ಸಿದ್ದರಾಮಯ್ಯ ಪಕ್ಕದಲ್ಲೇ ಕಮೀಷನ್ ವ್ಯವಹಾರ ಮಾಡ್ತಿದ್ರು : ಸಿ.ಎಂ ಇಬ್ರಾಹಿಂ!

POLITICAL

ಭ್ರಷ್ಟಾಚಾರ(Corruption) ಎಂಬುದು ಯಾವ ಸರ್ಕಾರವನ್ನು ಬಿಟ್ಟಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ(Congress Government) ಇದ್ದಾಗಲೂ ಕಮೀಷನ್(Commission) ವ್ಯವಹಾರ ನಡೆಯುತ್ತಾ ಇತ್ತು.

ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿಯಾಗಿದ್ದಾಗ ಅವರ ಪಕ್ಕದಲ್ಲೇ ಪರ್ಸೇಂಟೇಜ್ ವ್ಯವಹಾರ ಮಾಡ್ತಿದ್ರು. ಅದಕ್ಕೆ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್(JDS) ಪಕ್ಷಕ್ಕೆ ಬಂದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಕೋಲಾರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಈಗ ನಾಕಾ-ನೀಕಾ ಎಂದು ಕಿತ್ತಾಟ ಶುರುವಾಗಿದೆ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಅಧಿಕಾರಕ್ಕಾಗಿ ಈಗಲೇ ಸಂಘರ್ಷ ಶುರುವಾಗಿದೆ.

ನಮ್ಮ ದೇವೇಗೌಡರಿಗೆ ರಾಜ್ಯದ ರೈತರ ಚಿಂತೆಯಾದರೆ ಕಾಂಗ್ರೆಸ್‍ನವರಿಗೆ ಕುರ್ಚಿಯದ್ದೇ ಚಿಂತೆಯಾಗಿದೆ. ಇನ್ನು ಎಚ್.ಡಿ ದೇವೇಗೌಡರು ಸಿಂಪಲ್ ಮನುಷ್ಯ ಎರಡು ಪಂಚೆ ಎರಡು ಜುಬ್ಬಾ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಸಿಂಪಲ್ ಮನುಷ್ಯನಿಗೆ ಮತ ನೀಡಬೇಕು. ಆ ಮೂಲಕ ಪ್ರಾದೇಶಿಕ ಶಕ್ತಿಯನ್ನು ಬಲಗೊಳಿಸಬೇಕು ಎಂದು ಹೇಳಿದರು. ಇನ್ನು ಶಾಂಗ್ರೆಸ್ ಶಾಸಕ ರಮೇಶ್ ಕುಮಾರ ಕುರಿತು ಪ್ರತಿಕ್ರಿಯೆ ನೀಡಿ, ಆತ ಅತ್ತ ಗಂಡಸರ ಲೆಕ್ಕ ಹಾಕಿದರು ಬರುತ್ತಾನೆ, ಇತ್ತ ಹೆಂಗಸರ ಲೆಕ್ಕ ಹಾಕಿದರು ಬರುತ್ತಾನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಮೇಶ್ ಕುಮಾರ್ ಅವರನ್ನು ನಪುಂಸಕ ಎಂದು ಟೀಕಿಸಿದರು.

ಇನ್ನು ಸಿಎಂ ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾದ ನಂತರ ಜೆಡಿಎಸ್ ಸರಣಿ ಸಮಾವೇಶಗಳನ್ನು ನಡೆಸುತ್ತಿದ್ದು, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ‘ಜನತಾ ಜಲಧಾರೆ’ ಎನ್ನುವ ಸಮಾವೇಶವನ್ನು ಇತ್ತೀಚೆಗೆ ಹಾಸನದಲ್ಲಿ ನಡೆಸಿ ಬೃಹತ್ ಶಕ್ತಿ ಪ್ರದರ್ಶನವನ್ನು ದಳಪತಿಗಳು ಮಾಡಿದ್ದರು. ಒಕ್ಕಲಿಗ-ಅಲ್ಪಸಂಖ್ಯಾತ-ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಈ ಬಾರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗಿಂತ ಮುಂಚಿತವಾಗಿಯೇ ಚುನಾವಣೆ ತಯಾರಿ ಪ್ರಾರಂಭಿಸಿದೆ.

Exit mobile version