40% ಕಮಿಷನ್ ಬಗ್ಗೆ ಕಾಂಗ್ರೆಸ್ ಬಳಿ ಸಾಕ್ಷ್ಯಾಧಾರಗಳಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು : ಅಮಿತ್ ಶಾ

Bengaluru : ಬಿಜೆಪಿ (BJP) 40% ಕಮಿಷನ್ ಸರ್ಕಾರ ಎಂದು ಆರೋಪಿಸಿದ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆಗೆ, ಕಾಂಗ್ರೆಸ್‌ ಬಳಿ ಸಾಕ್ಷ್ಯಾಧಾರಗಳಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು (Clarification on 40% commission) ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಬಿಜೆಪಿ 40% ಕಮಿಷನ್ ತೆಗೆದುಕೊಂಡು ಗೋವಾ, ಮ.ಪ್ರದೇಶ, ಕರ್ನಾಟಕ ಮತ್ತು ಈಶಾನ್ಯ ಶಾಸಕರನ್ನು ಕೊಂಡುಕೊಳ್ಳಲು ಹಣವನ್ನು ಬಳಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಸವರಾಜ ಬೊಮ್ಮಾಯಿ (Basavaraja Bommai) ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪದ ಬಗ್ಗೆ

ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ತಿರುಗೇಟು ನೀಡಿದ್ದು,

ಕಾಂಗ್ರೆಸ್ ಬಳಿ ಸಾಕ್ಷ್ಯಾಧಾರಗಳಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿದರು. ಕಾಂಗ್ರೆಸ್ಸಿಗರು

ಅದರ ಬಗ್ಗೆ ಮಾತನಾಡಬಹುದು ಮತ್ತು ಅವರು ಸೂಕ್ತ ಸಾಕ್ಷ್ಯವನ್ನು ಹೊಂದಿದ್ದರೆ ನ್ಯಾಯಾಲಯಕ್ಕೆ ಹೋಗಬೇಕು.

ಯಾವುದೇ ತನಿಖೆಯೂ ಇಲ್ಲ ಅಥವಾ ಯಾವುದೇ ಪ್ರಕರಣವೂ ಇಲ್ಲ! ಇಂತಹ ಆಧಾರರಹಿತ ಆರೋಪಗಳನ್ನು ಜನರು ಹೇಗೆ ನಂಬುತ್ತಾರೆ?

ಇದನ್ನೂ ಓದಿ : https://vijayatimes.com/rejection-of-nomination-papers/

ಕರ್ನಾಟಕದಲ್ಲಿ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ರೋಡ್ ಶೋವನ್ನು (Clarification on 40% commission) ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು.

ಭಾನುವಾರ ರಾಜ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ (BJP Govt) 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತದೆ ಎಂದು ಆರೋಪಿಸಿದ್ದರು.

ಬಿಜೆಪಿ ಸರ್ಕಾರವು ಭಾರತದಲ್ಲಿ ಅತ್ಯಂತ ಭ್ರಷ್ಟವಾಗಿದೆ, ಅವರು 40% ಕಮಿಷನ್ ತೆಗೆದುಕೊಳ್ಳುತ್ತಾರೆ. ಅದೇ ಹಣವನ್ನು ಹಿಂದಿನ ಸರ್ಕಾರದ ಶಾಸಕರನ್ನು ಕೊಂಡುಕೊಳ್ಳಲು ಬಳಸಲಾಗುತ್ತಿತ್ತು.

ಗೋವಾ, ಮ.ಪ್ರದೇಶ, ಕರ್ನಾಟಕ, ಈಶಾನ್ಯ ಶಾಸಕರನ್ನು ಖರೀದಿಸಲು ಬಳಸಿದ ಹಣದ ಮೂಲವನ್ನು ಪ್ರಧಾನಿ ತಿಳಿಸುವರೇ ಎಂದು ವಿಜಯಪುರದಲ್ಲಿ ಹೇಳಿದ್ದರು.

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ವೇದಿಕೆಯಲ್ಲಿ ಮಾತನಾಡುವಾಗ ಘಟುಧ್ವನಿಯಲ್ಲಿ ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ 150 ಸ್ಥಾನಗಳೊಂದಿಗೆ ಸರ್ಕಾರ ರಚಿಸುತ್ತದೆ ಮತ್ತು ಬಿಜೆಪಿಯ 40 ಪರ್ಸೆಂಟ್ ಕಮಿಷನ್

ಸರ್ಕಾರವು 40 ಸ್ಥಾನಗಳಿಗೆ ಇಳಿಯುತ್ತದೆ ಎಂದು ರಾಹುಲ್ ಗಾಂಧಿ ಬಿಜೆಪಿಯನ್ನು ಅಪಹಾಸ್ಯ ಮಾಡಿದರು.

2022 ರಲ್ಲಿ ಬೆಳಗಾವಿ (Belagavi) ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿನ ನಂತರ ವಿವಾದವೊಂದು ಭುಗಿಲೆದ್ದಿತು.

ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಸರ್ಕಾರಿ ಯೋಜನೆಗೆ ಶೇ. 40% ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರ ಆರೋಪಿಸಿದ್ದರು. ಪಾಟೀಲ್ ಅವರ ಹೇಳಿಕೆಯ ನಂತರ,

ಇದನ್ನೂ ಓದಿ : https://vijayatimes.com/i-am-not-anti-hindu/

ಹಲವಾರು ಗುತ್ತಿಗೆದಾರರು ಸರ್ಕಾರಿ ಅಧಿಕಾರಿಗಳ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಲು ಮುಂದಾದರು. ತದನಂತರ ಬಿಜೆಪಿ ವಿರುದ್ಧ ಕೇಳಿ ಬಂದ ಪಿ.ಎಸ್ಐ ಅಕ್ರಮ ಸೇರಿದಂತೆ ಕೆಲವು ಅಕ್ರಮಗಳನ್ನು ಎತ್ತಿಹಿಡಿದು ಕಾಂಗ್ರೆಸ್, ಬಿಜೆಪಿಯನ್ನು 40% ಸರ್ಕಾರ ಎಂದು ಗೇಲಿ ಮಾಡಲು ಪ್ರಾರಂಭಿಸಿದೆ.

Exit mobile version