ಕೋವಿಡ್ ಪ್ರಕರಣ: ರಾಜ್ಯದಲ್ಲಿ ಆಕ್ಸಿಜನ್, ವೆಂಟಿಲೇಟರ್ ಕೊರತೆಯಾಗದಂತೆ ನೋಡಿಕೊಳ್ಳಲು ಸಿಎಂ ಸೂಚನೆ

Bengaluru: ರಾಜ್ಯದಲ್ಲಿ ಕೋವಿಡ್ (Covid) ಆತಂಕ ಹೆಚ್ಚಾಗುತ್ತಿದ್ದು, ಮುಂಜಾಗ್ರತಾ ಕ್ರಮಗಳ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಈಗಲೇ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎನ್ನುವ ಸಲಹೆ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರಿಂದ ಬಂದಿದೆ. ಪ್ರತಿದಿತ ಐದು ಸಾವಿರ ಟೆಸ್ಟಿಂಗ್ ‌ಮಾಡಲು‌ ಸೂಚನೆ ನೀಡಲಾಗಿದೆ’ ಎಂದರು.

‘ಕೋವಿಡ್ ಪ್ರಕರಣಗಳ ಸಂಖ್ಯೆ‌ ಏರಿಕೆ ಹಿನ್ನಲೆಯಲ್ಲಿ ಇಂದು (ಡಿ.21) ಆರೋಗ್ಯ ಸಚಿವರು, ಡಿಸಿಎಂ ಹಾಗೂ ಗೃಹ ಸಚಿವರು ಮತ್ತು ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆಗೆ ಸಭೆ ನಡೆಸಿದ್ದು, ಕರ್ನಾಟಕದಲ್ಲಿ (Karnataka) ಕೋವಿಡ್ ಪಾಸಿಟಿವ್ ಇದ್ದ ಮೂರು ಜನರು ಮೃತಪಟ್ಟಿದ್ದಾರೆ. ಆದರೆ ಅವರಿಗೆ ‌ಬೇರೆ ಕಾಯಿಲೆಗಳು ಇದ್ದವು. ಕೋವಿಡ್ ನಿಂದಲೇ ಮೃತಪಟ್ಟರು ಎಂದು ಹೇಳಲು ಆಗಲ್ಲ’ ಎಂದು ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸಭೆಯ ಸಾರಾಂಶವನ್ನು ತಿಳಿಸಿದರು.

ಹಿಂದೆ ಆದ ತಪ್ಪುಗಳು ಮರುಕಳಿಸಬಾರದು. ಆಕ್ಸಿಜನ್ ಕೊರತೆ, ಬೆಡ್ ಕೊರತೆ, ಔಷಧಿ ಸಮಸ್ಯೆ (Lack of oxygen, lack of bed, medicine problem)ಗಳು ಮರುಕಳಿಸಬಾರದು. ಬೇರೆ ಕಾಯಿಲೆಗಳನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ಕೊಡಬೇಕು. ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ಜೆಎನ್.1 (JN.1) ಉಪತಳಿ ಕರ್ನಾಟಕದಲ್ಲಿ 92 ಪಾಸಿಟಿವ್ ಇದ್ದು, ಬೆಂಗಳೂರಿನಲ್ಲಿ (Bengaluru) 80 ಪ್ರಕರಣಗಳು ಇವೆ. ಈ ಪೈಕಿ 72 ಮಂದಿ ಕ್ವಾರಂಟೈನ್ , 20 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಏಳು ಜನ ಐಸಿಯು ನಲ್ಲಿ ಇದ್ದಾರೆ. ಬೇರೆ ರೋಗದ ಜೊತೆಗೆ ಕೋವಿಡ್ ಕೂಡಾ‌ ಇದೆ ಇವರಿಗೆ ಎಂದು ವಿವರಿಸಿದರು. ಕ್ಯಾಬಿನೆಟ್ (Cabinet) ‌ಉಪ ಸಮಿತಿ ರಚನೆ ಮಾಡಲಾಗಿದೆ.

ಒಂದು ವೇಳೆ ಲಸಿಕೆ ‌ಅಗತ್ಯ‌ವಿದ್ದರೆ ಅದನ್ನು ಪ್ರಾರಂಭ ಮಾಡಬೇಕು. ಯಾರು‌ ತೆಗೆದುಕೊಂಡಿಲ್ಲ‌ ಅವರಿಗೆ ಲಸಿಕೆ ನೀಡಬೇಕು. ಈ ಸಮಿತಿ ನಿರಂತರವಾಗಿ ಸಭೆ ನಡೆಸಬೇಕು. ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನು ಕ್ಯಾಬಿನೆಟ್ ಉಪ ಸಮಿತಿ ತೀರ್ಮಾನ ಮಾಡಬೇಕು. ಅದಷ್ಟೇ ಅಲ್ಲದೆ ಗಡಿ ಭಾಗದಲ್ಲಿ ಹೆಚ್ಚು ತಪಾಸಣೆ ‌ಮಾಡಬೇಕು.

ಆದರೆ ಯಾರೂ ಭಯ, ಆತಂಕ ಪಡಬೇಕಾದ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ಕ್ರಮ ಅನುಸರಿಸಬೇಕು ಎಂದರು. ಜನಸಂದಣಿ ಇರುವ ಕಡೆ ಜನರು ಮಾಸ್ಕ್ (Mask) ಧರಿಸಬೇಕು ಹಾಗೂ 60 ವರ್ಷ ಮೇಲ್ಪಟ್ಟವರು ಕಡ್ಡಾಯ ಮಾಸ್ಕ್ ಧರಿಸಬೇಕು ಎಂದರು. ಬೆಂಗಳೂರು (Bengaluru) ಸರ್ಕಾರಿ‌ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಆಕ್ಸಿಜನ್, ವೆಂಟಿಲೇಟರ್ (Ventilator), ಬೆಡ್ ಮುಂಚಿತವಾಗಿ ತಯಾರಿ ಮಾಡಿಕೊಳ್ಳಬೇಕು ಎಂದು‌ ಸೂಚನೆ ನೀಡಲಾಗಿದ್ದು, ಹೊಸ ವರ್ಷಾಚರಣೆಗೆ ಪ್ರತ್ಯೇಕ ರೂಲ್ಸ್ ಇಲ್ಲ. ಹೊಸ ವರ್ಷಾಚರಣೆ ಮಾಡಲು‌ ಹೋಗುವವರು ಮಾಸ್ಕ್ ಧರಿಸಬೇಕು ಎಂದರು.

ಭವ್ಯಶ್ರೀ ಆರ್ ಜೆ

Exit mobile version