಕ್ತದೊಳಗೆ  ಸೇರಿ ನಮ್ಮ ಹೃದಯ ನಾಳಗಳನ್ನು  ಬ್ಲಾಕ್ ಮಾಡುತ್ತವೆ. 

ಇದರಿಂದ ಸ್ಟ್ರೋಕ್ (Stroke)ಅಂದ್ರೆ ಪಾರ್ಶ್ವವಾಯು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಹಿಳೆಯರಲ್ಲಿ ಬಂಜೆತನ:

ಇವಿಷ್ಟೇ ಅಲ್ಲದೆ ಈ ಚಿಪ್ಸ್ ತಯಾರಿಕೆಯಲ್ಲಿ ಟ್ರಾನ್ಸ್‌ ಫ್ಯಾಟ್ ಅಂಶವನ್ನು ಬಳಸಲಾಗುತ್ತದೆ. ಇದು ನಮ್ಮಲ್ಲಿ ಬೊಜ್ಜಿನ ಸಮಸ್ಯೆಯನ್ನು ಸೃಷ್ಟಿಸುತ್ತೆ.

ಈ ಟ್ರಾನ್ಸ್ಪಾರ್ಟ್ ಮಹಿಳೆಯರಿಗೆ ಬಹಳ ಅಪಾಯಕಾರಿ. ಮಹಿಳೆಯರು ಇದನ್ನು ಯಥೇಚ್ಛವಾಗಿ ಸೇವಿಸಿದರೆ  ಬಂಜೆತನದ ಸಮಸ್ಯೆ ಕಾಡಬಹುದು ಎಂದು ಹಾರ್ವರ್ಡ್  ಮೆಡಿಕಲ್(Harward medical) ಸಂಶೋಧನೆ ತಿಳಿಸಿದೆ.

https://youtu.be/TX7v11MgGgo

ನಾವು ಸಾಮಾನ್ಯವಾಗಿ ತಿನ್ನುವ ಒಂದು ಚಿಪ್ಸ್ ಪ್ಯಾಕೆಟ್ ಇಷ್ಟೆಲ್ಲಾ ರಾಸಾಯನಿಕ ಅಪಾಯಕಾರಿ ಅಂಶಗಳನ್ನು ಹೊಂದಿವೆ. ಹಾಗಾಗಿ ನಿಮ್ಮ ಮಕ್ಕಳಿಗೆ ನೀವು ಪ್ರೀತಿಯಿಂದ ಇದನ್ನು ತಿನ್ನಿಸುತ್ತಿದ್ದರೆ ಇವತ್ತೆ ನಿಲ್ಲಿಸಿ.

ಬೇಕಾದ್ರೆ ನೀವೇ ಮನೆಯಲ್ಲಿ ಗುಣಮಟ್ಟದ ಎಣ್ಣೆ ಬಳಸಿ ಚಿಪ್ಸ್‌ ತಯಾರಿಸಿ ತಿನ್ನಿಸಿ. ಮಕ್ಕಳನ್ನು ರೋಗದಿಂದ ಕಾಪಾಡಿ.

Exit mobile version