ಪ್ರೀತಿಯಲ್ಲಿ ಬಿದ್ದಾಗ, ಚಾಕಲೇಟ್ ತಿಂದಾಗ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಒಂದೇ! ; ಇಲ್ಲಿದೆ ಅಚ್ಚರಿ ಮಾಹಿತಿ

Chacolate

ಸದಾ ಸಂತೋಷವಾಗಿರಬೇಕು (happy)ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ? ಆದರೆ, ಅದಕ್ಕಾಗಿ ಪ್ರಯತ್ನ ಪಡಬೇಕು ಎಂಬುದು ಮಾತ್ರ ಹಲವರಿಗೆ ಇಷ್ಟವಾಗದ ಸಂಗತಿ. ಸಂತೋಷವಾಗಿರುವುದೂ ಒಂದು ಕಲೆ- ಅದನ್ನು ಕರಗತ ಮಾಡಿಕೊಳ್ಳಬೇಕು.

ಅಭ್ಯಾಸದಿಂದ ಎಂಥ ಸಂದರ್ಭಗಳಲ್ಲೂ ಸಂತೋಷವಾಗಿರುವುದನ್ನು ರೂಢಿಸಿಕೊಳ್ಳಬಹುದು. ನಾವು ಸಂತೋಷವಾಗಿರಲು ನಮ್ಮ ಮನಸ್ಸು ಮತ್ತು ಮೆದುಳು ಕೂಡ ಸಂತೋಷವಾಗಿರಬೇಕು. ಇದಕ್ಕೆ ಡೋಪಮೈನ್(Dopamine) ಎಂಬ ಹಾರ್ಮೋನ್(Harmone) ಅಗತ್ಯವಿದೆ,

ಡೋಪಮೈನ್ ಇದ್ರೆ ನಾವು ಯಾವಾಗಲೂ ಖುಷಿಯಾಗಿರುತ್ತೇವೆ. ದೇಹದಲ್ಲಿ ಡೋಪಮೈನ್ ಕೊರತೆಯಾದ್ರೆ, ಖಿನ್ನತೆ, ಪಾರ್ಕಿನ್ಸನ್ ಕಾಯಿಲೆ ಮತ್ತು ಏಕಾಗ್ರತೆಯ ಕೊರತೆ ಮತ್ತು ಕ್ರಿಯಾತ್ಮಕ ಅಸ್ವಸ್ಥತೆ (ಎಡಿಎಚ್ಡಿ) ಸೇರಿದಂತೆ ಹಲವಾರು ವೈದ್ಯಕೀಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ : https://vijayatimes.com/supremecourt-to-hear-bilkis-bano-case/


ಕೆಲವೊಮ್ಮೆ ಮನಸ್ಸು ಏನೂ ಕಾರಣ ಇಲ್ಲದೇನೆ ಗೊಂದಲದ ಗೂಡಾಗುತ್ತದೆ. ಏನೂ ಇಲ್ಲದೇನೆ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ, ಅಲ್ಲದೆ ಜೋರಾಗಿ ಅತ್ತು ಬಿಡಬೇಕು ಎಂದು ಮನಸ್ಸು ಬಾರಿ ಬಾರಿ ಹೇಳುತ್ತದೆ. ನಿಮ್ಮ ಜೀವನದಲ್ಲೂ ಇದು ಒಂದಲ್ಲ ಒಂದು ಬಾರಿ ಸಂಭವಿಸಿರಬೇಕು ಅಲ್ವಾ? ಆದರೆ ಇದಕ್ಕೆ ಯಾವುದೇ ಗಂಭೀರ ಕಾರಣ ಇರುವುದಿಲ್ಲ.

ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದು ಡೋಪಮೈನ್ ಎಂಬ ಹಾರ್ಮೋನ್ನ ಕೊರತೆಯಿಂದ ಉಂಟಾಗುತ್ತದೆ. ಹಾಗಾದ್ರೆ ಡೊಪಮೈನ್ ಹೆಚ್ಚಿಸಲು ಏನು ಮಾಡಬೇಕು ಎಂದು ನೋಡೋಣ. ಹಲವಾರು ಅಧ್ಯಯನಗಳ ಪ್ರಕಾರ ಪ್ರೀತಿಯ ಅಮಲು ಎನ್ನುವುದು ಕೋಕೇನ್ ಚಟದಿಂದ ಮೆದುಳಿನ ಮೇಲೆ ಬೀರುವ ಪರಿಣಾಮದಷ್ಟೇ ಪ್ರಭಾವಶಾಲಿಯಾಗಿರುತ್ತದೆ.

ಪ್ರೀತಿಯಲ್ಲಿ ಬಿದ್ದಾಗ ದೇಹದಲ್ಲಿ ಕೂಡ ಹಲವಾರು ರೀತಿಯ ಬದಲಾವಣೆಗಳು (Chocolate) ಉಂಟಾಗುತ್ತವೆ. ಪ್ರೀತಿಯಲ್ಲಿ ಬಿದ್ದಾಗ, ದೇಹದಲ್ಲಿ ಆಕ್ಸಿಟಾಸಿನ್ ಎನ್ನುವ ಸಂತಸದ ಹಾರ್ಮೋನು, ಅಡ್ರೆನಲೈನ್ ಎನ್ನುವ ಉತ್ಸಾಹ ಮತ್ತು ವಸ್ಪೊರೆಸ್ಸಿನ್ ಎನ್ನುವ ಟೆರಿಟೋರಿಯನ್ ಹಾರ್ಮೋನ್ ನ್ನು ಬಿಡುಗಡೆ ಮಾಡುವುದು. ಇವೆಲ್ಲವೂ ಪ್ರೀತಿಯ ಭಾವನೆಯ ಮಿಶ್ರಣವಾಗಿದೆ. ಹಾಗಾಗಿ ಪ್ರೀತಿಯಲ್ಲಿ ಬಿದ್ದ ವ್ಯಕ್ತಿಗಳು ಖುಷಿಯಾಗಿರುತ್ತಾರೆ.


ಅದೇ ರೀತಿ, ಚಾಕೊಲೇಟ್ ಕೂಡ ಸಣ್ಣ ಪ್ರಮಾಣದ ಫಿನೈಲ್ಥೈಲಮೈನ್ ಅನ್ನು ಹೊಂದಿರುತ್ತದೆ. ಇದು ಡೋಪಮೈನ್ ಬಿಡುಗಡೆ ಮಾಡುವ ಮೂಲಕ ನಮ್ಮ ಮೆದುಳಿನ ಜೀವಕೋಶಗಳನ್ನು ಸಂಕೇತಿಸುತ್ತದೆ. ಡಾರ್ಕ್ ಚಾಕೊಲೇಟ್ ತಿಂದ ನಂತರ ಡೋಪಮೈನ್ ಬಿಡುಗಡೆಯಾಗುತ್ತದೆ. ಇದರ ಜೊತೆ ಜೊತೆಗೆ ಮೂಡ್ ಕೂಡ ಚೆನ್ನಾಗಿರುತ್ತೆ.

Exit mobile version